ಖಾಲಿ ಹುದ್ದೆ ನೇಮಕಾತಿಗೆ ಕೇಂದ್ರ ಮೌನ

ನವದೆಹಲಿ,ಜು.೨೭- ದೇಶದಲ್ಲಿ ೨೦೨೨ ರ ಮಾರ್ಚ್ ವರೆಗೆ ಸರ್ಕಾರದ ವಿವಿದ ಇಲಾಖೆಗಳಲ್ಲಿ ೯,೬೪,೩೫೯ ಹುದ್ದೆ ಖಾಲಿ ಇವೆ ಎಂದು ಕೇಂದ್ರ ಸರ್ಕಾರ ಲೋಕಸಭೆಗೆ ತಿಳಿಸಿದೆ.
ಖಾಲಿ ಇರುವ ೯.೬೪ ಲಕ್ಷ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿ ಕೇಂದ್ರ ಸರ್ಕಾರ ಮೌನವಹಿಸಿದೆ.
ಟಿಎಂಸಿ ಸಂಸದೆ ಮಾಲಾ ಹಾಗು ಟಿಡಿಪಿ ಸದಸ್ಯ ನಾಮ ನಾಗೇಶ್ವರ ರಾವ್, ಅವರು ಕಳೆದ ೧೦ ವರ್ಷಗಳಲ್ಲಿ ಸರ್ಕಾರಿ ಹುದ್ದೆಗಳ ಸಂಖ್ಯೆ ಎಷ್ಟು ಖಾಲಿ ಇವೆ ಅವುಗಳ ಭರ್ತಿಗೆ ಯಾವ ಕ್ರಮ ಕೈಗೊಂಡಿದೆ ಎನ್ನುವ ಪ್ರಶ್ನೆಗಳಿಗೆ ಉತ್ತರಿಸಿದ ಉತ್ತರಿಸಿದ ಪ್ರಧಾನಮಂತ್ರಿಗಳ ಕಚೆರಿಯ ರಾಜ್ಯ ಖಾತೆ ಸಚಿವ ಡಾ. ಜಿತೇಂದ್ರ ಸಿಂಗ್ ಖಾಲಿ ಹುದ್ದೆಗಳ ಮಾಹಿತಿ ನೀಡಿ ಹುದ್ದೆ ಭರ್ತಿ ಬಗ್ಗೆ ಮೌನವಹಿಸಿದ್ದಾರೆ.ಕಾಲಕಾಲಕ್ಕೆ ಸಮರೋಪಾದಿಯಲ್ಲಿ ನೇಮಕಾತಿ ನಡೆಯುತ್ತಿವೆ. ಜೊತೆಗೆ ಇತ್ತೀಚೆಗೆ ಉದ್ಯೋಗ ಮೇಳದ ಮೂಲಕ ಹುದ್ದೆಗಳ ಭರ್ತಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
“ಆರೋಗ್ಯ ಮತ್ತು ಶಿಕ್ಷಣ ಸಂಸ್ಥೆಗಳು, ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಇತ್ಯಾದಿ ಸೇರಿದಂತೆ ಕೇಂದ್ರ ಸಚಿವಾಲಯಗಳು,ಇಲಾಖೆಗಳು, ಕೇಂದ್ರ ಸಾರ್ವಜನಿಕ ವಲಯದ ಸಂಸ್ಥೆಗಳು, ಸ್ವಾಯತ್ತ ಸಂಸ್ಥೆಗಳು ನೇರವಾಗಿ ಅಥವಾ ಆಯ್ಕೆ ಆಯೋಗ, ಕೇಂದ್ರ ಲೋಕಸೇವಾ ಆಯೋಗ, ರೈಲ್ವೆ ಮೂಲಕ ನೇಮಕಾತಿಗಳನ್ನು ಮಾಡುತ್ತವೆ ಎಂದಿದ್ದಾರೆ.
ಕಳೆದ ಹತ್ತು ವರ್ಷಗಳಲ್ಲಿ ದೇಶಾದ್ಯಂತ ನಿಗಮಗಳು ಮತ್ತು ಇತರ ಸರ್ಕಾರಿ ಏಜೆನ್ಸಿಗಳು ಸೇರಿದಂತೆ ಸರ್ಕಾರಿ ಇಲಾಖೆಗಳಲ್ಲಿ ಅಸ್ತಿತ್ವದಲ್ಲಿರುವ ಒಟ್ಟು ಖಾಲಿ ಹುದ್ದೆಗಳ ವಿವರ ನೀಡಿ ಕಳೆದ ಹತ್ತು ವರ್ಷಗಳಲ್ಲಿ ಎಲ್ಲಾ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗಿದೆಯೇ, ಹಾಗಿದ್ದರೆ, ಅದರ ವಿವರ ಒದಗಿಸುವಂತೆ ಪ್ರಶ್ನೆ ಕೇಳಲಾಗಿತ್ತು.