ಖಾಲಿ ಹುದ್ದೆಗಳ ಭರ್ತಿಗೆ ಶೀಘ್ರ ಕ್ರಮ: ಸುನೀಲ್ ಕುಮಾರ್   

ಸೊರಬ. ನ.೨೪:  ಇಂಧನ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಹಂತ ಹಂತವಾಗಿ  ತುಂಬಿ ಕೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ ಎಂದು  ಇಂಧನ ಹಾಗೂ ಕನ್ನಡ  ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀ ಲ್ ಕುಮಾರ್ ಹೇಳಿದರು.ತಾಲೂಕಿನ ಇತಿಹಾಸ ಪ್ರಸಿದ್ಧ ಶಕ್ತಿ ದೇವತೆಯಾದ ಚಂದ್ರಗುತ್ತಿಯ ಶ್ರೀ ಕ್ಷೇತ್ರ ರೇಣುಕಾಂಬ ದೇವಾಲಯಕ್ಕೆ ಕುಟುಂಬ ಸಮೇತರಾಗಿ ಭೇಟಿ ನೀಡಿ  ದೇ ವಿಯ ದರ್ಶನ ಪಡೆದು ಸುದ್ದಿಗಾರರೊಂದಿಗೆ ಮಾತನಾಡಿದ  ಅವರು ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ಉಂಟಾಗದಂತೆ  ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ರೈತರ ಹಿತ ದೃಷ್ಟಿಯಿಂದ ಕೃಷಿ ಚಟುವಟಿಕೆಗಳಿಗೆ ವಿದ್ಯುತ್ ಸಮಸ್ಯೆ ಉಂಟಾಗದಂತೆ ಗಮನಹರಿಸಲಾಗಿದ್ದು. ತಾಲೂಕಿನ  ವಿಭಾಗಗಳಲ್ಲಿ ಕೆಲವು ಕಡೆ ಸಬ್ ಸ್ಟೇಷನ್  ಸ್ಥಾಪಿಸಲಾಗಿದೆ. ತ್ಯಾಗರ್ತಿ ಭಾಗದಲ್ಲಿ ಪ್ರಬಲ ಸ ಬ್ ಸ್ಟೇಷನ್ ಸ್ಥಾಪಿಸುವುದರಿಂದ ಈ ಭಾಗದಲ್ಲಿ ಗಣನೀಯ ಪ್ರಮಾಣದಲ್ಲಿ ವಿದ್ಯುತ್ ಸಮಸ್ಯೆಯನ್ನ ಪರಿಹರಿಸಿದಂತಾಗುತ್ತದೆ ಎಂದ ಅವರು ಇಲಾಖೆಯಲ್ಲಿ ಖಾಲಿ ಇರುವ ೨೫೦೦ ಹುದ್ದೆಗಳನ್ನು ಪ್ರಥಮ ಹಂತದಲ್ಲಿ  ತುಂಬಿಕೊಳ್ಳುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ೧೮೦೦ ಹುದ್ದೆಗಳನ್ನು ಎರಡನೇ ಹಂತದಲ್ಲಿ  ತುಂಬಿಕೊಳ್ಳಲಾಗುವುದು ಎಂದರು. ಈ ಸಂದರ್ಭದಲ್ಲಿ ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಶಿವ ಕುಮಾರ್ ಕಡಸೂರು, ದೇವಸ್ಥಾನ ಸಮಿತಿ ಅಧ್ಯಕ್ಷ ಪ್ರಸನ್ನ ಸೇಟ್,ಈಶ್ವರ ಚನ್ನಪಟ್ಟಣ, ರಾಜು ಕೆಂಚಿಕೊಪ್ಪ, ಕನಕದಾಸ ಕಲ್ಲಂಬಿ, ಪರಮೇಶ್ವರ ಮನ್ನತ್ತಿ, ಪಕೀರಪ್ಪ, ಪ್ರವೀಣ, ರಾಜು, ಹಲವು ಮುಖಂಡರು  ಮತ್ತು ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.