ಖಾಲಿ ಶೆಡ್‌ಗೆ ಬೆಂಕಿ

ಕೆಂಗೇರಿ,ಫೆ.೨೬:ಕೆಂಗೇರಿಉಪನಗರದ ಹೊಯ್ಸಳ ವೃತ್ತ ಸಮೀಪದ ಖಾಲಿ ಶೆಡ್ ಗೆ ಬೆಂಕಿ ಬಿದ್ದು ಅದರೊಳಗಿದ್ದ ವಸ್ತುಗಳು ಸುಟ್ಟು ಬೂಧಿಯಾಗಿರುವ ಘಟನೆ ನಡೆದಿದೆ. ಹೊಯ್ಸಳ ವೃತ್ತದಲ್ಲಿ ಸೋಮವಾರ ಬೆಳಗ್ಗೆ ಅವಘಡ ನಡೆದಿದೆ. ಬಿಡಿಎ ಸ್ವತ್ತಾಗಿದ್ದು ಅದಕ್ಕೆ ಯಾವುದೇ ಮಾಲೀಕರು ಇರಲಿಲ್ಲ. ಸಾರ್ವಜನಿಕರು ಮಳಿಗೆಗೆ ಬೆಂಕಿ ತಗಲುತ್ತಿದ್ದಂತೆಯೇ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಯಾವುದೇ ಅನಾಹುತಗಳು ಸಂಭವಿಸಿಲ್ಲ.
ಬೆಂಕಿ ಬಿದ್ದ ಪರಿಣಾಮದಿಂದ ಅಕ್ಕಪಕ್ಕದ ಮನೆಗಳು ಆತಂಕಗೊಳಗಾಗಿದ್ದರು. ಆ ಸ್ವತ್ತಿಗೆ ಮಾಲೀಕರು ಇಲ್ಲದ ಕಾರಣದಿಂದ ದೂರು ದಾಖಲಾಗಿಲ್ಲ ಎಂದು ಕೆಂಗೇರಿ ಪೊಲೀಸ್ ಠಾಣಾ ಸಿಬ್ಬಂದಿ ತಿಳಿಸಿದ್ದಾರೆ. ಜಿಲ್ಲಾ ಅಗ್ನಿಶಾಮಕ ದಳದ ಅಧಿಕಾರಿ ನಂಜೇಗೌಡ ಮಾತನಾಡಿ ಬೆಳಿಗ್ಗೆ ೭.೩೦ ರ ಬೆಳಿಗ್ಗೆ ತೆರವಾಗಿದ್ದ ಶೆಡ್‌ನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಯಾವುದೇ ರೀತಿಯ ಅನಾಹುತಗಳಾಗಿಲ್ಲ ಎಂದು ತಿಳಿಸಿದ್ದಾರೆ.