ಖಾಲಿ ನಿವೇಶನದಲ್ಲಿ ಗಾಂಜಾ ಬೆಳೆ

ಬೆಂಗಳೂರು, ಜು.೧೩- ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರ ಆರ್.ಟಿ.ನಗರದ ಮಂಜುನಾಥ್ ಲೇಔಟ್‌ನ ಮುಖ್ಯ ರಸ್ತೆಯಲ್ಲಿರುವ ಮನೆ ಹಿಂಭಾಗದ ಖಾಲಿ ನಿವೇಶನದಲ್ಲಿ ಗಾಂಜಾ ಗಿಡಗಳನ್ನು ಬೆಳೆಯಲಾಗಿದೆ.
ಮಾದಕ ದ್ರವ್ಯದ ಗಿಡಗಳನ್ನು ಕಂಡ ಶಾಸಕರು ಖುದ್ದು ಆರ್.ಟಿ.ನಗರ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿ, ಗಿಡಗಳನ್ನು ವಶಕ್ಕೆ ಪಡೆದು ನಿವೇಶನ ಮಾಲೀಕರನ್ನು ಗಾಂಜಾ ಗಿಡಗಳನ್ನು ಯಾರೂ ಬೆಳೆಸಿದವರ ಬಗ್ಗೆ ವಿಚಾರಣೆ ನಡೆಸಿದಾಗ ಮಾಹಿತಿಯೇ ಇಲ್ಲ ಎಂದಿದ್ದಾರೆ.
ನಿವೇಶನದ ಬಳಿ ಬಂದು ಹೋಗುವುದು ಕಡಿಮೆಯಾಗಿದ್ದು, ಯಾರೋ ದುಷ್ಕರ್ಮಿಗಳು ಕೃತ್ಯ ನಡೆಸಿದ್ದಾರೆ ಎಂದು ಮಾಲೀಕರು ತಿಳಿಸಿದ್ದು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದರು.