ಖಾಲಿ ಗಾಡಾ ಓಡಿಸುವ ಸ್ಪರ್ಧೆ


ಲಕ್ಷ್ಮೇಶ್ವರ,ಮಾ.29: ಸಮೀಪದ ಅಡರಕಟ್ಟಿ ಗ್ರಾಮದ ಬಸವೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತ ಮಂಗಲವಾರ ನಡೆದ ನಾಲ್ಕನೇ ಬಾರಿಗೆ ರಾಜ್ಯಮಟ್ಟದ ಜೋಡೆತ್ತಿನ ಖಾಲಿ ಗಾಡಾ ಓಡಿಸುವ ಸ್ಪರ್ಧೆ ಗಮನ ಸೆಳೆಯಿತು. ಶಾಸಕ ರಾಮಣ್ಣ ಲಮಾಣಿ ಅವರು ಎತ್ತಿನ ಗಾಡಿ ಓಡಿಸುವ ಮೂಲಕ ಸ್ಪರ್ಧೆಗೆ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ‘ಖಾಲಾ ಗಾಡಾ ಓಡಿಸುವುದು ಅಪ್ಪಟ ಗ್ರಾಮೀಣ ಕ್ರೀಡೆಯಾಗಿದೆ. ಆಟೋಟಗಳು ನೊಂದ ಮನಸ್ಸಿಗೆ ಮುದ ನೀಡುತ್ತವೆ. ಕ್ರಿಕೆಟ್‍ನ ಭರದಲ್ಲಿ ದೇಶೀಯ ಕ್ರೀಡೆಗಳಾದ ಕಬಡ್ಡಿ, ಕೋಕ್ಕೋ, ಕುಸ್ತಿಗಳು ಕಣ್ಮರೆ ಆಗುತ್ತಿವೆ. ಅವುಗಳ ಸಾಲಿನಲ್ಲಿ ಇನ್ನೂ ಅನೇಕ ಗ್ರಾಮೀಣ ಕ್ರೀಡೆಗಳು ಸೇರಿಕೊಂಡಿವೆ. ಆದರೆ ಇಂಥ ಕ್ರೀಡೆಗಳನ್ನು ಉಳಿಸುವ ಜವಾಬ್ದಾರಿ ಯುವ ಜನತೆಯ ಮೇಲಿದೆ. ಕಳೆದ ನಾಲ್ಕು ವರ್ಷಗಳಿಂದ ಅಡರಕಟ್ಟಿ ಗ್ರಾಮದ ಯುವಕರು ಗಾಡಾ ಓಡಿಸುವ ಸ್ಪರ್ಧೆಯನ್ನು ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ’ ಎಂದರು.
ಗ್ರಾಮ ಪಂಚಾಯ್ತಿ ಅಧ್ಯಕ್ಷ ನಿಂಗಪ್ಪ ಪ್ಯಾಟಿ ಅಧ್ಯಕ್ಷತೆ ವಹಿಸಿದ್ದರು. ಮಂಜುನಾಥ ಹೊಗೆಸೊಪ್ಪಿನ, ಮುದಿಯಪ್ಪ ಹವಳದ, ಚೆನ್ನಪ್ಪ ಹಳಮನಿ, ಉಮೇಶ ಕರಿಗಾರ, ಮುತ್ತಣ್ಣ ಗಡೆಪ್ಪನವರ, ಭೀಮಣ್ಣ ಯಂಗಾಡಿ, ಗಂಗನಗೌಡ ಪಾಟೀಲ, ರಾಮಣ್ಣ ಚಿಕ್ಕಣ್ಣವರ, ಮಾಂತೇಶ ಹವಳದ, ಗಣೇಶ ನಾಯಕ, ಕುಮಾರ ಚಕ್ರಸಾಲಿ, ಸಿದ್ದು ಹವಳದ, ಹನಮಂತಪ್ಪ ಜಾಲಿಮರದ, ರಾಮಣ್ಣ ಕದಡಿ ಮತ್ತಿತರರು ಇದ್ದರು ಹಾವೇರಿ, ಧಾರವಾಡ, ಶಿವಮೊಗ್ಗ, ಗದಗ ಜಿಲ್ಲೆಗಳ ವಿವಿಧ ಊರುಗಳಿಂದ ಜೋಡೆತ್ತುಗಳು ಆಗಮಿಸಿದ್ದವು. ಸ್ಪರ್ಧೆಯಲ್ಲಿ
**