ಖಾರ ಕಡಲೆಪುರಿ

ಬೇಕಾಗಿರುವ ಸಾಮಾಗ್ರಿಗಳು
ಕಡಲೆಪುರಿ – ೧೦ ಕಪ್
ಹುರಿಗಡಲೆ-೧ ಕಪ್
ಕಡಲೆಕಾಯಿ ಬೀಜ ೧ ಕಪ್
ಒಣ ಮೆಣಸಿನಕಾಯಿ-೪
ಎಣ್ಣೆ- ೨ ಚಮಚ
ಸಾಸಿವೆ,ಜೀರಿಗೆ
ಕರಿಬೇವು- ಸ್ವಲ್ಪ
ಅರಿಶಿಣ ಪುಡಿ – ಕಾಲು ಚಮಚ,
ಸೇವ್/ಖಾರ ಬೂಂದಿ
ಸಿಪ್ಪೆ ತೆಗೆದ ಬೆಳ್ಳುಳ್ಳಿ- ೧
ಕೆಂಪು ಮೆಣಸಿನಕಾಯಿ ಪುಡಿ ಅರ್ಧ ಚಮಚ
ಉಪ್ಪು- ರುಚಿಗೆ ತಕ್ಕಷ್ಟು
ಮಾಡುವ ವಿಧಾನ
ಒಂದು ಬಾಣಲೆಗೆ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದ ಮೇಲೆ ಒಗ್ಗರಣೆಗೆ ಸಾಸಿವೆ, ಜೀರಿಗೆ ಹಾಕಿ. ನಂತರ ಸಿಪ್ಪೆ ಬಿಡಿಸಿದ ಬೆಳ್ಳುಳ್ಳಿಯನ್ನು ಜಜ್ಜಿ ಒಗ್ಗರಣೆಗೆ ಹಾಕಿ ಕರಿಬೇವು ಹಾಕಿ ಸ್ವಲ್ಪ ಫ್ರೈ ಮಾಡಿ. ನಂತರ ಅರಿಶಿಣ ಮತ್ತು ಕಡಲೆಕಾಯಿ ಬೀಜ ಹಾಗೂ ಹುರಿಗಡಲೆ ಹಾಕಿ ಫ್ರೈ ಮಾಡಿ. ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಸ್ವಲ್ಪ ಕೆಂಪು ಮೆಣಸಿನಕಾಯಿ ಪುಡಿ ಹಾಕಿ ಮಿಕ್ಸ್ ಮಾಡಿ. ಕೊನೆಯಲ್ಲಿ ಕಡಲೆಪುರಿ ಹಾಕಿ ಚೆನ್ನಾಗಿ ಕಲೆಸಿದರೇ ಸ್ಪೈಸೀ ಒಗ್ಗರಣೆ ಕಡಲೆಪುರಿ ಸವಿಯಲು ಸಿದ್ಧ