ಖಾರದ ಅಮೃತ ಫಲ

ಪದಾರ್ಥಗಳು :-
ಅಕ್ಕಿ – ಅರ್ಧ ಪಾವು
ಕಾಯಿತುರಿ – ೧ ಲೋಟ
ಒಣಮೆಣಸಿನಕಾಯಿ – ೮-೧೦
ಉಪ್ಪು – ರುಚಿಗೆ
ಬೆಲ್ಲ – ರುಚಿಗೆ
ಹುಣಸೇರಸ – ರುಚಿಗೆ
ಎಣ್ಣೆ – ೨ ಸೌಟು
ಸಾಸಿವೆ – ೧ ಚಮಚ
ಕರಿಬೇವು – ಸ್ವಲ್ಪ
ಈರುಳ್ಳಿ – ರುಚಿಗೆ

ವಿಧಾನ :- ೧ ನೀರಲ್ಲಿ ೩ ಗಂಟೆ ಕಾಲ ನೆನೆಸಿ, ಕಾಯಿತುರಿ, ಒಣಮೆಣಸಿನಕಾಯಿ ಹಾಕಿ ನುಣ್ಣಗೆ ರುಬ್ಬಿ, ಉಪ್ಪು, ಬೆಲ್ಲ, ಹುಣಸೇರಸ ಹಾಕಿ, ೪ ಲೋಟ ನೀರು ಹಾಕಿ ಕಲೆಸಿಡಬೇಕು.
೨. ಎಣ್ಣೆ, ಸಾಸಿವೆ, ಕರಿಬೇವು, ಈರುಳ್ಳಿ ಹಾಕಿ ಬಾಡಿಸಿ, ರುಬ್ಬಿ ಕಲೆಸಿದ ಮಿಶ್ರಣ ಹಾಕಿ ಕೈ ಬಿಡದೆ ಚೆನ್ನಾಗಿ ಬಾಡಿಸಿ, ಗಟ್ಟಿಯಾದ ಮೇಲೆ ಎಣ್ಣೆ ಸವರಿದ ತಟ್ಟೆಗೆ ಹಾಕಿ, ಕೈಯಲ್ಲಿ ತಟ್ಟಿ, ನಂತರ ಬೇಕಾದ ಆಕಾರಕ್ಕೆ ಕತ್ತರಿಸಬಹುದು.