ಖಾನ್ ಆಯೇಷಾಗೆ ಉತ್ತಮ ವಿದ್ಯಾರ್ಥಿನಿ ಪ್ರಶಸ್ತಿ

ಬೀದರ್:ಜು.26: ತಾಲ್ಲೂಕಿನ ಗೋರನಳ್ಳಿ ಸಮೀಪದ ಲಿಂಗರಾಜ ಅಪ್ಪ ಎಂಜಿನಿಯರಿಂಗ್ ಕಾಲೇಜಿನ ಸಿವಿಲ್ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿನಿ ಖಾನ್ ಆಯೇಷಾ ಅವರಿಗೆ ಐಎಸ್‍ಟಿಇ ವತಿಯಿಂದ ಕೊಡಲಾಗುವ ಉತ್ತಮ ವಿದ್ಯಾರ್ಥಿನಿ ಪ್ರಶಸ್ತಿ ದೊರಕಿದೆ.
ದಾವಣಗೆರೆಯ ಜಿ.ಎಂ.ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ನಡೆದ ರಾಜ್ಯಮಟ್ಟದ 17ನೇ ಐಎಸ್‍ಟಿಇ ವಿದ್ಯಾರ್ಥಿ ಸಮಾವೇಶದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಲಬುರಗಿಯ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಶರಣಬಸವಪ್ಪ ಅಪ್ಪ, ದಾಕ್ಷಾಯಣಿ ತಾಯಿ, ಚಿ. ದೊಡ್ಡಪ್ಪ ಅಪ್ಪ, ಕಾರ್ಯದರ್ಶಿ ಬಸವರಾಜ ದೇಶಮುಖ, ನಿರ್ದೇಶಕರಾದ ಶರಣಬಸಪ್ಪ ದೇಶಮುಖ ಹಾಗೂ ಡಾ.ಉಮಾ ದೇಶಮುಖ ಅವರ ಮಾರ್ಗದರ್ಶನದಲ್ಲಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣದ ಜತೆಗೆ ಶಿಸ್ತು, ಸಮಯ ಪ್ರಜ್ಞೆ, ನೈತಿಕತೆ, ಮಾನವೀಯ ಮೌಲ್ಯಗಳನ್ನು ಸಹ ಹೇಳಿಕೊಡಲಾಗುತ್ತಿದೆ. ಅದರಿಂದಾಗಿಯೇ ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಸಾಧನೆ, ಉತ್ತಮ ವಿದ್ಯಾರ್ಥಿ ಸೇರಿ ವಿವಿಧ ಪ್ರಶಸ್ತಿ, ಸಮ್ಮಾನಗಳಿಗೆ ಭಾಜನರಾಗುತ್ತಿದ್ದಾರೆ ಎಂದು ಕಾಲೇಜಿನ ಪ್ರಾಚಾರ್ಯೆ ವಿನಿತಾ ಪಾಟೀಲ ತಿಳಿಸಿದ್ದಾರೆ.