ಖಾನಾಪೂರದಲ್ಲಿ ದತ್ತ ಜಯಂತಿ ಸಂಭ್ರಮ : ವೈಭದಿಂದ ನೆರವೇರಿದ ಪಲ್ಲಕ್ಕಿ ಮೆರವಣಿಗೆ

ಭಾಲ್ಕಿ:ಡಿ.31: ತಾಲೂಕಿನ ಖಾನಾಪೂರ(ಮೈಲಾರ) ಗ್ರಾಮದ ಹೊರ ವಲಯದಲ್ಲಿ ಗುರುವಾರ ಶ್ರದ್ಧೆ, ಭಕ್ತಿಯಿಂದ ದತ್ತ ಜಯಂತಿ ನೆರವೇರಿತು. ಆನಂದ ಆಶ್ರಮ ಪರಿಸರದಲ್ಲಿ ದಿನವೀಡಿ ಯಜ್ಞೆ, ಅಭಿಷೇಕ, ಭಜನೆ, ಕೀರ್ತನೆ ಸೇರಿದಂತೆ ನಾನಾ ಧಾರ್ಮಿಕ ಕಾರ್ಯಕ್ರಮಗಳು ಸಂಭ್ರಮದಿಂದ ಜರುಗಿದ್ದವು.

ಬೆಳಗ್ಗೆ ಆನಂದ ಆಶ್ರಮದಿಂದ ಮಲ್ಲಣ್ಣ ದೇವಸ್ಥಾನದ ವರೆಗೂ ಪಲ್ಲಕ್ಕಿ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು. ಪಲ್ಲಕ್ಕಿ ಮೆರವಣಗೆಯುದ್ದಕ್ಕೂ ಡೊಳ್ಳು, ಕುಣಿತ, ಭಜನೆ, ಮಹಿಳೆಯರು ಕುಂಭ ಕಳಸ ಹೊತ್ತು ಭಕ್ತಿಭಾವ ಮೆರೆದರು. ಈ ಸಂದರ್ಭದಲ್ಲಿ ಯುವ ಮುಖಂಡ ಪಪ್ಪು ಪಾಟೀಲ್ ಖಾನಾಪೂರ್, ಪ್ರಮುಖರಾದ ವಿನೋದ ಮಲ್ಕಾಪೂರೆ, ರಾಜೇಂದ್ರ ಮಹಾರಾಜ್, ಅನಿಲ ಪೋಲಾ, ದಿಲೀಪ ಹೈದ್ರಾಬಾದ್, ನಾಗೇಶ, ಧನಸಿಂಗ್ ಸೇರಿದಂಥೆ ಹಲವರು ಇದ್ದರು.