ಖಾನಾಪುರ ಸಂಗೊಳ್ಳಿ ರಾಯಣ್ಣರ ಅದ್ದೂರಿ ಜಯಂತಿ ಆಚರಣೆ

ಯಾದಗಿರಿ:ಆ.18: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಶೌರ್ಯ ಧೈರ್ಯ ಸಾಹಸಕ್ಕೆ ಹೆಸರುವಾಸಿಯಾಗಿದ್ದರು.ಅವರ ತತ್ವವಾದರ್ಷ ಹೋರಾಟ ಸರ್ವಕಾಲಿಕ ಶ್ರೇಷ್ಠ ಎಂದು ಕುರುಬ ಸಂಘದ ಯಾದಗಿರಿ ಜಿಲ್ಲಾಧ್ಯಕ್ಷರಾದ ಮಲ್ಲಣ್ಣ ಐಕೂರ್ ಶಹಾಪುರ ತಾಲೂಕಿನ ಖಾನಾಪುರ ಗ್ರಾಮದಲ್ಲಿ ಕುರುಬ ಸಮಾಜ ವತಿಯಿಂದ ಹಮ್ಮಿಕೊಂಡಿದ್ದ ಸಂಗೊಳ್ಳಿ ರಾಯಣ್ಣ ನವರ 226ನೇ ಜಯಂತಿ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು ಸಂಗೊಳ್ಳಿ ರಾಯಣ್ಣ ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿ ಸ್ಥಾನದಲ್ಲಿದ್ದು ಬ್ರಿಟಿಷರ ವಿರುದ್ಧ ಕೆಚ್ಚೆದೆಯಿಂದ ಹೋರಾಟ ಮಾಡಿ ನಮ್ಮ ದೇಶಕ್ಕೆ ಸ್ವಾತಂತ್ರ ದೊರಕಿಸಿಕೊಟ್ಟ ಮಹಾನ್ ವ್ಯಕ್ತಿ ಸಂಗೊಳ್ಳಿ ರಾಯಣ್ಣನವರು ಸುರಪೂರ ರಾಜರ ಬಳಿ ಬಂದು ಹೋರಾಟಕ್ಕೆ ಬೆಂಬಲಿಸುವಂತೆ ರಾಜರಲ್ಲಿ ಕೇಳಿಕೊಂಡಿದ್ದರಂತೆ, ಸುರಪುರಕ್ಕು ಸಂಗೊಳ್ಳಿ ರಾಯಣ್ಣನವರಿಗೂ ಅವಿನಾಭವ ಸಂಬಂಧವಿದೆ ಸರಕಾರಿ ಕಚೇರಿ ಶಾಲಾ ಕಾಲೇಜುಗಳಲ್ಲಿ ಸಂಗೊಳ್ಳಿ ರಾಯಣ್ಣನವರ ಭಾವಚಿತ್ರವನ್ನು ಕಡ್ಡಾಯವಾಗಿ ಅಳವಡಿಸುವಂತೆ ನಿನ್ನೆ ಜಯಂತಿ ದಿನ ಆದೇಶ ಹೊರಡಿಸಿದ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಅಭಿನಂದನೆ ತಿಳಿಸಿದರು. ಸಂಗೊಳ್ಳಿ ರಾಯಣ್ಣನವರ ಭಾವಚಿತ್ರವನ್ನು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.ಈ ಸಂದರ್ಭದಲ್ಲಿ ಕಾಂಗ್ರೆಸ್ ಯುವ ಮುಖಂಡ ದೇವೇಂದ್ರಪ್ಪ ಮುನಮುಟಗಿ. ಮಲ್ಲಯ್ಯ ಕಸಬಿ. ನರಸಪ್ಪ ಬರೇಗಲ್. ಭೀಮರಾಯ ಕ್ಯಾತ್ನಳ. ಅರುಣ್ ಕುಮಾರ್ ಹೂರಮನಿ. ನಾಗರಾಜ ವಾರಿ. ಪರಶುರಾಮ ಪದ್ಮಾಕರ್. ಜೇಜಪ್ಪ. ಹಣಮಂತ. ಮರಿಲಿಂಗಪ್ಪ ಕೊಂಚೆಂಟಿ. ಶರಣಪ್ಪ ತಿಪ್ಪನಟಗಿ. ಹೊನ್ನಪ್ಪ ದೇವರಳಿ. ಸೋಮಣ್ಣ ಹಿರೇಕುರುಬರ. ಯಲ್ಲಾಲಿಂಗ. ವಿಜಯ ಕ್ಯಾತನಾಳ.ಮಾಳಿಂಗರಾಯ. ಪಾಂಡುರಂಗ ಪೂಜಾರಿ. ಪ್ರಕಾಶ್ ಚೌಹಾಣ್. ದೇವು ಬರೇಗಲ್.ಹಾಗೂ ಸಂಗೊಳ್ಳಿ ರಾಯಣ್ಣನ ಅಭಿಮಾನಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು