ಖಾನಪೂರು ಶಾಲೆಗೆ ಜಮೀನು ಮಂಜೂರು ಜಿಲ್ಲಾಡಳಿತಕ್ಕೆ ಅಭಿನಂದನೆ

ಶೀಘ್ರ ಶಾಲಾ ಕಟ್ಟಡ ನಿರ್ಮಾಣಕ್ಕೆ ಒತ್ತಾಯ
ರಾಯಚೂರು, ಸೆ.೧೨- ಮಾದಿಗ ಮೀಸಲಾತಿ ಹೋರಾಟ ಸಮತಿ ನಿರಂತರ ಹೋರಾಟದ ಫಲದಿಂದ ಶಿಕ್ಷಣದಿಂದ ವಂಚಿತವಾಗಿದ್ದ ಗಬ್ಬೂರು ಹೋಬಳಿ ಹೇಮನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಖಾನಪೂರು ಗ್ರಾಮದ ಪ್ರೌಢ ಶಾಲೆಗೆ ೩ ಎಕರೆ ೩ ಗುಂಟೆ ಜಮೀನು ಮಂಜೂರು ಮಾಡಿದ ಜಿಲ್ಲಾಡಳಿತಕ್ಕೆ ಮಾದಿಗ ಮೀಸಲಾತಿ ಹೋರಾಟ ಸಮತಿ ತಾಲೂಕು ಅಧ್ಯಕ್ಷ ಶಾಂತಕುಮಾರ ಹೊನ್ನಟಗಿ ಅವರು ಸಮತಿ ಪರ
ಅಭಿನಂದನೆ ಸಲ್ಲಿಸಿದರು. ಅವರಿಂದು ನಗರದ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಕಳೆದ ೫ ವರ್ಷಗಳ ನಿರಂತರ ಹೋರಾಟ ಪರಿಶ್ರಮ ಫಲದಿಂದ ಖಾನಪೂರ ಗ್ರಾಮದ ಪ್ರೌಢ ಶಾಲೆಗೆ ಜಿಲ್ಲಾಡಳಿತ ಜಮೀನು ಮಂಜೂರು ಮಾಡಿ ಅದೇಶಿಸಿದ್ದು ಸಂತೋಷದ ಸಂಗಾತಿ. ಶಾಲೆಗೆ ಮಂಜೂರು ಮಾಡಿದ ಜಾಗವನ್ನು ಹದ್ದುಬಸ್ತ್ ಮಾಡುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದರು. ಮಕ್ಕಳ ಶೈಕ್ಷಣಿಕ ಸಲುವಾಗಿ ಶೀಘ್ರವೇ ಜಮೀನು ಮಂಜೂರು ಆದೇಶ ಸ್ಥಳದಲ್ಲಿ ಶಾಲೆ ಕಟ್ಟಡ ನಿರ್ಮಾಣಕ್ಕೆ ಶಿಕ್ಷಣ ಇಲಾಖೆ ಮುಂದಾಗಬೇಕೆಂದು ಒತ್ತಾಯಿಸಿದರು. ದೇವದುರ್ಗ ತಾಲೂಕಿನ ಬಹುತೇಕ ಹಳ್ಳಿಗಳಲ್ಲಿ ಸರಕಾರಿ ಶಾಲೆಗಳಿಗೆ ನಿವೇಶನ ಸಮಸ್ಯೆ, ಕೊಠಡಿ ಕೊರತೆ, ಶಿಕ್ಷಣ ಕೊರತೆ ಮತ್ತು ಮಕ್ಕಳಿಗೆ ಮೂಲಭೂತ ಸೌಕರ್ಯ ವಂಚಿತದಿಂದ ಶೈಕ್ಷಣಿಕವಾಗಿ ದೇವದುರ್ಗ ತಾಲೂಕು ಹಿಂದುಳಿಯಲು ಕಾರಣವಾಗಿದೆ. ಗಬ್ಬೂರು ಹೋಬಳಿಯ ಹೇಮನಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಖಾನಾಪುರ ಗ್ರಾಮದಲ್ಲಿ ೧ ರಿಂದ ೮ನೇ ತರಗತಿವರೆಗೆ ಸರಕಾರಿ ಶಾಲೆ ಇದೆ. ಆದರೆ ಮಕ್ಕಳು ಸಂಖ್ಯಾಗನುಗುಣವಾಗಿ ಕೊಟ್ಟಡಿ, ಶಿಕ್ಷಕರ ಕೊರತೆ, ಮೂಲಭೂತ ಸೌಕರ್ಯ ಹಾಗೂ ಆಟದ ಮೈದಾನಕ್ಕಾಗಿ ಸರಕಾರಿ ಜಾಗ ಮಂಜೂರು ಮಾಡುವಂತೆ ಜಿಲ್ಲಾಡಳಿತಕ್ಕೆ ಹೋರಾಟದ ಹಾದಿ ಮೂಲಕ ಒತ್ತಾಯಿಸಲಾಗಿತ್ತು ಎಂದರು.
ಈ ಸಂದರ್ಭದಲ್ಲಿ ರಾಜಪ್ಪ ಸಿರವಾರ, ಮಾರೆಪ್ಪ ಮಲದಕಲ್, ನರಸಪ್ಪ ಎನ್ ಗಣೇಕಲ್, ಮಲ್ಲಯ್ಯ ಖಾನಪೂರು, ಶರಣಪ್ಪ ನಿಲಗಲ್, ಬಸವಲಿಂಗಪ್ಪ ಖಾನಾಪುರು, ಮಾರ್ತಾಂಡ ಗಬ್ಬೂರು ಸೇರಿದಂತೆ ಉಪಸ್ಥಿತರಿದ್ದರು