ಖಾನಪೂರಲ್ಲಿರಸ್ತೆ ಹದಗೆಡಲು ಪಿಡಿಓ ನಿರ್ಲಕ್ಷ್ಯವೇ ಕಾರಣ

ಗಬ್ಬೂರು.ನ.೧೩-ದೇವದುರ್ಗ ತಾಲ್ಲೂಕಿನ ಹೇಮನಾಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಖಾನಪೂರ ಗ್ರಾಮದಲ್ಲಿ ರಸ್ತೆಗಳು ಅಸ್ವಚ್ಛೆಯಿಂದ ಕೂಡಿವೆ ಮಲ್ಲಯ್ಯದೇವಸ್ಥಾನಕ್ಕೆ ಹೋಗುವಂತಹ ಭಕ್ತಾದಿಗಳಿಗೆ ತುಂಬಾ ತೊಂದರೆಯಾಗಿದೆ ಕರೊನಾ ಮಹಾಮರಿ ರೋಗದಿಂದ ಜನ ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ ಇಂತಹ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಪಿಡಿಓ ಮಹಿಬೂಬ್ ಭುಟ್ಟೋ ಕಣ್ಣು ಮುಚ್ಚಿ ಕುಳಿತ್ತಿದ್ದಾನೆ ಎಂದು ಗ್ರಾಮಸ್ಥರು ಆರೊಪಿಸುತ್ತಿದ್ದಾರೆ ಹದಗೆಟ್ಟ ರಸ್ತೆಯಿಂದ ಜನರು
ನರಕ ಯಾತನೆ ಅನುಭವಿಸುತ್ತಿದ್ದಾರೆ ರೋಗ ರುಜಿನಗಳು ಬರುವಂತಹ ಎಲ್ಲಾ ಲಕ್ಷಣಗಳು ಕಂಡು ಬರುತ್ತಿವೆ ಈಗಲಾದರೂ ಗ್ರಾಮ ಪಂಚಾಯತಿ ರಸ್ತೆ ಸುದಾರಣೆ ಅಥವಾ ಹೊಸದಾಗಿ ಸಿಸಿ ರಸ್ತೆ ನಿರ್ಮಾಣ ಮಾಡಬೇಕಾಗಿದೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಗ್ರಾಮಕ್ಕೆ ಬೇಟಿ ಕೊಟ್ಟ ಶೀಘ್ರದಲ್ಲೇ ದುರಸ್ತಿ ಮಾಡದಿದ್ದರೆ ಸಿದ್ದರಾಮಯ್ಯ ಯುವ ಬ್ರಿಗೇಡ್ ಗಬ್ಬೂರು ಹೋಬಳಿ ಘಟಕ ವತಿಯಿಂದ ಹೋರಾಟ ಮಾಡಲಾಗುತ್ತದೆ ಎಂದು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಯುವ ಬ್ರಿಗೆಡ್ ಒತ್ತಾಯಿಸಿದ್ದಾರೆ.