ಖಾದಿ ಬಳಸಿ ಅದನ್ನ ಪ್ರೋತ್ಸಾಹಿಸಿ

 ಚಿತ್ರದುರ್ಗ. ಅ.೨೧; ಖಾದಿ ನಮ್ಮ ರಾಷ್ಟ್ರೀಯ ಭಾವೈಕ್ಯದ, ಸಂಘಟನೆಯ ಸಂಕೇತ. ಭಾರತವನ್ನ ಸ್ವಾತಂತ್ರ್ಯಗೊಳಿಸಲು, ಆರ್ಥಿಕ ಸಹಾಯ ನೀಡಿದಂಥ ಖಾದಿಯನ್ನು ಜನರು ದಿನನಿತ್ಯ ಬಳಕೆ ಮಾಡಿದರೇ ಗ್ರಾಮೀಣ ಜನರ ಬದುಕಿಗೆ ಆಸರೆ ನೀಡಿದಂತಾಗುತ್ತದೆ.ಬಡತನ ನಿವಾರಣೆಗೆ ಸಹಕರಿಸಿದಂತೆ ಅಗುತ್ತದೆ ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾಧ್ಯಕ್ಷರಾದಡಾ.ಹೆಚ್.ಕೆ.ಎಸ್.ಸ್ವಾಮಿ ತಿಳಿಸಿದರು.ಅವರು ಶಿವಮೊಗ್ಗದ ಸವಳಂಗ ಬಳಿ ಶಿಕಾರಿಪುರ ರಸ್ತೆಯಲ್ಲಿರುವ ಸೇವಾಲಾಲ್ ಆಶ್ರಮದಲ್ಲಿ ಯೋಗವಿಸ್ಮಯ ಸಂಸ್ಥೆಹಮ್ಮಿಕೊಂಡಿದ್ದ ಯೋಗ ಮತ್ತು ಖಾದಿ ಜನಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.ಈಗಲೂ ಸಹ ಗ್ರಾಮೀಣ ಜನರ ಬದುಕು ದುಸ್ಥಿತಿಯಲ್ಲಿದೆ. ಮಳೆಯನ್ನೇ ನಂಬಿ, ಬದುಕುವ ರೈತರಿಗೆ, ಅತಿವೃಷ್ಟಿ ಅನಾವೃಷ್ಟಿಯಿಂದ, ನಷ್ಟವುಂಟಾದ ಸಂದರ್ಭದಲ್ಲಿ ಸಹಾಯಕ್ಕೆ ಬರುವುದು. ಖಾದಿ ಕಡಿಮೆ ಕೌಶಲ್ಯ ವಿದ್ದರೂ ಸಹ. ಬದುಕನ್ನ ರೂಪಿಸಲು ಸಹಕಾರಿಯಾಗಿದೆ, ಮೊದಲು ಚರಕ ಪ್ರತಿ ಮನೆಯಲ್ಲೂ ಸಹ ತನ್ನ ನಾದವನ್ನು ಹೊಮ್ಮಿಸುತ್ತಿತ್ತು. ಒಂದಾನೊಂದು ಕಾಲದಲ್ಲಿ ಬಡವರ‍ ಬದುಕಿಗೆ ಜೀವವಿಮೆಯಂತೆ ಕೆಲಸ ಮಾಡಿತ್ತು. ಆದರೆ ಇಂದು ತಾಂತ್ರಿಕ ಅಭಿವೃದ್ಧಿಯನೆಪದಲ್ಲಿ ನಾವು ಗ್ರಾಮೀಣ ಉದ್ದಿಮೆಗಳನ್ನು ನಾಶ ಮಾಡಿಕೊಂಡಿದ್ದೇವೆ. ಅದನ್ನ ಮತ್ತೆ ಸಮಾಜದಲ್ಲಿ  ಪ್ರತಿಷ್ಠಾಪಿಸಲುಎಲ್ಲಾ ಯೋಗ ಮಂದಿರಗಳಲ್ಲಿ, ಯೋಗ ಶಿಬಿರಾರ್ಥಿಗಳ ಮನಸ್ಸಿನಲ್ಲಿ ಖಾದಿಯ ಬಗ್ಗೆ ಅಭಿಮಾನ ಮೂಡಿದಾಗ, ಭಾರತೀಯ ಯೋಗದ ಜೊತೆಗೆ, ಭಾರತೀಯ ಉಡುಪಿನ ಪರಿಚಯವಾದಂತಾಗುತ್ತದೆ. ಮಕ್ಕಳಲ್ಲೂ ಖಾದಿಯ ಬಗ್ಗೆ ಅಭಿಮಾನ ಮೂಡಿಸಿ, ಅವರಿಗೆ ದಿನನಿತ್ಯ ತೊಡಲು, ಮದುವೆ ಕಾರ್ಯಕ್ರಮಗಳಲ್ಲಿ, ಸಮಾರಂಭಗಳಲ್ಲಿ, ಖಾದಿಯ ಬಳಕೆಮಾಡಿ,  ಅದರ ಗೌರವವನ್ನು ಹೆಚ್ಚಿಸಬೇಕಿದೆ ಎಂದರು.ಬಡವರು ಮತ್ತು ಶ್ರೀಮಂತರ ಮಧ್ಯೆ ಏರ್ಪಟ್ಟಿರುವ ಅಂತರವನ್ನು ಕಡಿಮೆಗೊಳಿಸಲು ಖಾದಿ ಸಹಕಾರಿಯಾಗಿದೆ, ಖಾದಿಯ ಬಗ್ಗೆ ಜನಜಾಗೃತಿಯಿಂದ ಮೂಡಿಸಿದಾಗ ಪ್ರತಿಯೊಬ್ಬರ ಮನಸ್ಸಿನಲ್ಲೂ ಸಹ ಅದರ ಬಗ್ಗೆ ಪ್ರೀತಿ ಗೌರವ, ಆದರ ಉಂಟಾಗುತ್ತದೆ. ಅಂತಹ ಕೆಲಸವನ್ನು ಸಂಘ ಸಂಸ್ಥೆಗಳು, ಸರ್ಕಾರದ ಇಲಾಖೆಗಳು, ಹೆಚ್ಚಿನ ಮಟ್ಟದಲ್ಲಿ ಮಾಡಬೇಕಾಗಿದೆ. ಕೃತಕ ನೂಲು ಪ್ಲಾಸ್ಟಿಕ್ ನೂಲು ವಿದೇಶಿ ನೂಲಿನ ಬಗೆಗಿನ ವ್ಯಾಮೋಹವನ್ನು ತೊರೆದು ನಮ್ಮ ದೇಶೀಯ ವಸ್ತುಗಳನ್ನ, ಸ್ವದೇಶಿ ವಸ್ತುಗಳನ್ನೇ ಬಳಕೆ ಮಾಡುವ ಮನಸ್ಸು ಮಾಡಬೇಕಾಗಿದೆ. ನಮ್ಮ  ದುಡಿಮೆಯ ಹಣ ನಮ್ಮದಲ್ಲ,ನಮ್ಮ ನೆಲದಲ್ಲೇ ಉಳಿದುಕೊಳ್ಳುತ್ತದೆ. ನಮ್ಮ ಸುತ್ತಮುತ್ತಲಿನವರಿಗೆ ಸಹಾಯ ಹಸ್ತವನ್ನು ಚಾಚಲು ಖಾದಿ ಸಹಕಾರಿಯಾಗಿದೆ.ವಿದೇಶಿ ಸಂಸ್ಕೃತಿ, ಪಾಶ್ಚಿಮಾತ್ಯ ಸಂಸ್ಕೃತಿಗೆ ವಿರುದ್ಧವಾಗಿ ಖಾದಿ ಈಜಬೇಕಾಗಿದೆ. ಭಾರತೀಯ ಉಡುಪಿನಲ್ಲಿ ಯಾವುದೇವ್ಯತ್ಯಯವಾಗದಂತೆ, ಹಳೆಯ ಸಂಪ್ರದಾಯವನ್ನು ಉಳಿಸಿಕೊಂಡು, ಬಂದಿರುವಂತಹ ಖಾದಿಗೆ ಇಂದು ಹೆಚ್ಚಿನ ಮಟ್ಟದಪ್ರೋತ್ಸಾಹ ಬೇಕಾಗಿದೆ. ಶ್ರೀಮಂತರು ಹೆಚ್ಚೆಚ್ಚು ಖಾದಿ ಖರೀದಿಸಿ, ಬಡ ಜನರಿಗೆ ಅನುಕೂಲ ಮಾಡಿಕೊಡಬಹುದಾಗಿದೆ.ಶಾಲಾ ಕಾಲೇಜಿಗಳಲ್ಲಿ ಯೂನಿಫಾರಂನಲ್ಲೂ ಸಹ ಖಾದಿಯನ್ನು ಅಳವಡಿಸಿಕೊಳ್ಳುವಂತಹ ಪ್ರಯೋಗಗಳಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ವೇಗ ವಿಸ್ಮಯ ಸಂಸ್ಥೆಯ ಯೋಗ ಗುರೂಜಿಗಳಾದ ಶ್ರೀ ಅನಂತ್‌ಜಿ, ಶ್ರೀಮತಿ ಕುಮುದ, ಶ್ರೀಮತಿ ಮೇನಕಾ, ಹರೀಶ್, ಹರ್ಷ, ಬಾಲಕೃಷ್ಣ ನೂರಕ್ಕೂ ಹೆಚ್ಚು ಯೋಗ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.