ಖಾದಿ ಗ್ರಾಮೋದ್ಯೋಗ ಅವಸಾನದತ್ತ ಸಾಗುತ್ತಿದೆ : ನೀರಲಕೇರಿ

ಧಾರವಾಡ,ಜು30 : ದೇಶದ ಸ್ವಾಭಿಮಾನದ ಪ್ರತೀಕವಾದ ಖಾದಿ ಗ್ರಾಮೋದ್ಯೋಗ ಅವಸಾನದತ್ತ ಸಾಗುತ್ತಿದೆ ಎಂದು ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಪಿ ಎಚ್ ನೀರಲಕೇರಿ ತಿಳಿಸಿದರು.
ಧಾರವಾಡದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ದೇಶದ ಧ್ವಜ ವಿಚಾರದಲ್ಲೂ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದರು.
ಸರ್ಕಾರ ಪ್ರಕಟಿಸಿದ ಅಮೈಡಮೆಂಟ್ ನಿಂದ ಗ್ರಾಮೋದ್ಯೋಗ ಸಂಕಷ್ಟ ಎದುರಿಸುವಂತಾಗಿದೆ. ಅಂದಿನ ಕಾಂಗ್ರೆಸ್ ಭಾವೈಕ್ಯತೆಯ ಸಿದ್ದಾಂತ, ಏಕತೆ ಸಿದ್ಧಾಂತ, ಗ್ರಾಮೋದ್ಯೋಗ ಸಿದ್ಧಾಂತದಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಖಾದಿ ಬಟ್ಟೆ ಪ್ರಮುಖ ಪಾತ್ರ ವಹಿಸುತ್ತದೆ. ಕರ್ನಾಟಕ ರಾಜ್ಯದಲ್ಲಿ ಸುಮಾರು ಮೂರು ಸಾವಿರ ಕುಟುಂಬಗಳು ಬೀದಿಗೆ ತಂದಿದೆ ಎಂದು ಆರೋಪಿಸಿದರು.
ಈ ಕೂಡಲೇ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಖಾದಿ ಗ್ರಾಮೋದ್ಯೋಗ ಉಳಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ವತಿಯಿಂದ ಹಲವಾರು ಯೋಜನೆಗಳನ್ನು ರೂಪಿಸಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಭೀಮಸೇನ ಕಾಗೆ, ನರಹರಿ ಕಾಗಿನೆಲ್ಲಿ, ವಿರುಪಾಕ್ಷಪ್ಪ ಕುಂಗವಾಡ ಇದ್ದರು.