ಖಾತ್ರಿ ಸಮಯದಲ್ಲಿ ಪರಿಸರ ಪ್ರಜ್ಞೆ. ಸಸಿ ನೆಟ್ಟು ಪರಿಸರ ದಿನಾಚರಣೆ ಆಚರಿಸಿದ ದಿಬ್ಬದಹಳ್ಳಿ ಗ್ರಾಮಸ್ಥರು.

ಕೂಡ್ಲಿಗಿ.ಜೂ. 5:- ಉದ್ಯೋಗ ಖಾತ್ರಿ ಯೋಜನೆ ಸದುಪಯೋಗ ಪಡೆದುಕೊಳ್ಳುವ ಜೊತೆಗೆ ಇಂದು ತಾಲೂಕಿನ ದಿಬ್ಬದಹಳ್ಳಿ ಸದಸ್ಯರು ತಮ್ಮ ಗ್ರಾಮಸ್ಥರೊಂದಿಗೆ ಸೇರಿ ಇಂದು ಬೆಳಿಗ್ಗೆ ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಿದರು.
ಈ ಸಂದರ್ಭದಲ್ಲಿ ದಿಬ್ಬದಹಳ್ಳಿ ಗ್ರಾಮದ ಮುಖಂಡ ಹಾಗೂ ಜರ್ಮಲಿ ಗ್ರಾಮಪಂಚಾಯಿತಿ ಸದಸ್ಯ ಸಿದ್ದೇಶ್ವರ ಮಾತನಾಡಿ ನಮ್ಮ ಸುತ್ತಮುತ್ತಲಿನ ಉತ್ತಮ ಪರಿಸರವೇ ನಮ್ಮ ಆರೋಗ್ಯಕ್ಕೆ ಮುಖ್ಯ ಕಾರಣ ಇಂದು ಪರಿಸರ ಕಾಳಜಿ ಮರೆತು ಅದನ್ನು ನಾಶಮಾಡಿ ಅನೇಕ ಮಹಾಮಾರಿ ಖಾಯಿಲೆಯನ್ನು ನಮ್ಮ ಹತ್ತಿರ ಸುಳಿಯುವಂತೆ ಮಾಡಿಕೊಳ್ಳುತ್ತಿದ್ದು ಪರಿಸರ ದಿನಾಚರಣೆಯ ದಿನದಂದು ಸಸಿ ನೆಡದೆ ಪ್ರತಿದಿನವೂ ಪರಿಸರ ದಿನಾಚರಣೆ ಎಂಬಂತೆ ಸಸಿ ನೆಟ್ಟು ಉತ್ತಮ ಪರಿಸರ ಸೃಷ್ಟಿಸಿದಲ್ಲಿ ಎಂತಹ ಖಾಯಿಲೆಯನ್ನು ಹೊಡೆದೋಡಿಸುವ ಶಕ್ತಿ ಪರಿಸರಕ್ಕಿದೆ ಎಂದು ತಿಳಿಸಿದರು. ಮತ್ತೋರ್ವ ಸದಸ್ಯೆ ಗೌರಮ್ಮ ಹಾಗೂ ಇತರರು ಮಾತನಾಡಿ ಪರಿಸರ ಬೆಳೆಸಲು ಪ್ರತಿಯೊಬ್ಬರೂ ಮುಂದಾಗಬೇಕು ಪ್ರತಿ ಮನೆ ಮುಂದೆ ಹೊಲಗಳಲ್ಲಿ, ರಸ್ತೆ ಬದಿಗಳಲ್ಲಿ ಸಸಿಗಳನ್ನು ನೆಟ್ಟು ಉತ್ತಮ ಪರಿಸರ ನಿರ್ಮಾಣಕ್ಕೆ ನಾವೆಲ್ಲರೂ ನಾಂದಿ ಹಾಡೋಣ ಮತ್ತು ಪರಿಸರ ಪ್ರಜ್ಞೆ ಮೂಡಿಸುವ ಅರಣ್ಯ ಇಲಾಖೆ ಹಾಗೂ ಗ್ರಾಮಪಂಚಾಯಿತಿ ಅಧಿಕಾರಿಗಳಿಗೆ ನಾವೆಲ್ಲರೂ ಅಭಿನಂದನೆ ತಿಳಿಸಬೇಕು ಎಂದರು. ಈ ಸಂದರ್ಭದಲ್ಲಿ ದಿಬ್ಬದಹಳ್ಳಿ ಗ್ರಾಮದ ನರೇಗಾ ಕೂಲಿಕಾರ್ಮಿಕರು ಗ್ರಾಮಪಂಚಾಯಿತಿ ಸದಸ್ಯರು ಹಾಗೂ ಗ್ರಾಮದ ಜನತೆ ಉಪಸ್ಥಿತರಿದ್ದು ಸಸಿ ನೆಡುವ ಮೂಲಕ ಪರಿಸರ ದಿನಾಚರಣೆ ಆಚರಿಸಿದರು.