ಖಾಜಾ ಬಂದಾನವಾಜ್ ಉರುಸ್: ಬಂದೋಬಸ್ತ್ ಕುರಿತು ಸಭೆ

ಕಲಬುರಗಿ.ಮೇ.29: ಇದೇ ಜೂನ್ 5ರಂದು ಪ್ರಸಿದ್ಧ ಖಾಜಾ ಬಂದೇ ನವಾಜ್ ಉರುಸ್ ಪ್ರಾರಂಭವಾಗಲಿದ್ದು, ಸೂಕ್ತ ಬಂದೋಬಸ್ತ್ ಕುರಿತು ಸೋಮವಾರ ದರ್ಗಾ ಶರೀಫ್ ಸಭಾಂಗಣದಲ್ಲಿ ಹಿರಿಯ ಪೋಲಿಸ್ ಅಧಿಕಾರಿಗಳು ದರ್ಗಾದ ಆಡಳಿತ ಮಂಡಳಿಯವರೊಂದಿಗೆ ಸಭೆಯನ್ನು ಮಾಡಿದರು.
ಖಾಜಾ ಬಂದೇ ನವಾಜ್ ದರ್ಗಾದ ಹಫೀಜ್ ಸೈಯದ್ ಮುಹಮ್ಮದ್ ಅಲಿ ಅಲ್ ಹುಸೇನಿ ಜನಶೀನ್ ಎ ಸಜ್ಜಾದ್ ನಶೀನ್ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ನಗರ ಪೋಲಿಸ್ ಆಯುಕ್ತ ಚೇತನ್ ಆರ್., ಉಪ ಆಯುಕ್ತ ಅಡ್ಡೂರು ಶ್ರೀನಿವಾಸಲು, ಸಹಾಯಕ ಪೋಲಿಸ್ ಆಯುಕ್ತ ದೀಪನ್ ಎಂ.ಎನ್., ಸಂಚಾರಿ ಪೋಲಿಸ್ ಇಲಾಖೆಯ ವೃತ್ತ ನರೀಕ್ಷಕಿ ಶ್ರೀಮತಿ ಸುಧಾ ಆದಿ, ಮೊಹ್ಮದ್ ರಹೀಮ್, ಬಿ.ಎಸ್. ಪಾಟೀಲ್, ಕಾರ್ಯದರ್ಶಿ ಡಾ. ಸೈಯದ್ ಮುಸ್ತಫಾ ಅಲ್ ಹುಸೇನಿ, ಸೈಯದ್ ಜಾಕಿ ಹುಸೇನಿ, ಸೈಯದ್ ವಾಜೀದ್ ಮುಂತಾದವರು ಪಾಲ್ಗೊಂಡಿದ್ದರು.
ಮೇ 5ರಂದು ಸಂದಲ್ ಮೆರವಣಿಗೆ, 6ರಂದು ಚಿರಾಗ್, 6ರಂದು ಜಿಯಾರತ್ ಕಾರ್ಯಕ್ರಮಗಳು ಜರುಗಲಿದ್ದು, ಸೂಕ್ತ ಬಂದೋಬಸ್ತ್‍ಗಾಗಿ ಹಿರಿಯ ಅಧಿಕಾರಿಗಳು ಆಡಳಿತ ಮಂಡಳಿಯೊಂದಿಗೆ ಸಭೆಯನ್ನು ಮಾಡಿದರು.