
ಲಿವಿಂಗ್ ಟುಗೆದರ್ ರಿಲೇಶನ್ ಶಿಪ್ ಕಥಾಹಂದರ ಹೊಂದಿರುವ” ಪ್ರೇಮಿಗಳ ಗಮನಕ್ಕೆ” ಚಿತ್ರ ನಿರ್ಮಿಸಿ ನಿರ್ಮಾಪಕನೂ ಆಗಿರುವ ಸುಬ್ಬು ಚಿತ್ರದಲ್ಲಿ ಖಳನಟನಾಗಿಯೂ ಗಮನ ಸೆಳಿದಿದ್ದಾರೆ.
ಚಿತ್ರರಂಗದಲ್ಲಿ ಪೋಲೀಸ್ ಅಧಿಕಾರಿ ಅಥವಾ ಖಳನಟನಾಗಿ ಮುಂದುವರಿಯಬೇಕು ಎನ್ನುವ ಮಹದಾಸೆ ಹೊಂದಿದ್ದಾರೆ. ವಿಶಿಷ್ಟ ವ್ಯಕ್ತಿತ್ವದ ನಟ ಪ್ರಕಾಶ್ ರೈ ಅವರಂತೆ ಚಿತ್ರರಂಗದಲ್ಲಿ ತಾವೂ ಗುರುತಿಸಿಕೊಳ್ಳಬೇಕು, ಉತ್ತಮ ಖಳನಾಯಕ ಎಂದು ಇಂಡಸ್ಡ್ರಿಯಲ್ಲಿ ಹೆಸರು ಮಾಡಬೇಕು ಎನ್ನುವ ಕನಸುಕಂಡಿದ್ದಾರೆ.
ಮಂಜುಕವಿ ನಿರ್ದೇಶನದ “ಸ್ಟೇಟಸ್” ಚಿತ್ರದಲ್ಲಿ ನಟ ಸುಬ್ಬು ಸೋಷಿಯಲ್ ವರ್ಕರ್ ಡಾ.ಸುಬ್ಬು ಹೆಸರಿನ ಪಾತ್ರ ನಿರ್ವಹಿಸಿ ಗುರುತಿಸಿಕೊಂಡಿದ್ದರು. ಆನಂತರ “ಮಿಸ್ ಗೈಡ್” ಚಿತ್ರದ ಮೂಲಕ ಖಳನಾಯಕನಾಗಿ ಗುರುತಿಸಿಕೊಂಡು ಗಮನ ಸೆಳೆದಿದ್ದಾರೆ.ಸುಬ್ಬರಾವ್ ಎಂದೃ ಚಿತ್ರರಂಗದಲ್ಲಿ ಸುಬ್ಬು.
ಒಮ್ಮೆ ರಾಘವ ನೋಡಿ ಖಳನಟನ ಹಾಗೆ ಕಾಣುತ್ತೀಯ ಎಂದು ಹೇಳಿದ್ದರಂತೆ. ಅವರ ಮಾತನ್ನೇ ವೇದವಾಕ್ಯದಂತೆ ತೆಗೆದುಕೊಂಡ ಸುಬ್ಬು ರಾಘವ ಅವರ ಬಳಿಯೇ ಅಭಿನಯದ ಪಾಠ ಕಲಿತರಂತೆ. ಮುಂದೆ ಪ್ರೇಮಿಗಳ ಗಮನಕ್ಕೆ ಚಿತ್ರ ಜುಲೈನಲ್ಲಿ ತೆರೆಕಾಣಲಿದೆ. ಇದರಲ್ಲಿ ಬಿಗ್ ಬಾಸ್ ಶಶಿ, ಚಿರಶ್ರೀ ಅಂಚನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.