ಖರ್ಗೆ ಹುಟ್ಟು ಹಬ್ಬ: ಅಂಧ ಮಕ್ಕಳಿಗೆ ಕ್ರಿಕೆಟ್ ಪಂದ್ಯಾವಳಿ

ಕಲಬುರಗಿ,ಜು.23-ಪ್ರತಿ ಮಗುವಿನಲ್ಲೂ ಅದ್ಭುತವಾದ ಶಕ್ತಿ ಇರುತ್ತದೆ. ಅಂತೆಯೇ ವಿಕಲಚೇತನ ಮಕ್ಕಳಿಗೆ ದೇವರು ವಿಶಿಷ್ಟವಾದ ಶಕ್ತಿ ನೀಡಿರುತ್ತಾನೆ. ಈ ಮಕ್ಕಳು ಆಟೋಟ, ಕಲೆ, ಸಾಹಿತ್ಯ ರಂಗಗಳಲ್ಲಿ ವಿಶಿಷ್ಠ ಸಾಧನೆ ಮಾಡಲು ಸಾಧ್ಯವಿದೆ. ಅಂಧ ಮಕ್ಕಳಿಗಾಗಿ ಶ್ರೀದೇವಿ ಸಂಗೀತ ಸಾಹಿತ್ಯ ಸಾಂಸ್ಕøತಿಕ ಛಾಯಾ ಚಿತ್ರಕಲಾ ಸಂಸ್ಥೆ ಕ್ರಿಕೆಟ್ ಪಂದ್ಯಾವಳಿ ಏರ್ಪಡಿಸಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ವೆಂಕಟೇಶ ದೇಶಪಾಂಡೆ ಹೇಳಿದರು.
ನಗರದ ಸರಕಾರಿ ಅಂಧ ಬಾಲಕರ ಶಾಲೆಯಲ್ಲಿ ರಾಜ್ಯ ಸಭೆಯ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ 81ನೇ ಹುಟ್ಟುಹಬ್ಬ ನಿಮಿತ್ಯವಾಗಿ ಜಿಲ್ಲೆಯ ಅಂಧ ಮಕ್ಕಳಿಗಾಗಿ ಆಯೋಜಿಸಿದ್ದ ಕ್ರಿಕೇಟ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿರುವ ಸೇವಾ ಸಂಸ್ಥೆಗಳ ಸಹಕಾರ, ಮಾರ್ಗದರ್ಶನ ಈ ಮಕ್ಕಳಿಗೆ ಸದಾ ಇರಲಿ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಬಿ.ಎಂ.ರಾವೂರ ಮಾತನಾಡಿ, ರಾಜ್ಯ ಸಭೆಯ ಪ್ರತಿಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಬಾಲ್ಯ ಜೀವನದಲ್ಲಿ ಉತ್ತಮ ಹಾಕಿ ಪಟುವಾಗಿದ್ದರು, ಅಂತೆಯೇ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ದಿಗೆ ಸಾಕಷ್ಟು ಶ್ರಮಿಸಿದ್ದಾರೆ ಎಂದರು.
ಕ್ರಿಕೇಟ್ ಪಂದ್ಯಾವಳಿಯಲ್ಲಿ ಪ್ರಶಾಂತ ಕೂಡಿ ತಂಡ ಗೆಲುವು ಸಾಧಿಸಿತು. ಪ್ರಶಾಂತ ಪಲ್ಲೇದ ತಂಡ ರನ್ನರ್ ಅಪ್ ಆಯಿತು. ಉತ್ತಮ ಬ್ಯಾಟ್ಸ್‍ಮನ್ ಪ್ರಶಾಂತ್, ಉತ್ತಮ ಬೌಲರ್ ನಾಗಣ್ಣ, ತಂಡಗಳಿಗೆ ಪ್ರಶಸ್ತಿ ಹಾಗೂ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಸಂಸ್ಥೆಯ ಅಧ್ಯಕ್ಷÀ ಶರಣಪ್ಪ ಶಿಂಪಿ, ರಾಜ್ಯ ಯುವ ಪ್ರಶಸ್ತಿ ಪುರಸ್ಕøತರಾದ ಬಸವರಾಜ ತೋಟದ್, ವಿಕಲಚೇತನ ಕಾರ್ಯಾಲಯದ ಅಧೀಕ್ಷಕರಾದ ಸಂಗಮ್ಮ, ಸಂಗೀತಾ, ಸಿಬ್ಬಂದಿವರ್ಗ ಮತ್ತು ಮಲ್ಲಿಕಾರ್ಜುನ ಹವಣಿ, ಶಿವಕುಮಾರ ರಾಗಿ, ಮಡಿವಾಳೇಶ್ವರ ದೊಡ್ಡಮನಿ, ದೇವರಾಜ,ವಾಸುದೇವ, ಆಕಾಶ, ಪ್ರಕಾಶ ಎಂ. ಶೇರಖಾನೆ, ವಿಶ್ವನಾಥ ಹಾಗೂ ಇತರರು ಉಪಸ್ಥಿತರಿದ್ದರು.