ಖರ್ಗೆ ಜನ್ಮದಿನ: ಉಚಿತ ಆರೋಗ್ಯ ತಪಾಸಣೆ

ಕಲಬುರಗಿ,ಜು.22-ರಾಜ್ಯಸಭೆ ಪ್ರತಿಪಕ್ಷದ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ ಅವರ 80ನೇ ಜನ್ಮದಿನದ ಪ್ರಯುಕ್ತ ಬಿಲಗುಂದಿ ಫೌಂಡೇಶನ್ ವತಿಯಿಂದ ಕಣ್ಣಿ ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು.
150 ಜನರಿಗೆ ಉಚಿತ ಆರೋಗ್ಯ ತಪಾಸಣೆ ನಡೆಸಿ ಉಚಿತವಾಗಿ ಔಷಧಿ ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ಅನೇಕ ಜನ ರಕ್ತದಾನ ಮಾಡಿದರು.
ಕಾಂಗ್ರೆಸ್ ಯುವ ಮುಖಂಡರಾದ ಸಂತೋಷ್ ಬಿ ಬಿಲಗುಂದಿ, ಮಜರ್ ಅಲಂ ಖಾನ್, ಕಿರಣ್ ದೇಶಮುಖ್, ಫಾರೂಕ್, ಮಾನಿಯಾಲ್, ನಾಗರಾಜ್ ಕಂಬಳ್ಳಿ, ಈರಣ್ಣ ಝಳಕಿ, ಓಯಜ ಶೇಕ್, ಗಿರೀಶ್ ಬೋರೆ,ರಮೇಶ್ ಚೌವ್ಹಾಣ್, ಸೋಮಣ್ಣ ಸೋಮು, ವೈಜನಾಥ್ ಮಾಲಿಪಾಟೀಲ, ಮಹೇಂದ್ರ, ಕೋಳ್ಳೂರ, ವಿಜಯ ಕುಮಾರ್ ಪಾಟೀಲ್,ಹಣಮಂತ ಚಲಗೇರಿ,ಶರಣು ಗೊಬ್ಬರು, ಶರಣು ಭಾವಿಕಟ್ಟಿ, ಶಿವಾನಂದ ಹೂಗಾರ, ಹಣಮಂತ ಗಿರೇಪಗೌಡ, ತೇಜುರಾವ ಅಲಗೂಡ ಇದ್ದರು.