ಖರ್ಗೆ ಜನ್ಮದಿನ ಆಚರಣೆವೃದ್ಧರಿಗೆ ಸೀರೆ, ವಿದ್ಯಾರ್ಥಿಗಳಿಗೆ ನೋಟ್‍ಪುಸ್ತಕ ವಿತರಣೆ

ಬೀದರ್:ಜು.22: ಇಂಡಿಯನ್ ಕ್ರಿಶ್ಚಿಯನ್ ವೆಲ್‍ಫೇರ್ ಅಸೋಸಿಯೇಷನ್ ವತಿಯಿಂದ ವೃದ್ಧ ಮಹಿಳೆಯರಿಗೆ ಸೀರೆ, ಬಡ ವಿದ್ಯಾರ್ಥಿಗಳಿಗೆ ನೋಟ್‍ಪುಸ್ತಕ ಹಾಗೂ ರೋಗಿಗಳಿಗೆ ಹಣ್ಣುಹಂಪಲು ವಿತರಿಸುವ ಮೂಲಕ ನಗರದಲ್ಲಿ ರಾಜ್ಯಸಭೆ ಪ್ರತಿ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ 80ನೇ ಜನ್ಮದಿನವನ್ನು ವಿಶಿಷ್ಟವಾಗಿ ಅಚರಿಸಲಾಯಿತು.

ಜಂಬಗಿ ಕಾಲೊನಿಯಲ್ಲಿ ವೃದ್ಧ ಮಹಿಳೆಯರಿಗೆ ಸೀರೆ, ಲೇಬರ್ ಕಾಲೊನಿಯಲ್ಲಿ ಬಡ ವಿದ್ಯಾರ್ಥಿಗಳಿಗೆ ನೋಟ್‍ಪುಸ್ತಕ ವಿತರಣೆ ಮಾಡಲಾಯಿತು. ಬ್ರಿಮ್ಸ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು.

ಸಾಮಾಜಿಕ ಚಟುವಟಿಕೆ ಮೂಲಕ ನಗರದಲ್ಲಿ ಖರ್ಗೆ ಅವರ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಗಿದೆ ಎಂದು ಇಂಡಿಯನ್ ಕ್ರಿಶ್ಚಿಯನ್ ವೆಲ್‍ಫೇರ್ ಅಸೋಸಿಯೇಷನ್ ರಾಜ್ಯ ಅಧ್ಯಕ್ಷ ಸಂಜಯ್ ಜಾಗೀರದಾರ್ ತಿಳಿಸಿದರು.

ಭಾಲ್ಕಿ ತಾಲ್ಲೂಕಿನ ವರವಟ್ಟಿ ಗ್ರಾಮದಲ್ಲಿ ಜನಿಸಿದ ಖರ್ಗೆ ಅವರು ಶಾಸಕ, ಸಚಿವ, ಸಂಸದ, ಕೇಂದ್ರ ಸಚಿವ, ಲೋಕಸಭೆಯ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕರಾಗಿ ಕಾರ್ಯ ನಿರ್ವಹಿಸಿದ್ದಾರೆ, ಸದ್ಯ ರಾಜ್ಯಸಭೆ ಪ್ರತಿ ಪಕ್ಷದ ನಾಯಕರಾಗಿ ಸೇವೆ ಸಲ್ಲಿಸುತ್ತಿರುವುದು ಜಿಲ್ಲೆಗೆ ಹಮ್ಮೆಯ ಸಂಗತಿಯಾಗಿದೆ ಎಂದು ಹೇಳಿದರು.

ಖರ್ಗೆ ಅವರು ಬೀದರ್-ಯಶವಂತಪುರ ಹೊಸ ರೈಲು, ಬೀದರ್-ಹೈದರಾಬಾದ್ ಇಂಟರ್‍ಸಿಟಿ ರೈಲು, ಸಂವಿಧಾನದ 371(ಜೆ) ಕಲಂ ತಿದ್ದುಪಡಿ ಸೇರಿದಂತೆ ಈ ಭಾಗಕ್ಕೆ ಹಲವು ಕೊಡುಗೆಗಳನ್ನು ನೀಡಿದ್ದಾರೆ ಎಂದು ಸ್ಮರಿಸಿದರು.

ಬ್ರಿಮ್ಸ್ ಆಸ್ಪತ್ರೆ ಅಧೀಕ್ಷಕ ಡಾ. ಶಿವಕುಮಾರ ಶೆಟಕಾರ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಮಹೇಶ ಬಿರಾದಾರ, ಮುಖಂಡ ಅಬ್ದುಲ್ ಮನ್ನಾನ್ ಸೇಠ್, ಏಜಾಜ್ ಖುರೇಶಿ, ಪಿಂಟು ಜಾಗೀರದಾರ್, ಸನ್ನಿ ಕಾಡವಾದ, ಆದಿತ್ಯ ದಂಡಿ ಕಾಡವಾದ, ಡಿ.ಕೆ. ಸಂಜುಕುಮಾರ, ಜಾಕೋಬ್, ಸಬಸ್ಟಿನ್, ಸ್ವಾಮಿದಾಸ್, ಸೋನು ಚಿದ್ರಿ, ಜೇಸನ್, ಪ್ರಶಾಂತ ಮೊದಲಾದವರು ಇದ್ದರು.