ಖರ್ಗೆ ಅವರ ಆಸೆಯಂತೆ ಬಡಜನರಿಗೆ ಸಹಾಯ ಮಾಡುವ ಮೂಲಕ ಹುಟ್ಟು ಹಬ್ಬ ಆಚರಣೆ: ಸುಮೀತ್ ಪಾಟೀಲ

ಅಫಜಲಪುರ:ಜು.22: ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಡಾ. ಮಲ್ಲಿಕಾರ್ಜುನ ಖರ್ಗೆ ಅವರ 80ನೇ ಜನ್ಮ ದಿನದ ನಿಮಿತ್ತವಾಗಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಸುಮೀತ್ ರಾಜೇಂದ್ರ ಪಾಟೀಲ್ ರೇವೂರ್ ಅವರ ನೇತೃತ್ವದಲ್ಲಿ ಬಡ ರೋಗಿಗಳಿಗೆ ಹಣ್ಣು ಹಂಪಲು
ವಿತರಿಸುವ ಮೂಲಕ ಸರಳವಾಗಿ ಖರ್ಗೆ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಿದರು.

ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಗೌರವಾಧ್ಯಕ್ಷ ಬಸಣ್ಣ ಗುಣಾರಿ, ಗುರು ಮೈಲೇಶಿ, ಶೇಖರ್, ಆನಂದ್ ಕುಂಬಾರ ಮತ್ತಿತರರು ಇದ್ದರು.