ಖರ್ಗೆ ಅಭಿನಂದನಾ ಸರ್ವೋದಯ ಸಮಾವೇಶಅಫಜಲಪುರ ಕ್ಷೇತ್ರದ ಟಿಕೇಟ್ ಆಕಾಂಕ್ಷಿಗಳಿಂದ ಶಕ್ತಿ ಪ್ರದರ್ಶನ….!

(ಗುಂಡೂರಾವ್ ಅಫಲಪೂರ)
ಅಫಜಲಪುರ:ನ.6:ಇನ್ನೇನು ಕೆಲವೇ ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು ಹೀಗಾಗಿ ಇಂದಿನಿಂದಲೇ ಕಾಂಗ್ರೆಸ್ ಪಕ್ಷದ ಟಿಕೆಟ್ ಸಲುವಾಗಿ ಭಾರಿ ಪೈಪೆÇೀಟಿ ಏರ್ಪಟ್ಟಿದ್ದು.ಕಾಂಗ್ರೆಸ್ ಪಕ್ಷದ ನಾಯಕರ ಮುಂದೆ ತಮ್ಮ ತಮ್ಮ ಶಕ್ತಿ ಪ್ರದರ್ಶನ ಮಾಡಲು ಕ್ಷೇತ್ರದ ಟಿಕೇಟ್ ಆಕಾಂಕ್ಷಿಗಳು ಮುಂದಾಗಿದ್ದಾರೆ.
ಎಐಸಿಸಿ ಅಧ್ಯಕ್ಷರಾದ ನಂತರ ಇದೇ ಮೊದಲ ಬಾರಿಗೆ ಬೆಂಗಳೂರಿಗೆ ಆಗಮಿಸುತ್ತಿರುವ ಡಾ.ಮಲ್ಲಿಕಾರ್ಜುನ ಖರ್ಗೆಯವರನ್ನು ಅದ್ದೂರಿಯಾಗಿ ಸ್ವಾಗತಿಸಲು ಈಗಾಗಲೇ ಕೆಪಿಸಿಸಿ ವತಿಯಿಂದ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.ಆದರೆ ಇದನ್ನೇ ಬಂಡವಾಳವನ್ನಾಗಿ ಮಾಡಿಕೊಂಡ ಜಿಲ್ಲೆಯ ಬಹುತೇಕ ಕಾಂಗ್ರೆಸ್ ಪಕ್ಷದ ಆಕಾಂಕ್ಷಿಗಳು ತಮ್ಮ ನಾಯಕರ ಮುಂದೆ ತಮ್ಮ ಶಕ್ತಿಯನ್ನು ಪ್ರದರ್ಶನ ಮಾಡಲು ಕ್ಷೇತ್ರದಿಂದ ವಿವಿಧ ವಾಹನಗಳ ಮೂಲಕ ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದಾರೆ.ಚುನಾವಣೆಯಲ್ಲಿ ಬಹಳಷ್ಟು ಕುತೂಹಲ ಮೂಡಿಸುವ ಹೈಟೆನ್ಷನ್
ಕ್ಷೇತ್ರವಾಗಿರುವ ಅಫಜಲಪುರ ಮತಕ್ಷೇತ್ರದಲ್ಲಿ ಈಗ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ ಕ್ಷೇತ್ರ ಮತದಾರರು, ರಾಜಕೀಯ ಪುಡಾರಿಗಳು ದಿನ ಬೆಳಗಾದರೆ ಸಾಕು ಹಳ್ಳಿಕಟ್ಟೆಯಲ್ಲಿ ಕುಳಿತುಕೊಂಡು ಈ ಬಾರಿ ಯಾರು ಶಾಸಕರಾದರೆ ಉತ್ತಮ ಹಾಗೂ ಯಾವ ಪಕ್ಷದಿಂದ ಯಾರು ಅಭ್ಯರ್ಥಿಯಾಗುತ್ತಾರೆ ಆದರೆ ಯಾರ ಗೆಲುವಿಗೆ ಅನುಕೂಲವಾಗಲಿದೆ ಎಂಬುವುದರ ಬಗ್ಗೆ ಗುಸು-ಗುಸು ಚರ್ಚೆ ನಿರಂತರವಾಗಿ ನಡೆಯುತ್ತಿವೆ.
ಇದರ ಮಧ್ಯೆ ಕಳೆದ ಆಗಸ್ಟ್ 3ರಂದು ದಾವಣಗೆರೆಯಲ್ಲಿ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರ 75ನೇ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಶಾಸಕ ಎಂ.ವೈ.ಪಾಟೀಲ್ ಹಾಗೂ ಸಮಾಜ ಸೇವಕ ಜೆ.ಎಂ.ಕೊರಬು ನಡುವೆ ಜನರನ್ನು ಕರೆದುಕೊಂಡು ಹೋಗಲು ತೀವ್ರ ಪೈಪೆÇೀಟಿ ಏರ್ಪಟ್ಟಿತ್ತು.
ಈಗ ಇಂಥದ್ದೇ ಪರೀಕ್ಷೆ ಈ ಇಬ್ಬರ ನಾಯಕರ ನಡುವೆ ಏರ್ಪಟ್ಟಿದೆ.ಇಂದು ಬೆಂಗಳೂರಿನಲ್ಲಿ ನಡೆಯಲಿರುವ ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆ ಅವರಿಗೆ
ಅಭಿನಂದನಾ ಸರ್ಮೋದಯ ಸಮಾವೇಶಕ್ಕೂ ಸಹ ಜನರನ್ನು ಕರೆದುಕೊಂಡು ಹೋಗಲು ಶಾಸಕ ಎಂ.ವೈ.ಪಾಟೀಲ್ ಅವರು ಪ್ರತಿ ಒಂದು ಜಿಪಂ ಕ್ಷೇತ್ರಕ್ಕೊಂದು ಬಸ್ ವ್ಯವಸ್ಥೆ ಕಲ್ಪಿಸಿದ್ದಾರೆ.ಅದೇ ರೀತಿ ಸಮಾಜ ಸೇವಕ ಜೆ.ಎಂ.ಕೊರಬು ಕಾರ್ಯಕರ್ತರಿಗೆ ತೆರಳಲು ಕ್ಲೋಜರ್ ವಾಹನಗಳ ವ್ಯವಸ್ಥೆ ಕಲ್ಪಿಸಿದ್ದಾರೆ.ಹೀಗಾಗಿ ಜನರನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿ ಕೇಂದ್ರ ಹಾಗೂ ರಾಜ್ಯ ನಾಯಕರನ್ನು ಮುಂದೆ ತಮ್ಮ ಶಕ್ತಿಯನ್ನು ಪ್ರದರ್ಶನ ಮಾಡಲು ಮುಂದಾಗಿದ್ದಾರೆ.
ಆದರೆ ಶಾಸಕ ಎಂ.ವೈ.ಪಾಟೀಲ್ ಈ ಬಾರಿ ವಯಸ್ಸಿನ ಸಮಸ್ಯೆಯಿಂದಾಗಿ ಚುನಾವಣೆಗೆ ನಿಲ್ಲೋದಿಲ್ಲ ಅವರ ಬದಲಾಗಿ ಅವರ ಪುತ್ರ ಅರುಣಕುಮಾರ ಎಂ.ವೈ.ಪಾಟೀಲ್ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಆಪ್ತ ವಲಯಗಳಿಂದ ಕೇಳಿ ಬರುತ್ತಿವೆ.
ಆದರೆ ಇನ್ನೂoದು ಕಡೆ ಸಮಾಜ ಸೇವಕ ಜೆ.ಎಂ.ಕೊರಬು ಮಾತ್ರ ನನಗೆ ಈ ಬಾರಿ ಟಿಕೆಟ್ ಸಿಗಲಿದೆ ಎಂಬ ವಿಶ್ವಾಸದಲ್ಲಿ ಇದ್ದಾರೆ. ಮೊಗದೊಂದು ಕಡೆ ಈ ಇಬ್ಬರ ನಾಯಕ ನಡುವೆ ಕಳೆದ ಬಾರಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿದ್ದ ರಾಜೇಂದ್ರ ಪಾಟೀಲ್ ರೇವೂರ ಸಹ ನಾನೇನು ಕಮ್ಮಿ ಇಲ್ಲ ಎಂಬಂತೆ ಕ್ಷೇತ್ರದಲ್ಲಿ ಆರೋಗ್ಯ ಶಿಬಿರಗಳನ್ನು ಏರ್ಪಡಿಸುವ ಮೂಲಕ ನಾನು ಸಹ ಈ ಬಾರಿ ಕಾಂಗ್ರೆಸ್ ಪಕ್ಷದಿಂದ ಪ್ರಬಲ ಆಕಾಂಕ್ಷಿಯಾಗಿದ್ದಾನೆ ಎಂದು ಹೇಳುತ್ತಿದ್ದಾರೆ.

ಆದರೆ ಶಾಸಕ ಎಂ.ವೈ.ಪಾಟೀಲ್ ಅವರು ಬಹಿರಂಗವಾಗಿ ಎಲ್ಲಿಯೂ ಕೂಡಾ ನಾನು ಬರುವ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಅಂತ ಬಹಿರಂಗ ಹೇಳಿಕೆ ನೀಡದೆ ಕಾಂಗ್ರೇಸ್ ಪಕ್ಷ ಯಾವ ತೀರ್ಮಾನ ತೆಗೆದುಕೊಳ್ಳುತ್ತೆ ಅದಕ್ಕೆ ನಾನು ಬದ್ದನಾಗಿದ್ದೇನೆ ಎಂದು ಮಾತ್ರ ಅಂತ ಅಡ್ಡಗೋಡೆಯ ಮೇಲೆ ದೀಪವಿಟ್ಟಿದ್ದಾರೆ. ಕಾಂಗ್ರೇಸ್ ಪಕ್ಷದಲ್ಲಿ ವಯಸ್ಸಿಗೆ ಮಿತಿ ಇಲ್ಲದಿರುವುದರಿಂದ
ಕೊನೆಯ ಗಳಿಗೆಯಲ್ಲಿ ಯಾರಿಗೆ ಕಾಂಗ್ರೆಸ್ ಪಕ್ಷದ ಹೈಕಮಾಂಡ ಯಾರಿಗೆ ಟಿಕೆಟ್ ನೀಡಲಿದೆ ಹಾಗೂ ಯಾರಿಗೆ ಟಿಕೇಟ್ ಸಿಗಲಿದೆ ಎಂಬುದು ಬಹಳಷ್ಟು ಕುತೂಹಲ ಕೆರಳಿಸಿದೆ. ಒಟ್ಟಿನಲ್ಲಿ ಈ ಸಲ ಎಐಸಿಸಿ ಅಧ್ಯಕ್ಷರಾಗಿ ಖರ್ಗೆ ಅವರೆ ಆಗಿರುವುದರಿಂದ ಅಳೆದು ತೂಗುವ ಲೆಕ್ಕಚಾರದಲ್ಲಿ ಜಾಣ್ಮೆಯಿಂದ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಯನ್ನ ಆಯ್ಕೆ ಮಾಡಲಿದೆ.


ಡಿ.18ಕ್ಕೆ ರಾಷ್ಟ್ರ,ರಾಜ್ಯ ನಾಯಕರು ಅಫಜಲಪುರಕ್ಕೆ
ಬರುವ ಡಿಸೆಂಬರ್ 18 ರಂದು ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿರುವ ಅರುಣಕುಮಾರ ಎಂ.ವೈ.ಪಾಟೀಲ್ ಅವರ ಮಗಳ ಮದುವೆ ಸಮಾರಂಭ ನಡೆಯಲಿದ್ದು.ಇದೇ ಸಂದರ್ಭದಲ್ಲಿ 108 ಜೋಡಿಗಳ ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮ ಸಹ ಏರ್ಪಡಿಸಲಾಗಿದೆ.ಆದ್ದರಿಂದ ಈಗಾಗಲೇ ಪೂರ್ವಭಾವಿ ಸಭೆ ನಡೆಸಿ ಸಿದ್ಧತೆಗಳನ್ನು ನಡೆಸಿದ್ದಾರೆ.ಈ ಸಮಾರಂಭಕ್ಕೆ ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್,ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಸೇರಿದಂತೆ ಹಲವು ರಾಜ್ಯ ನಾಯಕರಿಗೆ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಕರೆ ತರಲು ಈಗಾಗಲೇ ಅರುಣಕುಮಾರ ಎಂ.ವೈ.ಪಾಟೀಲ್ ಸಿದ್ಧತೆ ನಡೆಸಿದ್ದಾರೆ.ಇದು ರಾಜಕೀಯವಾಗಿ ಬಹಳಷ್ಟು ಪರಿಣಾಮ ಬೀರಬಹುದು ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆಯುತ್ತಿದೆ.


ಈಗಾಗಲೇ ನಾನು ಶಾಸಕನಾಗಿ ಕೆಲಸ ಮಾಡುತ್ತಿದ್ದೇನೆ.ಹೀಗಾಗಿ ಟಿಕೆಟ್ ಬಗ್ಗೆ ನಾನು ಏನೂ ಹೇಳಲ್ಲ.ಕೇಂದ್ರ ಹಾಗೂ ರಾಜ್ಯದಲ್ಲಿ ಭ್ರಷ್ಟ ಬಿಜೆಪಿ ಸರ್ಕಾರ ಕಿತ್ತು ಎಸೆಯಬೇಕಾಗಿದೆ.ಈ ನಿಟ್ಟಿನಲ್ಲಿ ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ,ಡಿ.ಕೆ.ಶಿವಕುಮಾರ್ ಅವರ ಮಾರ್ಗದರ್ಶನದಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆ ಮಾಡುತ್ತಿದ್ದೇವೆ.
-ಎಂ.ವೈ.ಪಾಟೀಲ್ ಶಾಸಕರು ಅಫಜಲಪುರ


ಕಳೆದ 4 ವರ್ಷಗಳಿಂದ ನಿರಂತರವಾಗಿ ಕ್ಷೇತ್ರದ ಬಡಜನರ ಪರವಾಗಿ ಕೆಲಸ ಮಾಡಿದ್ದೇನೆ.ಕೋವಿಡ್,ಪ್ರವಾಹ ಬಂದಾಗ ಯಾರೂ ಸಹ ಬಡಜನರ ಸೇವೆಗೆ ಬಂದಿಲ್ಲ ಈಗ ಚುನಾವಣೆ ಸಮೀಪ ಬಂದಾಗ ಬರುತ್ತಿದ್ದಾರೆ.ಕಾಂಗ್ರೆಸ್ ಪಕ್ಷದ ವರಿಷ್ಠರ ಮೇಲೆ ನಂಬಿಕೆ ಇದೆ.ಹೀಗಾಗಿ ಈ ಬಾರಿ ನನಗೆ ಟಿಕೆಟ್ ಸಿಗುವ ನಿರೀಕ್ಷೆ ಇದೆ.
-ಜೆ.ಎಂ.ಕೊರಬು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಅಫಜಲಪುರ


ಕಳೆದ ಹಲವು ವರ್ಷಗಳಿಂದ ಕ್ಷೇತ್ರದ ಬಡಜನರ ಪರವಾಗಿ ಕೆಲಸ ಮಾಡಿದ್ದೇನೆ.ರಾಷ್ಟ್ರೀಯ ಹಾಗೂ ರಾಜ್ಯ ನಾಯಕರಿಗೆ ಭೇಟಿ ಮಾಡಿ ಟಿಕೆಟ್ ನೀಡಲು ಮನವಿ ಮಾಡಿದ್ದೇನೆ.ಕ್ಷೇತ್ರವಾರು ಸಮೀಕ್ಷೆ ನಡೆಸಿ ಟಿಕೆಟ್ ನೀಡುತ್ತೇವೆ ಎಂದು ತಿಳಿಸಿದ್ದಾರೆ.ವರಿಷ್ಠರ ಮೇಲೆ ನಂಬಿಕೆಯಿಟ್ಟು ಕ್ಷೇತ್ರದಲ್ಲಿ ಸಂಘಟನೆ ಮಾಡುತ್ತಿದ್ದೇನೆ.
-ರಾಜೇಂದ್ರ ಪಾಟೀಲ್ ರೇವೂರ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಅಫಜಲಪುರ