ಖರ್ಗೆ ಅಧಿಕಾರ ಸ್ವೀಕಾರ : ಸಂಭ್ರಮಾಚರಣೆ


ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಅ.28 ಎಐಸಿಸಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಅವರು ಅಧಿಕಾರ ಸ್ವೀಕರಿಸಿದ ಹಿನ್ನೆಲೆಯಲ್ಲಿ ಗುರುವಾರ ಕಾಂಗ್ರೆಸ್ ಮುಖಂಡರು ಹಾಗೂ ವಿವಿಧ ಸಂಘಟನೆ ಪದಾಧಿಕಾರಿಗಳು ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು.
 ಪಟ್ಟಣದ ಬಸವೇಶ್ವರ ವ್ರತದಲ್ಲಿ ಖರ್ಗೆ ಪರ ಘೋಷಣೆ ಕೂಗಿ ಸಿಹಿ ಹಂಚಿದರು.
 ಡಾ. ಬಿಆರ್ ಅಂಬೇಡ್ಕರ್ ಸಂಘದ ತಾಲೂಕ ಘಟಕದ ಅಧ್ಯಕ್ಷ ಎಚ್. ದೊಡ್ಡಬಸಪ್ಪ  ಮಾತನಾಡಿ ಕರ್ನಾಟಕದ ಹಿಂದುಳಿದ ಹೈದರಾಬಾದ್ ಕರ್ನಾಟಕಕ್ಕೆ ಜನರ ಹಲವು ದಶಕಗಳ ಬೇಡಿಕೆ 371ಜೆ ವಿಶೇಷ ಸ್ನಾನಮಾನವನ್ನು ಖರ್ಗೆ  ನೀಡುವ ಮೂಲಕ ಸದಾ ಜನ ಮಾಸದಲ್ಲಿ ಉಳಿದಿದ್ದಾರೆ.
 ಈಗ ಇವರು ಕಾಂಗ್ರೆಸ್ ಅಧಿಪತಿಯಾಗಿರುವುದು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿದೆ  ಎಂದರು.
 ಈ ಸಂದರ್ಭದಲ್ಲಿ ತಾಲೂಕ ಪಂಚಾಯತಿ ಸಮಾಜಿಕ ನ್ಯಾಯ ಸಮಿತಿ ಮಾಜಿ ಅಧ್ಯಕ್ಷ ಬುಡ್ಡಿ ಬಸವರಾಜ್, ಸಿ. ಬಸವರಾಜ್, ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಎಚ್. ಸೋಮಲಿಂಗಪ್ಪ, ಕನ್ನಳ್ಳಿ ಚಂದ್ರಶೇಖರ್ ಕಾಳಿ ಬಸವರಾಜ್, ಎಚ್ ಮರಿಯಪ್ಪ ಸೊನ್ನದ ಮಹೇಶ, ಅಬ್ದುಲ್ ರಜಾಕ್, ಹೆಚ್ಎ ಕೊಟ್ರೇಶ್ ಇತರರಿದ್ದರು.