ಖರ್ಗೆಯವರ ಪದಗ್ರಹಣ ಕಾರ್ಯಕರ್ತರಿಂದ ವಿಜಯೋತ್ಸವ

ಸೈದಾಪುರ:ಅ.28:ಇಲ್ಲಿನ ಬ್ಲಾಕ್ ಕಾಂಗ್ರೆಸ್ ಹಾಗೂ ಯೂತ್ ಕಾಂಗ್ರೆಸ್ ವತಿಯಿಂದ ನೂತನ ಎಐಸಿಸಿ ಅಧ್ಯಕ್ಷರಾಗಿ ಡಾ.ಮಲ್ಲಿಕಾರ್ಜುನ ಖರ್ಗೆಯವರು ಪದಗ್ರಹಣ ಹೊಂದುತ್ತಿದ್ದಂತೆ ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಖರ್ಗೆಯವರ ಹಾಗೂ ಪಕ್ಷದ ಪರ ಜೈಕಾರಗಳನ್ನು ಕೂಗುತ್ತಾ ಪ್ರಮುಖ ವೃತ್ತಗಳಲ್ಲಿ ವಿಜಯೋತ್ಸವ ಆಚರಿಸಿ ಸಂಭ್ರಮಿಸಿದರು.

ನಮ್ಮ ಭಾಗದ ಕಾರ್ಯಕರ್ತರಿಗೆ ಹೊಸ ಚೈನತ್ಯವನ್ನುಂಟು ಮಾಡಿದೆ. ಶಾಸಕರಾಗಿ, ಸಂಸದರಾಗಿ, ಸಚಿವರಾಗಿ ಈ ಭಾಗಕ್ಕೆ ಹೆಚ್ಚಿನ ಸೇವೆ ಸಲ್ಲಿಸಿದ ಖರ್ಗೆಯವರು ತನ್ನೆಯಾದ ಇತಿಹಾಸ ಹೊಂದಿದ ಕಾಂಗ್ರೆಸನ ಅತಿ ದೊಡ್ಡ ಪಕ್ಷದಲ್ಲಿ ಉನ್ನತ ಸ್ಥಾನ ಪಡೆದಿರುವುದು ಪಕ್ಷ ಸಂಘಟನೆ ಮಹತ್ವ ಪಡೆದುಕೊಂಡಿದೆ. ಅವರ ನೇತೃತ್ವದಲ್ಲಿ ಪಕ್ಷ ಹೆಚ್ಚಿನ ಸಾಧನೆ ಮಾಡುವಂತಾಗಲಿ ಎಂದು ಮುಖಂಡರು ಹಾರೈಸಿದರು.

ಶರಣಿಕ್ ಕುಮಾರ್ ಧೋಖಾ, ಬಸಿರೆಡ್ಡಿ ಅನಪುರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಶ್ವನಾಥ ನೀಲಹಳ್ಳಿ, ಚಿದಾನಂದಪ್ಪ ಕಾಳೆಬೆಳಗುಂದಿ, ಚಂದ್ರಶೇಖರ ವಾರದ, ಮಹಿಪಾಲರೆಡ್ಡಿ ದುಪ್ಪಲ್ಲಿ, ಮಲ್ಲಮ್ಮ ಕೋಮಾರ, ಕೃಷ್ಣ ಚೇಪೆಟ್ಲಾ, ರವೀಂದ್ರ ರೆಡ್ಡಿ, ನಿರಂಜನರೆಡ್ಡಿಗೌಡ ಶೆಟ್ಟಿಹಳ್ಳಿ, ಸಾಬಣ್ಣ ಸೈದಾಪುರ, ಯೂತ್ ಕಾಂಗ್ರೆಸ್ ಅಧ್ಯಕ್ಷ ವಿಜಯ್ ಕಂದಳ್ಳಿ ಬೆಳಗುಂದಿ, ಎನಎಸ್‍ಯುಐ ಜಿಲ್ಲಾಧ್ಯಕ್ಷ ಹೊನ್ನೇಶ್ ದೊಡ್ಮನಿ, ತಿಮ್ಮರೆಡ್ಡಿ ಬೆಳಗುಂದಿ, ಮಲ್ಲೇನಾಯಕ್ ಬದ್ದೆಪಲ್ಲಿ, ನಾಗಪ್ಪ ಭೀಮನಹಳ್ಳಿ, ಸಾಹೇಬಗೌಡ, ಆಫೀಸ ಸಾಬ್ ಕಡೆಚೂರ್, ಹುಸೇನಪ್ಪ ಕಡೆಚೂರ್, ಬಸವರಾಜ ಕೂಡ್ಲುರ್, ಬಸವರಾಜ ಅನೂರ್ ಕೆ, ಮಹಾದೇವ ಪೂಜಾರಿ ಮಲ್ಹಾರ, ಮಂಜುನಾಥ ಮೇತ್ರಿ, ರಾಚೋಟಿ ಕಣೆಕಲ್, ಅಶೋಕ್, ಆನಂದ್, ಲಕ್ಷ್ಮಣ್ ದುಪ್ಪಲ್ಲಿ, ಕೃಷ್ಣ ಗೌಡಗೇರಿ ಸೇರಿದಂತೆ ವಿವಿಧ ಗ್ರಾಮಗಳ ಕಾರ್ಯಕರ್ತರು ಭಾಗವಹಿಸಿದ್ದರು.