ಖರೀದಿ ಕೇಂದ್ರ ಬಂದ್‍ಗೆ ಖಂಡನೀಯ


ಬೈಲಹೊಂಗಲ,ನ.8: ತಾಲೂಕಿನ ನೇಸರಗಿ ಗ್ರಾಮದ ಎಪಿಎಂಸಿಯಲ್ಲಿ ನಡೆಯುತ್ತಿದ್ದ ಟಿನ್ನಾ ಸೋಯಾಬಿನ್ ಖರೀದಿ ಕೇಂದ್ರವನ್ನು ಬಂದ್ ಮಾಡಿರುವದು ಖಂಡನೀಯವೆಂದು ರೈತ ಸಂಘದ ತಾಲೂಕು ಅಧ್ಯಕ್ಷ ಮಹಾಂತೇಶ ಹಿರೇಮಠ ತಿಳಿಸಿದ್ದಾರೆ.
ನೇಸರಗಿ ಗ್ರಾಮವು ಹೋಬಳಿ ಮಟ್ಟವಾಗಿದ್ದು, ಇಲ್ಲಿಯ ಎಪಿಎಂಸಿ ಯು ಕೃಷಿಕರ ಕೆಲಸ ಕಾರ್ಯಗಳಿಗೆ ಅನುಕೂಲವಾಗಲೆಂದು ನಿರ್ಮಿಸಲಾಗಿದೆ. ಸೋಯಾಬಿನ್ ಬೆಳೆ ಇಲ್ಲಿಯ ಮುಖ್ಯ ಬೆಳೆಯಾಗಿದ್ದು, ಸೋಯಾಬಿನ್ ಖರೀದಿ ಕೇಂದ್ರವನ್ನು ಹೀಗೆ ದಿಡೀರ್ ಎಂದು ಮುಚ್ಚಿರುವದರಿಂದ ರೈತರು ಬೆಳೆದ ಸೋಯಾಬಿನ ಮಾರಾಟ ಮಾಡಲು ಎಲ್ಲಿ ಹೋಗಬೇಕು. ಸೋಯಾಬಿನ್ ಕೇಂದ್ರ ಮುಚ್ಚಲು ಕಾರಣ ಕೇಳಿದರೆ 10 ಚೀಲ ಕೇಂದ್ರದಲ್ಲಿ ಸೊಯಾಬಿನ್ ಕಳ್ಳತನವಾಗಿದೆ ಎಂದು ಸಬೂಬು ಹೇಳುವದು ಎಷ್ಟರ ಮಟ್ಟಿಗೆ ಸರಿ.?
ಕಳ್ಳತನವಾಗಿದ್ದರೆ ಪೆÇಲೀಸ್ ಠಾಣೆಯಲ್ಲಿ ದೂರು ಯಾಕೆ ನೀಡಿಲ್ಲ.ಕಳೆದ ಬಾರಿ ಇದೆ ಕಾರಣ ಹೇಳಿ ಬಂದ್ ಮಾಡಲಾಗಿತ್ತು .ಈ ಬಗ್ಗೆ ಬೈಲಹೊಂಗಲ ತಾಲೂಕು ಕೃಷಿ ಅಧಿಕಾರಿಗಳಿಗೆ ಪ್ರಶ್ನಿಸಿದಾಗ ನನಗೆ ಗೊತ್ತೇ ಇಲ್ಲವೆಂಬ ಉತ್ತರ ನೀಡಿರುವುದು ಕೂಡ ಅಧಿಕಾರಿಗಳ ನಿರ್ಲಕ್ಷವನ್ನು ಎತ್ತಿ ತೋರುತ್ತದೆ.
ಹೀಗೆ ಮಾಡುತ್ತಾ ಹೋದರೆ ರೈತರು ಪರದಾಡುವ ಸ್ಥಿತಿ ನಿರ್ಮಾಣವಾಗುತ್ತಿದ್ದು.ಕೂಡಲೇ ಖರೀದಿ ಕೇಂದ್ರವನ್ನು ಎಪಿಎಂಸಿಯಲ್ಲಿ ಪ್ರಾರಂಭಿಸಬೇಕು.
ಇಲ್ಲದಿದ್ದರೆ ಬಾಗಲಕೋಟ ರಸ್ತೆ ತಡೆದು ಉಗ್ರ ಹೋರಾಟ ನಡೆಸಲಾಗುವದು ಎಂದು ಎಚ್ಚರಿಸಿದ್ದಾರೆ.