ಬೆಂಗಳೂರು,ಮಾ.೧೫:ಮನೆಗಳವು ಕೃತ್ಯದಲ್ಲಿ ಭಾಗಿಯಾಗಿದ್ದ ೧೧ ಮಂದಿ ಕುಖ್ಯಾತ ಕಳ್ಳರನ್ನು ಬಂಧಿಸಿ ಭರ್ಜರಿ ಭೇಟೆಯಾಡಿರುವ ಕೇಂದ್ರ ವಿಭಾಗದ ಪೊಲೀಸರು ೨೩ ಪ್ರಕರಣಗಳನ್ನು ಪತ್ತೆಹಚ್ಚಿ, ೪ ಕೋಟಿ ೩೩ ಲಕ್ಷ ೯೩ ಸಾವಿರ ಚಿನ್ನ-ಬೆಳ್ಳಿ, ಹವಳವನ್ನು ವಶಪಡಿಸಿಕೊಂಡಿದ್ದಾರೆ.
ಕೇಂದ್ರವಿಭಾಗದ ಅಶೋಕ್ ನಗರ, ವಿವೇಕ್ ನಗರ, ಹಲಸೂರು ಗೇಟ್, ಎಸ್.ಜೆ ಪಾಕ್, ಸಂಪಂಗಿರಾಮನಗರ, ವಿಲ್ಸನ್‌ಗಾರ್ಡನ್ ಪೊಲೀಸ್ ಠಾಣೆಗಳಲ್ಲಿ ಕಾರ್ಯಾಚರಣೆ ಕೈಗೊಂಡು ೧೧ ಮಂದಿ ಕುಖ್ಯಾತ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್‌ರೆಡ್ಡಿ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಅಶೋಕ್ ನಗರ ಪೊಲೀಸರು ಟ್ಯಾನರಿ ರಸ್ತೆಯ ಜಾನ್ ಅಲಿಯಾಸ್ ಶಂಕರ್ (೪೫)ನನ್ನು ಬಂಧಿಸಿ ೨೨೩ ಗ್ರಾಂ ಚಿನ್ನ, ೨೩೨ ಗ್ರಾಂ ಬೆಳ್ಳಿ, ೧೦ ಸಾವಿರ ಮೌಲ್ಯದ ಹವಳ ಸೇರಿ ೧.೯೮ ಲಕ್ಷ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ.
ವಿವೇಕ್‌ನಗರ ಪೊಲೀಸರು ಶ್ರೀನಿವಾಸ್ ಅಲಿಯಾಸ್ ಅಪ್ಪು (೪೩)ನನ್ನು ಬಂಧಿಸಿ ೧೫ ಲಕ್ಷ ರೂ. ಮೌಲ್ಯದ ೩೦೧ ಗ್ರಾಂ ಚಿನ್ನ, ೪೫ ಸಾವಿರ ಮೌಲ್ಯದ ೩೭೮ ಗ್ರಾಂ ಬೆಳ್ಳಿ ವಶಪಡಿಸಿಕೊಂಡು ಆತನಿಂದ ಕಳವು ಮಾಲು ಖರೀದಿಸಿದ್ದ ಭವರ್‌ಲಾಲ್ (೪೮)ನನ್ನು ಸೆರೆ ಹಿಡಿದು, ೬೦ ಗ್ರಾಂ ಚಿನ್ನ, ೩೭೮ ಗ್ರಾಂ ಬೆಳ್ಳಿ ಜಪ್ತಿ ಮಾಡಲಾಗಿದೆ ಎಂದರು.
ಹಲಸೂರು ಗೇಟ್ ಪೊಲೀಸರು ಯಾಸಿನ್‌ಖಾನ್ ಅಲಿiiಸ್ ಚೋರ್ ಇಮ್ರಾನ್ (೩೪) ಹಾಗೂ ಆತನಿಂದ ಕಳವು ಮಾಲು ಖರೀದಿಸುತ್ತಿದ್ದ ನೂರುಲ್ಲಾ ಅಲಿಯಾಸ್ ಸಲ್ಮಾನ್‌ನ್ನು ಬಂಧಿಸಿ ೭೦ ಲಕ್ಷ ಮೌಲ್ಯದ ೧.೫೨೨ ಗ್ರಾಂಚ ಚಿನ್ನ, ೧೦೦ ಗ್ರಾಂ ಬೆಳ್ಳಿ, ೪ ವಾಚ್‌ಗಳನ್ನು ಜಪ್ತಿ ಮಾಡಿ ೮ ಪ್ರಕರಣಗಳನ್ನು ಬೇಧಿಸಲಾಗಿದೆ ಎಂದರು.

ಎಸ್‌ಜೆ ಪಾರ್ಕ್ ಪೊಲೀಸರು ವಾಹನ ಕಳವು ಮಾಡುತ್ತಿದ್ದ ನೀಕುಂಜ್ ಕುಮಾರ್ (೩೩)ನನ್ನು ಬಂಧಿಸಿ, ೬ ಕೆಜಿ ೫೦೦ ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯು ಪೊಲೀಸರ ಕಣ್ತಪ್ಪಿಸಿ ಬ್ಯಾಗ್‌ನಲ್ಲಿ ಚಿನ್ನಾಭರಣಗಳನ್ನಿಟ್ಟುಕೊಂಡು ಸ್ಕೂಟರ್‌ನಲ್ಲಿ ಸಂಶಯಾಸ್ಪದವಾಗಿ ಹೋಗುತ್ತಿದ್ದಾಗ ಸಿಕ್ಕಿ ಬಿದ್ದಿದ್ದಾನೆ ಎಂದು ತಿಳಿಸಿದರು.
ಸಂಪಂಗಿರಾಮನಗರ ಪೊಲೀಸರು ಖಂಬರ್‌ಶೆಬ್ದಿ ಇರಾನಿ (೨೬)ನನ್ನು ಬಂಧಿಸಿ ೨.೫೦ ಲಕ್ಷ ಮೌಲ್ಯದ ಚಿನ್ನ-ಬೆಳ್ಳೀ ಆಭರಣಗಳನ್ನು ವಶಪಡಿಸಿಕೊಂಡರೆ, ವಿಲ್ಸನ್‌ಗಾರ್ಡನ್ ಪೊಲೀಸರು ಒಂಟು ಮಹಿಳೆಯ ಸರ ಕಸಿದು ಪರಾರಿಯಾಗುತ್ತಿದ್ದ ನ್ಯೂ ಗುರಪ್ಪನ ಪಾಳ್ಯದ ಸೈಯದ್ ಸಬೀರ್ (೨೨), ಹರ್ಮಾನ್ (೨೧)ರನ್ನು ಬಂಧಿಸಿ ೯೦ ಲಕ್ಷ ಮೌಲ್ಯದ ಚಿನ್ನದ ಸರ ಹಾಗೂ ಸ್ಕೂಟರ್‌ನ್ನು ಜಪ್ತಿ ಮಾಡಿದ್ದಾರೆ ಎಂದು ತಿಳಿಸಿದರು.
ಶೇಷಾದ್ರಿಪುರಂ ಪೊಲೀಸರು ಸಿಗರೇಟ್ ಸೇದುವ ವಿಚಾರದಲ್ಲಿ ಜಗಳ ತೆಗೆದು ಚಿನ್ನದ ಸರವನ್ನು ದೋಚಿ ಪರಾರಿಯಾಗಿದ್ದ ರೂಪೇಶ್‌ಸಿಂಗ್ ಅಲಿಯಾಸ್ ಖುರೇಶ್‌ನನ್ನು ಬಂಧಿಸಿ ೩ ಲಕ್ಷ ಮೌಲ್ಯದ ೭೦ ಗ್ರಾಂ ತೂಕದ ಚಿನ್ನದ ಗಟ್ಟಿಯನ್ನು ವಶಪಡಿಸಿಕೊಂಡಿದ್ದಾರೆ. ಇದಲ್ಲದೆ ಯಶವಂತಪುರದ ಪ್ರಶಾಂತ್ ಅಲಿಯಾಸ್ ಪಟ್ಟೆ (೨೪)ನನ್ನು ಬಂಧಿಸಿ ೭೨ ಗ್ರಾಂ ತೂಕದ ಚಿನ್ನ ಹಾಗೂ ದ್ವಿಚಕ್ರ ವಾಹನವನ್ನು ಜಪ್ತಿ ಮಾಡಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಡಿಸಿಪಿ ಶ್ರೀನಿವಾಸಗೌಡ, ಎಸಿಪಿ ನಾರಾಯಣಸ್ವಾಮಿ ಅವರಿದ್ದರು.