ಖಜೂರಿ ನೂತನ ಉಪ ತಹಶೀಲ್ದಾರ ಕಚೇರಿಯಲ್ಲಿ ಕಸಾಪ ಮತಗಟ್ಟೆ

ಆಳಂದ:ನ.20:ಖಜೂರಿ ಉಪ ತಹಶೀಲ್ದಾರ ಕಚೇರಿ ಖಾಸಗಿ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವದರಿಂದ ಕನ್ನಡ ಸಾಹಿತ್ಯ ಪರಿಷತ್ತ ಚುನಾವಣೆಯ ಮತಗಟ್ಟೆಯನ್ನು ನೂತನ ಉಪ ತಹಶೀಲ್ದಾರ ಕಚೇರಿಯಲ್ಲಿ ಮತಗಟ್ಟೆ ಇಡಲಾಗಿದ್ದು. ನ 21 ರಂದು ನಡೆಯುವ ಚುನಾವಣೆಯಲ್ಲಿ ಮತದಾರರು ನೂತನ ಕಟ್ಟಡಕ್ಕೆ ಹೋಗಿ ತಮ್ಮ ಮತವನ್ನು ಚಲಾಯಿಸಬೇಕೆಂದು ತಹಶೀಲ್ದಾರ ಯಲ್ಲಪ್ಪ ಸುಬೇದಾರ ಅವರು ತಿಳಿಸಿದ್ದಾರೆ.

ಶುಕ್ರವಾರ ತಹಶೀಲ ಕಾರ್ಯಾಲಯದಲ್ಲಿ ಕಸಾಪ ಚುನಾವಣಾ ಮತಗಟ್ಟೆ ಅಧಕಾರಿಗಳ ಸಭೆಯ ಕಾರ್ಯಗಾರದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಖಜೂರಿ 350, ಆಳಂದ 437, ಮಾದನ ಹಿಪ್ಪರಗಾ 619 ಸೇರಿ ಒಟ್ಟು 1406 ಮತದಾರರು ಮತಗಟ್ಟೆ ತೆರಳಿ ಕಸಾಪ ರಾಜ್ಯ ಅಧ್ಯಕ್ಷ ಹಾಗೂ ಜಿಲ್ಲಾಧ್ಯಕ್ಷ ಸ್ಥಾನ ಆಯ್ಕೆಗೆ ಒಬ್ಬ ಮತದಾರು 2 ಮತ ಚಲಾಯಿಸಲಿದ್ದಾರೆಂದು ಹೇಳಿದ ಅವರು ಬೆಳಗ್ಗೆ 8 ಗಂಟೆಯಿಂದ ಪ್ರಾರಂಭವಾದ ಮತದಾನ ಸಾಯಂಕಾಲ 4 ಗಂಟೆ ವರೆಗೆ ಮತದಾನ ನಡೆಯಲಿದ್ದು. ನಂತರ 4.30ಕ್ಕೆ ಮತ ಎಣಿಕೆ ಮಾಡಲಾಗುವುದು ಅಧಿಕಾರಿಗಳು ಕಟ್ಟು ನಿಟ್ಟಿನ ಎಚ್ಚರ ವಹಿಸಿ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಆಗದ ಹಾಗೇ ಕಾರ್ಯ ನಿರ್ವಹಿಸಿ ಎಂದು ಸೂಚಿಸಿದರು.

ಚುನಾವಣೆ ಶಿರಸ್ತೇದಾರ ಮನೋಜ ಲಾಡೇ, ಪಿಆರ್‍ಓ ದಶರಥ ಕಠಾರೆ, ವಿವೇಕಾನಂದ ಕಾಪಸೆ, ಯೋಗಿರಾಜ ಮಾಡಿಯಾಳೆ ಹಾಗೂ ಎಪಿಆರ್‍ಓ ಪ್ರಪುಲ್ ಕುಮಾರ, ಅಣ್ಣವೀರಪ್ಪ ಸುತಾರ, ಕಲ್ಯಾಣಪ್ಪ ಬೇಟ್ಟಜುರ್ಗಿ ಕಾರ್ಯಗಾರದಲ್ಲಿ ಉಪಸ್ಥಿತರಿದ್ದರು.