ಖಜೂರಿ ಕೋರಣೇಶ್ವರ ಜಾತ್ರೆ ರದ್ದು

ಆಳಂದ ;ಮಾ.27: ತಾಲೂಕಿನ ಖಜೂರಿ ಗ್ರಾಮದ ಶ್ರೀಕೋರಣೆಶ್ವರ ಪುಣ್ಯಸ್ಮರಣೆ ಹಾಗೂ ರಥೋತ್ಸವವನ್ನು ಕೊವಿಡ್ ಹಿನ್ನೆಲೆಯಲ್ಲಿ ರದ್ದು ಪಡಿಸಿರುವುದಾಗಿ ಮಠದ ಪೀಠಾಧಿಪತಿ ಶ್ರೀ ಮುರಘೇಂದ್ರ ಕೋರಣೆಶ್ವರ ಶ್ರೀಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದೆ 29ರಂದು ಕೋರಣೇಶ್ವರ ಶ್ರೀಗಳ 96ನೇ ಪುಣ್ಯಸ್ಮರಣೆ ನಿಮಿತ್ಯ ಪ್ರತಿವರ್ಷ ಶ್ರಿಮಠದಲ್ಲಿ ಹೊಳಿಗೆ ತುಪ್ಪ ಪ್ರಸಾದ ಕೊಡುವ ಪದ್ದತಿ ನಡೆದಕೊಂಡು ಬರುತ್ತಿದ್ದು ಈ ಬಾರಿ ಕೋರೋನಾ ಸೊಂಕು ಹರುಡುತ್ತಿರುವುದರಿಂದ ಮತ್ತು ಸರಕಾರ ಎಲ್ಲಾ ಜಾತ್ರೆಗಳನ್ನು ಆಚರಿಸದಂತೆ ನಿಷೇದಿಸಿದ್ದರಿಂದ ಈ ಬಾರಿ ನಮ್ಮ ಮಠದಲ್ಲಿ ಯಾವುದೆ ಜಾತ್ರೆ ಉತ್ಸವ ಧಾರ್ಮಿಕ ಕಾರ್ಯಕ್ರಮಗಳನ್ನು ಆಚರಣೆ ಮಾಡುತ್ತಿಲ್ಲ ಮತ್ತು ಸರಳವಾಗಿ ಮಠದಲ್ಲಿ ಪೂಜೆ ಮಾಡಲಾಗುತ್ತದೆ ಭಕ್ತಾಧಿಕಗಳು ಸಾಮಾಜಿಕ ಜಾಲತಾಣಗಳ ಮೂಲಕ ಕಾರ್ಯಕ್ರಮಗಳನ್ನು ನೋಡಬೇಕು ಮತ್ತು ಶ್ರೀಮಠದ ಆವರಣದಲ್ಲಿ ಭಕ್ತರಿಗೆ ಪ್ರವೇಶ ನಿಷೇಧಿಸಲಾಗಿದೆ. ಹಾಗೂ 11 ಎಪ್ರಿಲ್ ರಂದು ನಡೆಯುವ ರಥೋತ್ಸವ ಧಾರ್ಮಿಕ ಕಾರ್ಯಕ್ರಮ ಕೂಡಾ ನೀಷೆದಿಸಿದೆ. ಮಠದ ಆವರಣದಲ್ಲಿ ಬಣ್ಣ ಆಡುವುದು ಮಜಲು ಕುಣಿತ ಮೆರವಣಿಗೆ ಪ್ರಸಾದ ನಿಷೇದಿಸಿದೆ. ಎಲ್ಲಾ ಭಕ್ತಾಧಿಗಳು ಸಹಕರಿಸಬೇಕು ನಮ್ಮ ಆರೋಗ್ಯ ನಮಗೆ ಮುಖ್ಯ ಹೀಗಾಗಿ ಸರಕಾರದ ಆದೇಶ ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕು. ಎಲ್ಲರೂ ಮಾಸ್ಕ ಧರಿಸಿ ಲಸಿಕೆ ಪಡೆದು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ಶ್ರೀಗಳು ಮನವಿ ಮಾಡಿದ್ದಾರೆ.