ಖಜೂರಿಯಲ್ಲಿ ಶುದ್ಧಜಲ ಜಾಗೃತಿ ಅಭಿಯಾನಕ್ಕೆ ಚಾಲನೆ

ಆಳಂದ:ಜ.13: ತಾಲೂಕಿನ ಖಜೂರಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ವತಿಯಿಂದ ಗ್ರಾಮದ ಸರ್ಕಾರಿ ಪ್ರೌಢಶಾಲಾ ಮಕ್ಕಳಿಂದ ಶುದ್ಧಜಲ ಅಭಿಯಾನದ ಅಂಗವಾಗಿ ಪ್ರಮುಖ ರಸ್ತೆಯಲ್ಲಿ ಜಾಗೃತಿ ಜಾಥಾ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಯೋಜನಾಧಿಕಾರಿ ಕೃಷ್ಣಪ್ಪ ಬೆಳವಣಿಕಿ ಅವರು ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮನುಷ್ಯನಿಗೆ ಶುದ್ಧಗಾಳಿ ಶುದ್ಧವಾದ ಆಹಾರ ಎಷ್ಟು ಅವಶ್ಯಕತೆ ಇದೆಯೋ ಅಷ್ಟೇ ಶುದ್ಧಕುಡಿಯುವ ನೀರು ಸಹ ಅವಶ್ಯಕವಾಗಿದೆ. ಹಾಗಾಗಿ ಖಕೂರಿ ಗ್ರಾಮದ ಸಾರ್ವಜನಿಕರು ಇದರ ಅನುಕೂಲ ಪಡೆದುಕೊಂಡು.. ಉತ್ತಮ ಅರೋಗ್ಯ ರೂಪಿಸಿಕೊಳ್ಳಬೇಕು ಎಂದು ಹೇಳಿದರು. ಜಾಗೃತಿ ಜಾಥಾದಲ್ಲಿ ಶಾಲಾ ಶಿಕ್ಷP ಯೋಗರಾಜ್ ಮಾಡ್ಯಾಳೆ ಸಹ ಶಿಕ್ಷಕರು ಒಳಗೊಂಡು ಸಂಸ್ಥೆಯ ಶುದ್ಧಗಂಗಾ ಮೇಲ್ವಿಚಾರಕ ಸಂಭಾಜಿ ವಲಯ ಮೇಲ್ವಿಚಾರಕರು ವಿರೇಶ, ಸೇವಾಪ್ರತಿನಿಧಿಗಳಾದ ಸಿದ್ದಮ್ಮ. ಕಲಾವತಿ ಸಂಘಗಳ ಸದಸ್ಯರು ಉಪಸ್ಥಿತರಿದ್ದರು. ಈ ಮೊದಲು ಶುದ್ಧ ನೀರಿನ ಘೋಷಣೆ ಕೂಗುವ ಮೂಲಕ ಊರಿನ ಪ್ರಮುಖ ಬೀದಿಯಲ್ಲಿನ ಸಾರ್ವಜನಿಕರಿಗೆ ಶುದ್ಧನೀರಿನ ಬಗ್ಗೆ ಅರಿವು ಮೂಡಿಸಲಾಯಿತು.