ಖಜಾನೆ ಇಲಾಖೆ ನೌಕರರ ಮನೆಗೆ ಕನ್ನ

ಕಲಬುರಗಿ,ಜೂ.14-ಜಿಲ್ಲಾ ಖಜಾನೆ ಇಲಾಖೆಯ ನೌಕರರೊಬ್ಬರ ಮನೆಗೆ ಕಳ್ಳರು ಕನ್ನಾ ಹಾಕಿ 75 ಸಾವಿರ ರೂ.ಮೌಲ್ಯದ ನಗನಾಣ್ಯ ದೋಚಿಕೊಂಡು ಹೋಗಿದ್ದಾರೆ.
ಇಲ್ಲಿನ ಸಾಯಿ ಮಂದಿರ ಏರಿಯಾದಲ್ಲಿರುವ ಜಿಲ್ಲಾ ಖಜಾನೆ ಇಲಾಖೆಯಲ್ಲಿ ಎಫ್‍ಡಿಎಯಾಗಿರುವ ರೇಣುಕಾ ಅಶೋಕ ಕಣ್ಣಿ ಅವರ ಮನೆ ಬೀಗ ಮುರಿದು ಅಲಮಾರಿಯಲ್ಲಿದ್ದ 40 ಸಾವಿರ ರೂ.ಮೌಲ್ಯದ 10 ಗ್ರಾಂ.ಬಂಗಾರದ ಚೈನ್, 8 ಸಾವಿರ ರೂ.ಮೌಲ್ಯದ 2 ಗ್ರಾಂ.ಬಂಗಾರದ ಹರುಳಿನ ಉಂಗುರ, 12 ಸಾವಿರ ರೂ.ಮೌಲ್ಯದ 3 ಗ್ರಾಂ.ಬಂಗಾರದ ಒಂದು ಜೊತೆ ಕಿವಿಯಲ್ಲಿನ ಟಾಪ್, 15 ಸಾವಿರ ರೂ.ನಗದು ಸೇರಿ 75 ಸಾವಿರ ರೂ.ಮೌಲ್ಯದ ನಗನಾಣ್ಯ ದೋಚಿಕೊಂಡು ಹೋಗಿದ್ದಾರೆ.
ಈ ಸಂಬಂಧ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.