ಖಚಿತ ಮಾಹಿತಿಯನ್ನಾಧರಿಸಿ ಅಧಿಕಾರಿಗಳಿಂದ ಸ್ಪೋಟಕ ವಸ್ತುಗಳ ವಶ

ವಿಜಯಪುರ, ಡಿ.30-ಜಿಲ್ಲೆಯಲ್ಲಿ ದಿ.28-12-2020 ರಂದು ಮದ್ಯಾಹ್ನ 03-50 ಗಂಟೆಗೆ ಆಂತರಿಕ ಭದ್ರತಾ ವಿಭಾಗ ವಿಜಯಪುರ-ಬಾಗಲಕೋಟ ಘಟಕದ ಅಧಿಕಾರಿ ಹಾಗೂ ಸಿಬ್ಬಂದಿ ಕಲಕೇರಿ ಪೊಲೀಸ ಠಾಣಾ ವ್ಯಾಪ್ತಿಯ ಶ್ರೀ ವೆಂಕಟೇಶ್ವರ ಸ್ಟೋನ್ ಕ್ರಷರ ಮಶೀನ ಆವರಣದಲ್ಲಿರುವ ತಗಡಿನ ಶೆಡ್ ಮುಂದೆ ಅನಧೀಕೃತವಾಗಿ ಅಪಾರ ಪ್ರಮಾಣದ ನೈಟ್ರೇಟ್ ಮಿಕ್ಷರ್ (ಸ್ಪೋಟಕ ವಸ್ತು) ಹಾಗೂ ಇಲೆಕ್ಟ್ರಿಕ್ ಡಿಟೋನೆಟರ್ ಸಂಗ್ರಹಿಸಿಟ್ಟುಕೊಂಡ ಬಗ್ಗೆ ಖಚಿತ ಪಡಿಸಿಕೊಂಡ ಬಗ್ಗೆ ಖಚಿತ ಮಾಹಿತಿ ಆಧರಿಸಿ ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ದಾಳಿ ಮಾಡಿ ಈ ಕೆಳಕಂಡ ಒಟ್ಟು 15000/- ರೂಪಾಯಿ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿರುತ್ತಾರೆ ಎಂದು ಅನಿಲಕುಮಾರ್ ಎಸ್. ಭೂಮರಡ್ಡಿ, ಡಿವೈಎಸ್‍ಪಿ, ಐಎಸ್‍ಡಿ, ಬೆಳಗಾವಿ ಇವರು ತಿಳಿಸಿದ್ದಾರೆ.
ಅದರಂತೆ ನೈಟ್ರೇಟ್ ಮಿಕ್ಷರ್ (ಸ್ಪೋಟಕ್ ವಸ್ತು) ಗಳಿರುವ 4 ರಟ್ಟಿನ ಬಾಕ್ಸ, ಇಲೆಕ್ಟ್ರಿಕ್ ಡಿಟೋನೆಡರ್ 10 ಬಂಡಲ್‍ಗಳು ಈ ವಸ್ತುಗಳನ್ನು ಹಾಗೂ ಸ್ಪೋಟಕ್ ವಸ್ತುಗಳನ್ನು ತನ್ನ ಮಾಲಿಕತ್ವದ ಕ್ರಷರ್ ಮಶೀನ ಆವರಣದಲ್ಲಿ ಸಂಗ್ರಹಿಸಿಟ್ಟ ಮಾಲಿಕನನ್ನು ವಶಕ್ಕೆ ಪಡೆದುಕೊಂಡು ಕಲಕೇರಿ ಪೊಲೀಸ ಠಾಣೆಗೆ ತೆರಳಿ ಠಾಣೆಯಲ್ಲಿ ಸರಕಾರದ ಪರವಾಗಿ ದೂರನ್ನು ನೀಡಿದ್ದು ಕಲಕೇರಿ ಪೊಲೀಸ್ ಠಾಣೆ ಗುನ್ನಾ ನಂ. 140/2020 ಕಲಂ. 9ಬಿ(1)(ಬಿ) ಎಕ್ಸಪ್ಲೋಸಿವ್ ಕಾಯ್ದೆ 1884 ರೀತ್ಯ ಪ್ರಕರಣ ದಾಖಲಿಸಿರುತ್ತಾರೆ.
ಸದರಿ ದಾಳಿಯನ್ನು ಆಂತರಿಕ ಭದ್ರತಾ ವಿಭಾಗ ವಿಜಯಪುರ-ಬಾಗಲಕೋಟ ಘಟಕದ ಪೊಲೀಸ್ ನಿರೀಕ್ಷಕರಾದ ಬಸವರಾಜ ಎಂ. ಪಾಟೀಲ್ ರವರು ತಮ್ಮ ಸಿಬ್ಬಂದಿ ಜನರಾದ ಮಹಾದೇವ ಕರಜಗಿ, ಸಿದ್ರಾಮೇಶ್ವರ ಘಟನಟ್ಟಿ, ಪಾಂಡಪ್ಪ ಬಿರಾದಾರ ಹಾಗೂ ಸಂಗಪ್ಪ ಬಡಿಗೇರರವರು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ನಡೆಸಿದ್ದು, ಈ ಕಾರ್ಯವನ್ನು ಹಿರಿಯ ಅಧಿಕಾರಿಗಳು ಶ್ಲಾಘಿಸಿದ್ದಾರೆ.