ಕ.ಸಾ.ಪ 109 ನೇ ಸಂಸ್ಥಾಪನಾ ದಿನಾಚರಣೆ

ಅಫಜಲಪುರ: ಮೇ.7:ಪಟ್ಟಣದ ಕನ್ನಡ ಭವನದಲ್ಲಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ 109ನೇ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ ಆಚರಿಸಲಾಯಿತು.

ಈ ವೇಳೆ ಸಾಹಿತ್ಯ ಪರಿಷತ್ತಿನ ಹಿರಿಯ ಸದಸ್ಯರನ್ನು, ಸಾಹಿತಿಗಳು ಹಾಗೂ ಕಲಾವಿದರನ್ನು ಸತ್ಕರಿಸಿ ಗೌರವಿಸಲಾಯಿತು.

ಬಳಿಕ ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಂಘದ ಅಧ್ಯಕ್ಷ ಶೋಭರಾಜ ಮ್ಯಾಳೇಸಿ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ, ಇತ್ತೀಚೆಗೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಒಳ್ಳೆಯ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವುದು ಸಂತಸ ತಂದಿದೆ ಎಂದರು.

ಪರಿಷತ್ ಸದಸ್ಯ ಬಾಹುಬಲಿ ಮಾಲಗತ್ತಿ ಅವರು ಮಾತನಾಡಿ, ತಾಲೂಕಿನ ಎಲ್ಲ ಹಿರಿಯ ಕಲಾವಿದರು ಹಾಗೂ ಸಾಹಿತಿಗಳು ಪರಿಷತ್ತಿಗೆ ಸಹಕರಿಸುವಂತೆ ಮನವಿ ಮಾಡಿದರು.

ಕಾರ್ಯಕ್ರಮ ಉದ್ದೇಶಿಸಿ ಶಿವಾನಂದ್ ಪೂಜಾರಿ, ಹಿರಿಯ ಸಾಹಿತಿ ಹುಸೇನಿ ಮುಜಾವರ, ಮಾತನಾಡಿದರು.

ಈ ವೇಳೆ ಪ್ರಮುಖರಾದ ಸಿದ್ದಾರಾಮ ಸರಸಂಬಿ, ಶೇಖಪ್ಪ ಜೋಗೂರ, ಬೇಬಿನಂದಾ ಮ್ಯಾಳೇಸಿ, ಅಂಬಣ್ಣ ಕೊಠಡಿ, ಅಂಬಣ್ಣ ಅವಟಗಿ, ಡಾ.ಅಣ್ಣಯ್ಯ ಸಾಲಿಮಠ, ಜಗದೇವಪ್ಪ ಹತ್ತರಕಿ, ಅರ್ಚನಾ ಜೈನ್, ಪ್ರಭಾವತಿ‌ ಮೇತ್ರಿ, ಪ್ರತಿಭಾ ಮಹೀಂದ್ರಕರ ಉಪಸ್ಥಿತರಿದ್ದರು.

ನಿರೂಪಣೆ ಪರಮಾನಂದ ಸರಸಂಬಿ, ಸ್ವಾಗತವನ್ನು ಡಾ.ಸಂಗಣ್ಣಾ ಸಿಂಗೆ ಹಾಗೂ ಪ್ರೇಮಾವತಿ ರಾಜಾನವರ ವಂದಿಸಿದರು.