ಕ.ಸಾ.ಪ.ದಿಂದ ಬಂಡ್ರಿಯಲ್ಲಿ ದತ್ತಿಕಾರ್ಯಕ್ರಮ


ಸಂಜೆವಾಣಿ ವಾರ್ತೆ
ಸಂಡೂರು : ಜೂ:23  ಸಂಡೂರು ತಾಲ್ಲೂಕಿನ ಚೋರನೂರು ಹೋಬಳಿ ಘಟಕದ ಬಂಡ್ರಿಯ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಪ್ರಾಂಶುಪಾಲ ಮಹಾಂತೇಶ್ ಇವರ ಅಧ್ಯಕ್ಷತೆಯಲ್ಲಿ ಸಾವಿತ್ರಿ ಹೆಚ್. ಕನ್ನಡ ಪಂಡಿತರು ಬಂಡ್ರಿ ಇವರು ಸಂತ ಶಿಶುನಾಳ ಷರೀಫರ ಬದುಕು ಬರಹ ಕುರಿತು ಮಾತನಾಡಿದರು. ಸುರೇಶ್ ಗಂಟಿ ಮುಖ್ಯ ಗುರುಗಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗೊಲ್ಲರಹಟ್ಟಿ ಇವರು ಗದುಗಿನ ಕುಮಾರಸ್ವಾ ಕನ್ನಡ ಸಾಹಿತ್ಯದಲ್ಲಿ ಬಿ.ಜಿ. ಅವರ ಹಾಸ್ಯ ಕುರಿತು ಅದ್ಬುತವಾಗಿ ಮಾತನಾಡಿ ಮಕ್ಕಳ ಮನಸ್ಸು ಸಾಹಿತ್ಯ ಕಡೆ ಗಮನಹರಿಸುವಂತೆ ನೋಡಿದರಲ್ಲದೇ ಮಕ್ಕಳನ್ನು ರಂಜಿಸಿದರು. ಸಾವಿತ್ರಮ್ಮ ಮತ್ತು ಮಕ್ಕಳು ಎಸ್.ಎಂ. ಗಿರಿಶ್ ಎಸ್.ಎಂ. ಸರಸ್ವತಿಯವರ ದತ್ತಿಯನ್ನು ಸಾವಿತ್ರಮ್ಮ ನವರು ತಮ್ಮ ಪತಿ ಎಂ. ಸೋಮಪ್ಪ ಛ.ಶಿ.ವಿ. ಮಂದಿರ ಮಾಜಿ ಪ್ರಾಂಶುಪಾಲರ ಇವರ ಹೆಸರಿನಲ್ಲಿ ಹಾಗೂ ಎಸ್.ಎಂ. ಗಿರಿಶ್ ಸರಸ್ವತಮ್ಮ ಇವರು ತಂದೆ ತಾಯಿ ಶರಣಪ್ಪ ಶರಣಮ್ಮ ಇವರ ಸ್ಮರಣಾರ್ಥ ದಾನವಾಗಿ ನೀಡಿದರು. ಉಪ ಪ್ರಾಂಶುಪಾಲರಾದ ಬಸವರಾಜ ಕಂಕಡಿಯವರು ಜೆ. ಪುರುಷೋತ್ತಮ ಆರ್. ರುದ್ರೇಶ್ ಕುಮಾರ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಕೌಶಲ್ಯ ಶಿಕ್ಷಕಿ ಕನ್ನಡಿಗರಿಗೆ ಕೋಟಿ ವಂದನೆ ಪ್ರಾರ್ಥನೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಸುಬಾನ್ ಸಾಹೇಬ್ ಇವದ್ಯಾರ್ಥಿ ನಿರೂಪಸಿದರೆ, ತಿಪ್ಪೇಸ್ವಾಮಿಯವರು ಸ್ವಾಗತಿಸಿದರು.