ಕ. ಸಾ. ಪ. ಜಿಲ್ಲಾ ಅಧ್ಯಕ್ಷರಾದ ಸುರೇಶ ಚನಶೆಟ್ಟಿ :ಭಾಲ್ಕಿ ಶ್ರೀಮಠಕ್ಕೆ ಭೇಟಿ

(ಸಂಜೆವಾಣಿ ವಾರ್ತೆ)
ಭಾಲ್ಕಿ : ನ.23: ಎರಡನೇ ಬಾರಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಆಯ್ಕೆಯಾಗಿ ಸುರೇಶ ಚೆನಶೆಟ್ಟಿ ಅವರು ಭಾಲ್ಕಿ ಹಿರೇಮಠ ಸಂಸ್ಥಾನಕ್ಕೆ ಭೇಟಿ ನೀಡಿ ಪರಮಪೂಜ್ಯ ಬಸವಲಿಂಗ ಪಟ್ಟದ್ದೇವರನ್ನು ಗೌರವಾರ್ಪಣೆ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಎರಡನೇ ಬಾರಿಗೆ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಪುನರ್ ಆಯ್ಕೆಯಾದ ಸುರೇಶ ಚನಶೆಟ್ಟಿ ದಂಪತಿಗಳಿಗೆ ಪೂಜ್ಯರು ಸನ್ಮಾನಿಸಿ ಆಶೀರ್ವದಿಸಿದರು. ಈ ಸಂದರ್ಭದಲ್ಲಿ, ಕ. ಸಾ. ಪ. ನಿಕಟಪೂರ್ವ ತಾಲೂಕ ಅಧ್ಯಕ್ಷರಾದ ಶಶಿಧರ್ ಕೊಸಂಬೇ, ಪ್ರಾಥಮಿಕ ಸರಕಾರಿ ನೌಕರ ಸಂಘದ ಅಧ್ಯಕ್ಷರಾದ ಸೂರ್ಯಕಾಂತ್ ಸುಂಟೆ, ಸಂತೋಷ್ ಬಿಜಿ ಪಾಟೀಲ್, ನಾಗಭೂಷಣ ಮಾಮಡಿ, ಲದ್ದೆ, ಭಾವಗೆ, ರಾಜಕುಮಾರ್ ಬಿರಾದಾರ್, ಪ್ರಭು ಡಿಗ್ಗೆ , ರಮೇಶ ಚಿದ್ರೆ, ದೀಪಕ ಥಮಕೆ, ಅನೇಕರು ಉಪಸ್ಥಿತರಿದ್ದರು.