ಕ.ಸಾ.ಪ ಚುನಾವಣಾ ಪ್ರಚಾರ

ಗಂಗಾವತಿ ಏ 19 :ಕನ್ನಡ ಭಾಷೆ ನೆಲ ಜಲ ಕನ್ನಡಿಗರ ಸ್ವಾಭಿಮಾನದ ಕನ್ನಡ ಸಾಹಿತ್ಯ ಪರಿಷತ್ ಸ್ಥಾಪಿತವಾಗಿದ್ದು ಕೆಲವರು ಇಲ್ಲಿ ಜಾತಿ ಗುಂಪು ಬಣ‌ ಮಾಡುವ ಮೂಲಕ ಕಸಾಪ ಕ್ಕೆ ಕಳಂಕ ತಂದಿದ್ದಾರೆ.ಇದನ್ನು ದೂರ ಮಾಡಲು ವೀರಣ್ಣ ಮಲ್ಲಪ್ಪ ನಿಂಗೋಜಿ ಹಾಗೂ ನಾಡೋಜ ಡಾ.ಮಹೇಶ್ ಜೋಶಿ ಗೆಲ್ಲಬೇಕೆಂದು ವಿಜಯನಗರ ವಿಶ್ವವಿದ್ಯಾಲಯ ಆಡಳಿತಮಂಡಳಿ ನಿರ್ದೇಶಕ ಶಿವಾನಂದ ಮೇಟಿ ಹಾಗೂ ಕಸಾಪ ತಾಲ್ಲೂಕು ನಿಕಟಪೂರ್ವ ಅಧ್ಯಕ್ಷ ಅಜಮೀರ್ ನಂದಾಪೂರ ಹೇಳಿದರು.
ಅವರು ತಾಲೂಕಿನ ಮರಳಿ ಹೋಬಳಿಯ ಢಣಾಪೂರ ಜಂಗಮರಕಲ್ಗುಡಿ ಮತ್ತು ಆಚಾರನರಸಾಪೂರ ಗ್ರಾಮದಲ್ಲಿ ಕಸಾಪ ಜಿಲ್ಲಾ ರಾಜ್ಯಾಧ್ಯಕ್ಷ ಸ್ಥಾನದ ಚುನಾವಣಾ ಪ್ರಸಾರ ನಡೆಸಿ ಮಾತನಾಡಿದರು.
ಕಳೆದ 20 ವರ್ಷಗಳಿಂದ ಜಿಲ್ಲೆಯಲ್ಲಿ ಕಸಾಪ ಕಾರ್ಯಚಟುವಟಿಕೆ ಏಕ ವ್ಯಕ್ತಿ ಪ್ರಧಾನವಾಗಿದ್ದು ಕಸಾಪ ಮೂಲಕ ರಾಜಕೀಯ ಮಾಡಲಾಗುತ್ತಿದೆ. ತಾಲ್ಲೂಕು ಜಿಲ್ಲಾ ಸಾಹಿತ್ಯ ಸಮ್ಮೇಳನಗಳನ್ನು ಕಾಟಾಚಾರಕ್ಕೆ ನಡೆಸಲಾಗುತ್ತಿದೆ. ಸಮ್ಮೇಳನದ ಸಂದರ್ಭದಲ್ಲಿ ಸ್ಮರಣಸಂಚಿಕೆ ಬಿಡುಗಡೆ ಮಾಡುವ ಸಂಪ್ರದಾಯ ಬಿಡಲಾಗಿದೆ. ತಮ್ಮ ಹಿಂಬಾಲಕರಿಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ‌ ಸಾಹಿತಿಗಳು ‌ಲೇಖಕರು‌ ಬರಹಗಾರರನ್ನು ಕಸಾಪ ಅಜೀವ ಸದಸ್ಯರನ್ನು ನಿರ್ಲಕ್ಷ್ಯ ಮಾಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಪತ್ರಕರ್ತರ ಕೆ.ನಿಂಗಜ್ಜ, ನವಲಿ ರಾಮಮೂರ್ತಿ, ಸಿಂಗನಾಳ ಕುಮಾರಪ್ಪ, ಡಗ್ಗಿ ಹನುಮಂತಪ್ಪ, ಎಂ.ಶರಣಪ್ಪ, ನ್ಯಾಯವಾದಿ ಸುಭಾಸ ತಿಪಶೆಟ್ಟಿ, ಅಯ್ಯಣ್ಣ, ಟೀಕಯ್ಯ, ಹೊನ್ನೂರಪ್ಪ, ವೈ.ಆನಂದರಾವ್ ಸೇರಿ ಅನೇಕರಿದ್ದರು.