ಶಹಾಪೂರ:ಜೂ.13:ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ನಾಡಿನ ಆರು ಕೋಟಿಗೂ ಹೆಚ್ಚು ಜನಸಮುದಾಯದ ಪ್ರಾತನಿಧಿಕ ಹೆಮ್ಮೆಯ ಸಂಸ್ಥೆಯಾಗಿದೆ ಎಂದು ಕನ್ನಡ ಹಿರಿಯ ವಿಶ್ರಾಂತ ಅಧ್ಯಾಪಕ ಸೈಯದ್ ಚಾಂದ್‍ಪಾಶ್ ಫೂಲಚಡಿ ಅವರು ಅಭಿಪ್ರಾಯಪಟ್ಟರು. ನಗರದ ಕನ್ನಡ ಭವನದಲ್ಲಿ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಹಮ್ಮಿಕೊಂಡ ಕನ್ನಡ ಸಾಹಿತ್ಯ ಪರಿಷತ್ತಿನ 109ನೇ ಸಂಸ್ಥಾಪನ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಕನ್ನಡ ಭಾಷಿಕ ಸಮುದಾಯದ ಹಿತಾಸಕ್ತಿಗಳ ಬಗ್ಗೆ ಚಿಂತನೆ ಮಾಡುವ ಆಶಯಗಳೊಂದಿಗೆ 1915 ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರು ಸಂಸ್ಥಾಪಿಸಿದ ಕನ್ನಡ ಸಾಹಿತ್ಯ ಪರಿಷತ್ತು ಸಮಾಕಾಲೀನತಗೆ ಸ್ಪಂದಿಸುತ್ತ ಕನ್ನಡ ಸಾರಸ್ವತ ಲೋಕಕ್ಕೆ ವಿಶಿಷ್ಟ ಕೊಡುಗೆ ನೀಡುತ್ತಿದೆ ಎಂದು ತಿಳಿಸಿದರು.
ಕೆಂಭಾವಿಯ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಶಕುಂತಲಾ ಹಡಗಲಿ ಅವರು ‘ಕನ್ನಡ, ಕನ್ನಡಿಗ, ಕರ್ನಾಟಕ’ ಎಂಬ ವಿಷಯದ ಮೇಲೆ ಉಪನ್ಯಾಸ ನೀಡಿ ಕರ್ನಾಟಕ, ಕನ್ನಡ ಭಾಷೆ, ಸಾಹಿತ್ಯ, ಕಲೆ, ಜಾನಪದ, ಸಂಸ್ಕøತಿ ಉಳಿಸಿ ಬೆಳೆಸುವ ಜವಬ್ದಾರಿ ಪ್ರತಿಯೊಬ್ಬರ ಮೇಲಿದೆ. ಪ್ರತಿಯೊಂದು ಕ್ಷೇತ್ರಗಳಲ್ಲಿ ಕನ್ನಡ ಭಾಷೆಗೆ ಪ್ರಾಶಸ್ತ್ಯ ಸಿಗಬೇಕು. ಕನ್ನಡಿಗರ ಹಿತಾಸಕ್ತಿಗಳ ಸಂರಕ್ಷಣೆಯ ಹೊಣೆಗಾರಿಕೆಯೊಂದಿಗೆ ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯನಿರ್ವಹಿಸುತ್ತಿರುವು ಶ್ಲಾಘನೀಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ನಿಕಟ ಪೂರ್ವ ಕ.ಸಾ.ಪ ಅಧ್ಯಕ್ಷ ಸಿದ್ದಲಿಂಗಣ್ಣ ಆನೆಗುಂದಿ ಕ.ಸಾ.ಪ ಐತಿಹಾಸಕ ಹಿನ್ನಲೆ ಮತ್ತು ಕಾರ್ಯಚಟುವಟಿಕೆಗಳ ಕುರಿತು ಮಾತನಾಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕ.ಸಾ.ಪ ಅಧ್ಯಕ್ಷ ಡಾ.ರವೀಂದ್ರನಾಥ ಹೊಸ್ಮನಿಯವರು ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಮತ್ತು ಕನ್ನಡಿಗರ ಬಹುಮುಖಿ ಆಯಾಮಗಳಿಗೆ ಆಲೋಚನೆ, ಅಕ್ಷರ, ಕ್ರೀಯೆಗಳ ಮೂಲಕ ಸ್ಪಂದಿಸುತ್ತ ನಾಡುನುಡಿಯ ರಕ್ಷಣೆ ಮತ್ತು ವಿಕಾಸಕ್ಕಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗುಲ್ಬರ್ಗಾ ವಿಶ್ವದ್ಯಾಲಯದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರಾದ ಯುವ ಕಥೆಗಾರ ಆನಂದ ಗೊಬ್ಬಿ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಕ.ಸಾ.ಪ ಕೋಶಾಧ್ಯಕ್ಷ ಶಂಕರ ಹುಲಕಲ್, ಸಗರ ವಲಯ ಅಧ್ಯಕ್ಷ ಡಾ.ದೇವಿಂದ್ರಪ್ಪ ಹಡಪದ, ಶಿರವಾಳ ವಲಯ ಅಧ್ಯಕ್ಷ ಮಲ್ಲಣ್ಣ ಹೊಸ್ಮನಿ, ಗೋಗಿ ವಲಯ ಅಧ್ಯಕ್ಷ ಮಲ್ಲಣ್ಣಗೌಡ ಪೋಲಿಸ್ ಪಾಟೀಲ್, ದೊರನಹಳ್ಳಿ ವಲಯ ಅಧ್ಯಕ್ಷ ಮಹೇಶ ಪತ್ತಾರ, ಕ.ಸಾ.ಪ ಮಹಿಳಾ ಪ್ರತಿನಿಧಿಗಳಾದ ನಿರ್ಮಲಾ ತುಂಬಗಿ, ಚಂದ್ರಕಲಾ ಗೂಗಲ್, ಭಾಗ್ಯ ದೊರೆ, ಪ್ರತಿನಿಧಿಗಳಾದ ನಿಂಗಣ್ಣ ನಾಟೇಕಾರ, ಬಿ.ಎಂ ಪೂಜಾರಿ, ದೇವಿಂದ್ರಪ್ಪ ವಿಶ್ವಕರ್ಮ, ಗುರುರಾಜ ಬಳ್ಳೂರಗಿ ಹಾಗೂ ಪ್ರೊ. ಶಿವಲಿಂಗಣ್ಣ ಸಾಹು, ಮೀನಾಕ್ಷಿ ಹೊಸ್ಮನಿ, ಡಾ.ಸಾಯಬಣ್ಣ ಮುಡಬೂಳ, ಡಾ.ಗುತ್ತಪ್ಪ ಬಡಿಗೇರ, ಕಾಮಣ್ಣ, ಸಂತೋಷ ಜುನ್ನಾ, ಈಶ್ವರ ಶಹಾಪುರಕರ್, ಬೂದಯ್ಯ ಹಿರೇಮಠ, ರಮೇಶ ಯಾಳಗಿ, ಕಾರ್ಯದರ್ಶಿ ರಾಘವೇಂದ್ರ ಹಾರಣಗೇರಾ, ಆನಂದ ನಾಯಕ, ಎಮ್.ಎಮ್. ಹುಂಡೆಕಾರ, ಚಂದ್ರಕಲಾ ಸಿತನಿ, ಸೌಭಾಗ್ಯಲಕ್ಷ್ಮೀ ಮುಂತಾದವರು ಉಪಸ್ಥಿತರಿದ್ದರು.