ಕ.ರ.ವೇ. ಮನವಿ

ಲಕ್ಷ್ಮೇಶ್ವರ,ಫೆ29 : ಪಟ್ಟಣದಲ್ಲಿ ಈಗಾಗಲೇ ಥರ್ಡ್ ಐ ಸಿ ಸಿ ಕ್ಯಾಮೆರಾ ಅಳವಡಿಸಿ ಸಂಚಾರ ನಿಯಮ ಪಾಲನೆ ಮಾಡದೆ ಇರುವವರಿಗೆ ನೋಟಿಸ್ ಮೂಲಕ ದಂಡ ಕಟ್ಟಿಸುವ ಪ್ರಕ್ರಿಯೆಗೆ ಚಾಲನೆ ನೀಡಿರುವುದನ್ನು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಕುಮಾರ್ ಶೆಟ್ಟಿ ಬಣದ ಕಾರ್ಯಕರ್ತರು ಬುದುವಾರ ಶಾಸಕ ಚಂದ್ರು ಲಮಾಣಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಮಹೇಶ ಕಲಘಟಗಿ ಮಾತನಾಡಿ ಪಟ್ಟಣದಲ್ಲಿ ಪೂರಕ ಯಾವುದೇ ವ್ಯವಸ್ಥೆ ಇಲ್ಲದೆ ಪೆÇಲೀಸರು ಥರ್ಡ್ ಐ ಸಿ ಸಿ ಕ್ಯಾಮೆರಾ ಅಳವಡಿಸಿರುವುದು ಯಾವ ಉದ್ದೇಶಕ್ಕಾಗಿ ಎಂಬುದು ತಿಳಿಯದಂತಾಗಿದೆ ಪಟ್ಟಣದಲ್ಲಿ ಸಂಚಾರಿ ಪೆÇಲೀಸ್ ಠಾಣೆ ಇಲ್ಲ ಸಂಚಾರಿ ಪೆÇಲೀಸರಿಲ್ಲ ಟ್ರಾಫಿಕ್ ಸಿಗ್ನಲ್ ಗಳಿಲ್ಲ ಪಾರ್ಕಿಂಗ್ ವ್ಯವಸ್ಥೆ ಇಲ್ಲ ಏನು ಇಲ್ಲದೆ ಗ್ರಾಮೀಣ ಪ್ರದೇಶದ ಹಿನ್ನೆಲೆ ಹೊಂದಿರುವ ಮತ್ತು ಸಾವಿರಾರು ಗ್ರಾಮಗಳಿಂದ ಬರುವ ರೈತಾಪಿ ಜನರಿಂದ ದಂಡ ವಸೂಲಿ ಮಾಡುವುದು ಸಮಂಜಸವಲ್ಲ ಎಂದು ಹೇಳಿದವರು ಸರ್ಕಾರ ಕೂಡಲೇ ಈ ವ್ಯವಸ್ಥೆಯನ್ನು ಕೈಬಿಡಬೇಕು ಎಂದು ಒತ್ತಾಯಿಸಿದ್ದಾರೆ.
ಮನವಿ ಸ್ವೀಕರಿಸಿದ ಶಾಸಕ ಚಂದ್ರು ಲಮಾಣಿ ಅವರು ಪಟ್ಟಣದ ಹೊರವಲಯದಲ್ಲಿ ಇದನ್ನು ಅಳವಡಿಸುವುದು ಸೂಕ್ತ ಏಕೆಂದರೆ ಬಹುತೇಕ ಗ್ರಾಮೀಣ ಪ್ರದೇಶದ ಜನರೇ ವ್ಯಾಪಾರ ವಹಿವಾಟು ಮತ್ತು ಕೃಷಿ ಚಟುವಟಿಕೆಗಳಿಗಾಗಿ ಪ್ರತಿ ಬಾರಿಯೂ ವಾಹನ ತೆಗೆದುಕೊಂಡು ಅಡ್ಡಾಡುವುದು ಸ್ವಾಭಾವಿಕ ಇಂತಹ ವ್ಯವಸ್ಥೆಯಲ್ಲಿ ಮೋಟರ್ ಸೈಕಲ್ ಸವಾರರಿಗೆ ಪಟ್ಟಣದಲ್ಲಿ ಹೆಲ್ಮೆಟ್ ಕಡ್ಡಾಯ ತಮಗೂ ಒಪ್ಪಿಗೆ ಇಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸೋಮಣ್ಣ ಬೆಟಗೇರಿ ಚಂದ್ರು ಪಾಣಿಗಟ್ಟಿ ಈಶ್ವರಗೌಡ ಪಾಟೀಲ್ ಮುತ್ತಣ್ಣ ಕುಂದುಗೋಳ ಶ್ರೇಯಾಂಕ ಹಿರೇಮಠ ಪ್ರಸನ್ನ ಅರಳಿ ಪ್ರವೀಣ್ ದಶ್ಮನಿ ಸತೀಶ್ ಮೇದೂರ್ ಅಂಬರೀಶ್ ಗಾಂಜಿ ಪದ್ಮರಾಜ್ ಶೆಟ್ಟಿ ಬಸನಗೌಡ ಮನ್ನಂಗಿ ಪ್ರಜ್ವಲ ಗಾಂಜಿ ತಿರ್ಕಪ್ಪ ಎಲಗಚ್ಚಿ ಸೇರಿದಂತೆ ಅನೇಕರಿದ್ದರು.