ಕ.ರಾ.ಸ.ನೌ.ಸಂಘ ಆಳಂದ ವತಿಯಿಂದ ಮಾಸ್ಕ ವಿತರಣೆ

ಆಳಂದ ;ಮೇ.30: ಆಳಂದ ಶಾಸಕ ಸುಭಾಷ ಆರ್ ಗುತ್ತೇದಾರ ಜನ್ಮದಿನದ ಪ್ರಯಕ್ತ ಕ.ರಾ.ಸ.ನೌ.ಸಂಘ ಆಳಂದ ವತಿಯಿಂದ ಕಾರ್ಮಿಕರಿಗೆ ಪೋಲಿಸ್ ಸಿಬ್ಬಂದಿಗಳಿಗೆ ಉಚಿತ ಮಾಸ್ಕ ವಿತರಣೆ ಆಹಾರ ಸ್ಯಾನಿಟೆಜರ ವಿತರಣೆ ಮಾಡಲಾಯಿತು.ಸಂಘದ ಅಧ್ಯಕ್ಷ ಸಿದ್ದರಾಮ ಪಾಟೀಲ ವಿತರಣೆ ಮಾಡಿ ಮಾತನಾಡಿ ಕೊರೊನಾ ಸಂದರ್ಬ ಎಲ್ಲರನ್ನು ಭಯಭಿತರನ್ನಾಗಿಸಿದೆ ಎಲ್ಲರೂ ಜೀವ ಕೈಯಲ್ಲಿ ಹಿಡಿದು ಬದುಕುವಂತಾಗಿದೆ ಬಡವರು ಕೂಲಿಕಾಮೀಕರು ಯಾವುದೆ ಕೆಲಸವಿಲ್ಲದೆ ಪದಾಡುಂತಾಗಿದೆ ಇಂಥ ಸಮಯದಲ್ಲಿ ಅವರ ನೆರವಿಗೆ ಬರುವುದು ಅವಶ್ಯಕವಾಗಿದೆ ಮಾನ್ಯ ಶಾಸಕರ ಹುಟ್ಟು ಹಬ್ಬದ ಪ್ರಯಕ್ತ ನಮ್ಮ ಕೈಲಾದಷ್ಟು ಸಹಾಯ ಮಾಡಲಾಗುತ್ತಿದೆ ಪ್ರತಿಯೊಬ್ಬರು ಕೂಡಾ ಕೋರೊನಾ ನಿರ್ಲಕ್ಷ ಮಾಡದೆ ಕಡ್ಡಾಯವಾಗಿ ಸರಕಾರದ ನಿಯಮ ಪಾಲನೆ ಮಾಡಿ ಕಡ್ಡಾಯವಾಗಿ ಮಾಸ್ಕ ಧರಿಸಬೇಕು ಎಂದು ಹೇಳಿದರು. ಈ ಸಮಯದಲ್ಲಿ ಗುರುನಾಥ ಭಾವಿ ಲೋಕಪ್ಪ ಜಾದವ ಉಮೇಶ ಘಂಟೆ ಅಂಕುಶ ಚಳಕಾಪುರ ರಾಜಕುಮಾರ ಮೇತ್ರೆ ಶರಣು ದೇವೇಂದ್ರಪ್ಪ ಕುಂಬಾರ ಕಲ್ಯಾಣಪ್ಪ ಬಿಜ್ಜರಗಿ ಜಗದೀಶ ಕೋರೆ ಇತರರು ಇದ್ದರು.