ಕ.ಪ್ರೆ.ಕ್ಲಬ್‌ಕೌನ್ಸಿಲ್ ಮಹಿಳಾ ಯುವ ಘಟಕ ರಾಜ್ಯಾಧ್ಯಕ್ಷರಾಗಿ ಪಲ್ಲವಿ ಆಯ್ಕೆ


ಬೆಂಗಳೂರು,ಸೆ೧೨:ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಕನ್ನಡ ಸಂಸ್ಕೃತಿ ಇಲಾಖೆಯ ಸಚಿವರಾದ ಸನ್ಮಾನ್ಯ ವಿ. ಸುನೀಲ್ ಕುಮಾರ್ ರವರನ್ನಿ ಬೇಟಿ ಮಾಡಿ ನವೆಂಬರ್‌ನಲ್ಲಿ ದುಬೈನಲ್ಲಿ ಹಮ್ಮಿಕೊಂಡಿರುವ ವಿಶ್ವ ಕನ್ನಡ ಹಬ್ಬಕ್ಕೆ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಶ್ರೀಮತಿ ಪಲ್ಲವಿಯವರನ್ನು ವಿಶ್ವ ಕನ್ನಡ ಹಬ್ಬದ ಸಂಚಾಲಕರಾಗಿ ಮತ್ತು ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಮಹಿಳಾ ಯುವ ಘಟಕದ ರಾಜ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಿಲಾಗಿದ್ದು , ಸಚಿವರಾದ ಸುನಿಲ್ ಕುಮಾರ್ ಆದೇಶ ಪತ್ರ ನೀಡಿ ಅಭಿನಂದನೆಗಳನ್ನು ತಿಳಿಸಿದರು.
ಪಲ್ಲವಿಯವರು ಸುಮಾರು ವರ್ಷಗಳಿಂದ ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಾ ಬಂದಿರುತ್ತಾರೆ ಅಲ್ಲದೇ ಇವರೊಬ್ಬ ಪ್ರತಿಭಾನ್ವಿತ ಗಾಯಕಿ ಕೂಡ ಹೌದು. ಇವರ ಸಾಧನೆಗಳನ್ನು, ಸೇವೆಗಳನ್ನ ಗಮನಿಸಿ ಅವರಿಗೆ ಈ ದಿನ ನಮ್ಮ ಸಂಸ್ಥೆಯ ಮಹಿಳಾ ಯುವ ಘಟಕದ ರಾಜ್ಯಾಧ್ಯಕ್ಷರನ್ನಾಗಿ ಹಾಗೂ ವಿಶ್ವ ಕನ್ನಡ ಹಬ್ಬದ ಸಂಚಾಲಕರನ್ನಾಗಿ ಆಯ್ಕೆ ಮಾಡಿದ್ದೇವೆ. ಅವರಿಗೆ ನೀಡಿರುವ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿ, ಸಂಸ್ಥೆಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಾರೆ ಎಂಬ ಭರವಸೆ ನಮಗಿದೆ ಅವರಿಗೆ ಅಭಿನಂದನೆಗಳು ಎಂದು ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಅಧ್ಯಕ್ಷರು ತಮ್ಮ ಅಭಿಪ್ರಾಯ ತಿಳಿಸಿದರು.ಪದ್ಮ ನಾಗರಾಜ್, ವಿಶ್ವ ಕನ್ನಡ ಹಬ್ಬದ ಕಾರ್ಯಾಧ್ಯಕ್ಷರಾದ ಶ್ರೀಮತಿ ಸುಧಾ, ಮಾಜಿ ಉಪ ಮಹಾ ಪೌರರಾದ ಎಸ್. ಹರೀಶ್, ಬೆಂಗಳೂರು ನಗರ ಜಿಲ್ಲಾಧ್ಯಕ್ಷರಾದ ಪಾರ್ಥ, ಯುವ ಘಟಕದ ಅಧ್ಯಕ್ಷರಾದ ಭಾರತ್ ಜಾಕ್ ಮುಂತಾದವರು ಜೊತೆಯಿದ್ದರು.