
ಸಿಂಧನೂರು,ಆ.೧೪-
೩೭೧ ಕಾಯ್ದೆಯಿಂದ ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಿದ್ದು ಎಲ್ಲರು ೩೭೧ ಸರ್ಟಿಫಿಕೇಟ್ ಮಾಡಿಸಿಕೊಂಡು ಇದರ ಸದುಪಯೋಗ ಪಡೆದುಕೊಳ್ಳುವಂತೆ ವೈದ್ಯಕೀಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಶರಣು ಪ್ರಕಾಶ ಪಾಟೀಲ ಹೇಳಿದರು.
ವಿವಿಧ ಇಲಾಖೆಗಳ ಸಹಯೋಗದೊಂದಿಗೆ ತಾಲೂಕಾ ಆಡಳಿತ ನಗರದ ಆರ್‌ಜಿಎಂ ಶಾಲಾ ಮೈದಾನದಲ್ಲಿ ಹಮ್ಮಿಕೊಂಡಿದ್ದ ನನ್ನ ಮಣ್ಣು ನನ್ನ ದೇಶ ಸಿಂಧನೂರು ನಡೆಗೆ ಸ್ವಾತಂತ್ರ್ಯ ಕಡೆಗೆ ಹಾಗೂ ೨೦ ಕೋಟಿಗೂ ಮೇಲ್ಪಟ್ಟ ವಿವಿಧ ಅಬಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಸತತ ಪ್ರಯತ್ನ ಮಾಡಿ ೩೭೧ ಜಾರಿಗೆ ಮಾಡುವಲ್ಲಿ ಅವರು ಪ್ರಯತ್ನ ಪಟ್ಟು ಜಾರಿಗೆ ತಂದರು.
೩೭೧ ಕಲಂ ಜಾರಿಯಿಂದ ಕ.ಕ ಭಾಗದಲ್ಲಿ ಇಲ್ಲಿತನಕ ಸುಮಾರು ೩೦ ಸಾವಿರ ನೌಕರಿಗಳನ್ನು ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ ಮೆಡಿಕಲ್ ಇಂಜನಿಯರಿಂಗ್ ಸೇರಿದಂತೆ ವೃತ್ತಿ ಪರ ಶಿಕ್ಷಣ ಪಡೆಯಲು ಈ ಭಾಗದ ವಿದ್ಯಾರ್ಥಿಗಳಿಗೆ ಸೀಟುಗಳನ್ನು ಮೀಸಲಿಟ್ಟ ಅವರಿಗೆ ನೀಡಲಾಗುತ್ತಿದೆ ಸಿದ್ಧರಾಮಯ್ಯ ನೇತ್ರತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಈ ಭಾಗದ ವಿದ್ಯಾರ್ಥಿಗಳಿಗೆ ಇನ್ನೂ ೫೦ ಸಾವಿರ ನೌಕರಿ ಒದಗಿಸುವ ಗುರಿ ಇಟ್ಟುಕೊಂಡಿದ್ದೇವೆ ಎಂದರು.
ನಮ್ಮ ಸರ್ಕಾರ ಈ ಭಾಗದ ಸರ್ವಾಂಗೀಣ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡಲು ಸಿದ್ಧವಾಗಿದ್ದು ಮಕ್ಕಳಿಗೆ ಶಿಕ್ಷರು ಮೌಲ್ಯ ಯುತ ಹಾಗೂ ಗುಣಮಟ್ಟದ ಶಿಕ್ಷಣ ನೀಡಬೇಕು ಸರ್ಕಾರ ನಿಮ್ಮ ಜೊತೆ ಇದೆ ದೇಶ ಕಟ್ಟುವಲ್ಲಿ ನಮ್ಮ ಪಾತ್ರ ಇದೆ. ಎನ್ನುವದನ್ನು ವಿದ್ಯಾರ್ಥಿಗಳು ಮರೆಯಬಾರದು ಎಲ್ಲರ ಜೊತೆ ಉತ್ತಮ ಬಾಂಧವ್ಯ ಇಟ್ಟುಕೊಂಡು ಸಮಾಜದಲ್ಲಿ ಸಾಮರಸ್ಯ ಜೀವನ ನಡೆಸಬೇಕು ಎಂದು ಸಚಿವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಸ್ವಾತಂತ್ರ್ಯ ದಿನಾಚರಣೆಯ ಮುನ್ನ ಇಂದು ತಾಲೂಕ ಆಡಳಿತ ಹಮ್ಮಿಕೊಂಡಿದ್ದ ಸ್ಥಬ್ಧ ಚಿತ್ರ ಹಾಗೂ ಮಕ್ಕಳು ಮಹಿಳೆಯರ ಮೆರವಣಿಗೆಯನ್ನು ಮೆಚ್ಚಿದರು ಜಿಲ್ಲೆಯ ಅಭಿವೃದ್ಧಿಪಡಿಸಲು ನಾವೆಲ್ಲರು ಶ್ರಮಿಸೋಣ ಎಂದರು. ಕಾರ್ಯಕ್ರಮದ ನಂತರ ವಿವಿಧ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ಸ್ಥಬ್ಧ ಚಿತ್ರಗಳ ಮೆರವಣಿಗೆಯನ್ನು ನಗರದಲ್ಲಿ ಮಾಡಲಾಯಿತು.
ಶಾಸಕ ಹಂಪನಗೌಡ ಬಾದರ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಾಸಕರಾದ ಬಸನಗೌಡ ತುರ್ವಿಹಾಳ, ಶರಣೆಗೌಡ ಭಯ್ಯಾಪುರ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷರಾದ ಎಂ.ದೊಡ್ಡ ಬಸವರಾಜ, ಕಾಂಗ್ರೆಸ್ ಮುಖಂಡರಾದ ವಸಂತ ಕುಮಾರ, ಜಾಪರ ಜಾಗೀರದ್ದಾರ, ಈರಣ್ಣ ಹೋರಾಟಗಾರ, ರಜಾಕಾ ಉಸ್ತಾದ, ಜಿಲ್ಲಾಧಿಕಾರಿಯಾದ ಚಂದ್ರಶೇಖರ ನಾಯಕ, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ, ನೀಖಿಲ್. ಬಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್, ಸಹಾಯಕ ಆಯುಕ್ತರಾದ ಅವಿನಾಶ ಶಿಂದ್ಯೆ, ತಹಸೀಲ್ದಾರ ಅರುಣ ಕುಮಾರ ದೇಸಾಯಿ, ನಗರ ಸಭೆಯ ಪೌರಾಯುಕ್ತರಾದ ಮಂಜುನಾಥ ಗುಂಡುರ. ಬಿಇಒ ಸೋಮಶೇಖರ ಗೌಡ, ಡಿವೈಎಸ್ಪಿ ಬಾಳಪ್ಪ, ಶಿವಪ್ಪ ತಳವಾರ, ಸರ್ಕಾರಿ ನೌಕರರ ಸಂಘದ ತಾಲೂಕ ಅಧ್ಯಕ್ಷರಾದ ಚಂದ್ರಶೇಖರ ಹಿರೇಮಠ ಸೇರಿದಂತೆ ವಿವಿಧ ಇಲಾಖೆಯ ತಾಲುಕ ಮಟ್ಟದ ಅಧಿಕಾರಿಗಳು, ಶಿಕ್ಷಕರು, ಮಕ್ಕಳು ಅಂಗನವಾಡಿ ಕಾರ್ಯಕರ್ತೆಯರು ಮೇಲ್ವಿಚಾರಕಿಯರು ಸೇರಿದಂತೆ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.