ಕ.ಕ. ಮಾದರಿ: ಅಕಾಡೆಮಿ ಗುರಿ:ಬಸವರಾಜ ಪಾಟೀಲ ಸೇಡಂ

ಬೀದರ್:ಜ.19: ಐದು ವರ್ಷಗಳಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶವನ್ನು ದೇಶದಲ್ಲೇ ಮಾದರಿಯನ್ನಾಗಿಸುವುದು ವಿಕಾಸ ಅಕಾಡೆಮಿಯ ಗುರಿಯಾಗಿದೆ ಎಂದು ಅಕಾಡೆಮಿಯ ಮುಖ್ಯ ಸಂಯೋಜಕ ಬಸವರಾಜ ಪಾಟೀಲ ಸೇಡಂ ಹೇಳಿದರು.

ನಗರದ ಪ್ರತಾಪನಗರದ ಜನಸೇವಾ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಸಭಾಂಗಣದಲ್ಲಿ ನಡೆದ ಸೇಡಂನ ಶ್ರೀ ಕೊತ್ತಲ ಬಸವೇಶ್ವರ ಶಿಕ್ಷಣ ಸಮಿತಿ ಸಂಚಾಲಿತ ವಿಕಾಸ ಅಕಾಡೆಮಿಯ ಬೀದರ್ ಜಿಲ್ಲಾ ಘಟಕದ ವಿಶೇಷ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅಕಾಡೆಮಿಯಿಂದ ಈಗಾಗಲೇ ಹತ್ತು ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ. ಕೃಷಿ, ಆರೋಗ್ಯ, ಸಂಸ್ಕøತಿ, ಪ್ರವಾಸೋದ್ಯಮ, ಮಾನವ ಸಂಪನ್ಮೂಲ ಸೇರಿದಂತೆ ಎಲ್ಲ ಕ್ಷೇತ್ರಗಳ ಅಭಿವೃದ್ಧಿಗೂ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.

ವಿಕಾಸ ಅಂದರೆ ಕೇವಲ ವ್ಯಕ್ತಿಯ ವಿಕಾಸವಷ್ಟೇ ಅಲ್ಲ; ಸಮಾಜ ಹಾಗೂ ದೇಶದ ವಿಕಾಸವೂ ಆಗಬೇಕಿದೆ. ಅಕಾಡೆಮಿ ಈ ದಿಸೆಯಲ್ಲಿ ಕಾರ್ಯೋನ್ಮುಖವಾಗಿದೆ ಎಂದು ಹೇಳಿದರು.

ಕಲ್ಯಾಣ ಕರ್ನಾಟಕ ಶ್ರೀಮಂತ ಪರಂಪರೆ ಹೊಂದಿದೆ. ಬಸವಾದಿ ಶರಣರು ನಡೆದಾಡಿದ, ಹನುಮ ಜನಿಸಿದ ಪುಣ್ಯ ಭೂಮಿಯಾಗಿದೆ. ಕಲ್ಯಾಣ ಹೆಸರಲ್ಲೇ ದೊಡ್ಡ ಶಕ್ತಿ ಇದೆ ಎಂದರು.

ದೃಷ್ಟಿ ಬದಲಾದರೆ ಸೃಷ್ಟಿ ಬದಲಾಗಲಿದೆ. ಹೀಗಾಗಿ ಈ ನೆಲದಲ್ಲಿ ಜನಿಸಿದವರು ಹಿಂದುಳಿದವರೆಂಬ ಕೀಳರಿಮೆಯನ್ನು ತೊಡೆದು ಹಾಕಬೇಕು. ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಮುಂದಾಗಬೇಕು ಎಂದು ಸಲಹೆ ಮಾಡಿದರು.

ಅಕಾಡೆಮಿಯ ಜಿಲ್ಲಾ ಘಟಕದ ಅಧ್ಯಕ್ಷ, ನಿವೃತ್ತ ಕರ್ನಲ್ ಶರಣಪ್ಪ ಸಿಕೇನಪುರ ಮಾತನಾಡಿ, ಜಿಲ್ಲೆಯ ಯುವಕರು ಸ್ವ ಇಚ್ಛೆಯಿಂದ ಸೇನೆಗೆ ಸೇರಲು ಮುಂದೆ ಬಂದರೆ ಅಕಾಡೆಮಿಯು ಸಂಘ ಸಂಸ್ಥೆಗಳು ಹಾಗೂ ದಾನಿಗಳ ನೆರವಿನೊಂದಿಗೆ ಇನ್ನಷ್ಟು ಸೇನಾ ಭರ್ತಿ ಪೂರ್ವ ತರಬೇತಿ ಶಿಬಿರಗಳನ್ನು ಸಂಘಟಿಸಲು ಸಿದ್ಧವಿದೆ ಎಂದು ತಿಳಿಸಿದರು.

ಅಕಾಡೆಮಿಯ ಜಿಲ್ಲಾ ಘಟಕದ ಸಂಯೋಜಕ ರೇವಣಸಿದ್ದಪ್ಪ ಜಲಾದೆ ಅವರು ಅಕಾಡೆಮಿಯ 2021-22ನೇ ಸಾಲಿನ ಕಾರ್ಯ ಚಟುವಟಿಕೆಗಳ ವಿಸ್ತøತ ಮಾಹಿತಿ ನೀಡಿದರು.

ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕøತಿಕ ಸಂಘದ ಸಂಚಾಲಿತ ಕೌಶಲ ಕೇಂದ್ರಗಳಲ್ಲಿ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಸಾಂಕೇತಿಕವಾಗಿ ಪ್ರಮಾಣ ಪತ್ರ ವಿತರಿಸಲಾಯಿತು.

ಬೀದರ್ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಬಿ.ಜಿ. ಶೆಟಕಾರ್, ಗುರುನಾನಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಬಲಬೀರ್ ಸಿಂಗ್, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ, ಅಕಾಡೆಮಿಯ ಜಿಲ್ಲಾ ಘಟಕದ ಸಂಯೋಜಕ ಬಸವರಾಜ ಅಷ್ಟಗಿ, ಪ್ರಮುಖರಾದ ಬಿ.ಎಸ್. ಕುದುರೆ ಹಾಗೂ ಶಿವರಾಜ ಹುಡೇದ್ ಇದ್ದರು.

ಅಕಾಡೆಮಿಯ ಜಿಲ್ಲಾ ಘಟಕದ ಸಹ ಸಂಚಾಲಕ ರೇವಣಸಿದ್ದ ಜಾಡರ್ ನಿರೂಪಿಸಿದರು. ಅಕಾಡೆಮಿಯ ಜಿಲ್ಲೆಯ ಎಲ್ಲ ತಾಲ್ಲೂಕುಗಳ ಸಂಯೋಜಕರು, ಸಹ ಸಂಯೋಜಕರು, ಸಂಚಾಲಕರು, ಸಹ ಸಂಚಾಲಕರು ಹಾಗೂ ಮಹಿಳಾ ಪ್ರಮುಖರು ಪಾಲ್ಗೊಂಡಿದ್ದರು.