ಕ. ಕ ಭಾಗದ ಮಾದಿಗರ ರಾಜಕೀಯ ಭವಿಷ್ಯ ಹಾಳು- ದಾನಪ್ಪ

ರಾಯಚೂರು, ಏ.೨೩- ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕಲ್ಯಾಣ ಕರ್ನಾಟಕ ಭಾಗದ ಮಾದಿಗರ ಪ್ರಬಲ ರಾಜಕೀಯ ಭವಿಷ್ಯ ಹಾಳಿ ಮಾಡಿದ್ದಾರೆ ಎಂದು ಸಿ.ದಾನಪ್ಪ ನೀಲೋಗಲ್ ಅವರು
ಹೇಳಿದರು. ಅವರಿಂದು ನಗರದ ಕನ್ನಡ ಭವನದಲ್ಲಿ ಒಳಮೀಸಲಾತಿ ಚಳುವಳಿ ಸರ್ವಸ್ವ ದಾರೆ ಎರೆದ ಸಮುದಾಯದಕ್ಕೆ ಕೃತಜ್ಞತಾ ಸಮಾರಂಭದಲ್ಲಿ ಬಸವಣ್ಣ ಮತ್ತು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು,
ಕಾಂಗ್ರೆಸ್ ಪಕ್ಷ ಸಾಮಾಜಿಕ ನ್ಯಾಯ ಹೆಸರಿನಲ್ಲಿ ೪೦ ವರ್ಷ ಮಾದಿಗರಿಗೆ ಅನ್ಯಾಯ ಮಾಡಿದೆ ಎಂದು ಆರೋಪಿಸಿದರು. ಕಲ್ಯಾಣ ಕರ್ನಾಟಕ ಭಾಗದಲ್ಲಿ೧೮ ಲಕ್ಷ ಮಾದಿಗ ಮತದಾರರಿದ್ದು ರಾಜಕೀಯವಾಗಿ ನಿರ್ಣಯಕರಾಗಿದ್ದಾರೆ. ಸಮುದಾಯಕ್ಕೆ ಸಾಮಾಜಿಕ ನ್ಯಾಯ ಒದಗಿಸಿದೆ ಕಾಂಗ್ರೆಸ್ ಪಕ್ಷ ವಂಚನೆ ಮಾಡುವ ಮೂಲಕ ಸಮಾಜವನ್ನು ಒಡೆದು ಆಳುವ ಕಾರ್ಯವನ್ನು ಮಾಡುತ್ತಿದೆ. ಯಾರಿಗೂ ಯಾವುದೇ ಒಂದು ಅವಕಾಶಗಳನ್ನು ನೀಡದೇ ಒಡೆದು ಆಳುವ ನೀತಿಯನ್ನು ಅವರು ಅನುಸರಿಸುತ್ತಾರೆಂದು ಕಾಂಗ್ರೆಸ್ ವಿರುದ್ಧ ನೇರ ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ಅವರು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಒಳಮೀಸಲಾತಿ ರದ್ದು ಮಾಡುತೇವೆ ಎಂದರು.೭೦ ವರ್ಷ ದೇಶವನ್ನಾಳಿದ ಕಾಂಗ್ರೆಸ್ ಮಾದಿಗರನ್ನು ಮತಬ್ಯಾಂಕ್ ಆಗಿ ಮಾಡಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜೆ. ಬಿ ರಾಜು ಮಾತನಾಡುತ್ತಾ,
ಸದಾಶಿವ ಆಯೋಗ ವರದಿ ಜಾರಿಗೆ ಮಾಧುಸ್ವಾಮಿ ನೇತೃತ್ವದ ಉಪ ಸಮತಿ ರಚಿಸಿದ್ದು ನಮ್ಮ ಹೋರಾಟದ ಮೊದಲ ಜಯ.ಒಳಮೀಸಲಾತಿ ಕೇಂದ್ರಕ್ಕೆ ಶಿಫಾರಸ್ಸು ಮಾಡಿರುವುದ ಬಗ್ಗೆ ಅನೇಕ ಗೊಂದಲ ಸೃಷ್ಟಿಯಿದೆ. ಆದರೆ ಸಂವಿಧಾನ ಅಡಿಯಲ್ಲಿ ಕೇಂದ್ರಕ್ಕೆ ಶಿಫಾರಸ್ಸು ಮಾಡಲಾಗಿದೆ ಎಂದರು. ನಾಯಕರು ಹೋರಾಟ ಹುಟ್ಟು ಹಾಕಿರಬೇಕು ಹೊರೆತು ರಾಜಿಕೀಯ ನಾಯಕರ ಕೈ ಗೊಂಬೆಗಳು ಆಗಬಾರದು. ಸದಾಶಿವ ಆಯೋಗ ವರದಿ ಜಾರಿಯಾಗದೇ ರಾಜ್ಯ ಸರ್ಕಾರ ಈಗ ಕೇಂದ್ರಕ್ಕೆ ಶಿಫಾರಸ್ಸು ಮಾಡಿದ್ದಾರೆ ಹೊರತು ವರದಿ ಜಾರಿಯಾಗಿಲ್ಲ. ಆದರೆ ಕೆಲ ನಾಯಕರು, ಹೋರಾಟಗಾರರು ಸನ್ಮಾನ ಮಾಡಿಕೊಂಡು ಜಂಬ ಕೊಚ್ಚಿಕೊಳ್ಳುತ್ತಿರುವುದು ಸರಿಯಲ್ಲ ಎಂದರು.
೨೦೨೪ ವರೆಗೆ ಹೋರಾಟ ಮುಂದುವರೆಸಬೇಕು. ಗೊಂದಲ ನಿವಾರಿಸಿ, ಯಾವ ಸಮುದಾಯ ಗಳಿಗೆ ಎಷ್ಟು ಸಿಗಬೇಕು ಎಂದು ಸರಿಯಾದ ಮಾಹಿತಿ ದಾಖಲಿಸಿ ಹಂಚಿಕೆ ಮಾಡಬೇಕು. ತನುಮನ ಧನದಿಂದ ಹೋರಾಟ ಮುಂದುವರೆಸಬೇಕು.
ಸದಾಶಿವ ಆಯೋಗ ವರದಿ ಜಾರಿಗೆ ಅನೇಕರು ತ್ಯಾಗ ಬಲಿದಾನ ಮಾಡಿದ್ದು ಅವರ ಸ್ಮರಣೆ ಮಾಡಬೇಕಿದೆ.ರಾಜ್ಯ ಸರ್ಕಾರ ಮುಸ್ಲಿಂ ಸಮಾಜದ ಶೇ ೪ ರಷ್ಟು ಮೀಸಲಾತಿ ರದ್ದು ಮಾಡಿ ಅವರನ್ನು ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿದ್ದು ಖಂಡನೀಯ ಮುಸ್ಲಿಮರು ಬಲಾಡ್ಯ ಜಾತಿಗಳೊಂದಿಗೆ ಸ್ಪರ್ಧೆ ಮಾಡಲು ಅಸಾಧ್ಯದ ಮಾತು ಹೀಗೆ ಮಾದಿಗ ಸಮುದಾಯದ ಹೋರಾಟ ಅನೇಕ ಮೈಲುಗಲ್ಲು ಸಾಧೀಸಿದ್ದು ತಾತ್ಕಾಲಿಕ ಜಯ ಸಿಕ್ಕಿದ್ದು ಹೋರಾಟ ಮುಂದುವರೆಸಬೇಕಿದೆ ಎಂದು ಹೇಳಿದರು
೧೦೫ ಕಾಯ್ದೆ ತಿದ್ದುಪಡಿ ಆಗಲೇಬೇಕು.
೮೩ ಜಾತಿಗಳನ್ನು ಒಂದೇ ಪಟ್ಟಿಯಲ್ಲಿ ಸೇರಿಸಿ ಶೇ.೪ ರಷ್ಟು ಮೀಸಲಾತಿ ನೀಡಲಾಗಿದೆ. ಮೀಸಲಾತಿ ಹಂಚಿಕೆಯಲ್ಲಿ ವಿಕಾಸ ಮತ್ತು ವಿನ್ಯಾಸ ಎಷ್ಟಿದೆ ಎಂದು ಅರಿತುಕೊಳ್ಳಬೇಕು.
ಈ ಸಂದರ್ಭದಲ್ಲಿ ನರಸಿಂಹಲು ಬಂಡಾರಿ, ನರಸಿಂಹಲು ಮಾಡಗಿರಿ, ರಾಘವೇಂದ್ರ ಬೋರೆಡ್ಡಿ, ಹೇಮರಾಜು ಆಸ್ಕಿಹಾಳ್, ಹುಲಿಗೆಪ್ಪ ವೆಂಕಟೇಶ ಸೇರಿದಂತೆ ಉಪಸ್ಥಿತರಿದ್ದರು.