ಕ.ಕ ಇತಿಹಾಸ ಮತ್ತು ಸಾಮಾಜಿಕ ಬೆಳವಣಿಗೆ ಕಾರ್ಯಕ್ರಮ

ಚಾರಿತ್ರಿಕ ಇತಿಹಾಸ ಮರೆಯಬಾರದು – ಪ್ರೊ.ಹರೀಶ್ ರಾಮಸ್ವಾಮಿ
ರಾಯಚೂರು, ಸೆ.೨೫- ಅಭಿವೃದ್ದಿ ಎಂದರೆ ಕೇವಲ ಕಟ್ಟಡ ನಿರ್ಮಾಣ ಮಾಡಿದರೆ ಅಭಿವೃದ್ದಿ ಅಲ್ಲ ಸಾಮಾಜಿಕ ಅರ್ಥಿಕವಾಗಿ ಅಭಿವೃದ್ದಿ ಆಗಬೇಕು ಎಂದು ರಾಯಚೂರು ವಿಶ್ವ ವಿದ್ಯಾಲಯ ಕುಲಪತಿ ಪ್ರೊ.ಹರೀಶ್ ರಾಮಸ್ವಾಮಿ ಹೇಳಿದರು.
ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸರಕಾರಿ ಪ್ರಥಮ ದರ್ಜೆ ಕಾಲೇಜು ,ರಾಯಚೂರು ಇತಿಹಾಸ ಹಾಗೂ ಸಮಾಜಶಾಸ್ತ್ರ ವಿಭಾಗಗಳ ವತಿಯಿಂದ ಮತ್ತು ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆ , ಬೆಂಗಳೂರು ಇವರ ಸಹಯೋಗದೊಂದಿಗೆ ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣ ಕಲ್ಯಾಣ ಕರ್ನಾಟಕದ ಇತಿಹಾಸ ಮತ್ತು ಸಾಮಾಜಿಕ ಬೆಳವಣಿಗೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಲೇಜು ಅಭಿವೃದ್ಧಿ ಮಾಡಿಕೊಂಡರೆ ನಂತರ ಅಭಿವೃದ್ದಿ ಚಟುವಟಿಕೆಗಳು ಆಗುತ್ತವೆ.ಕಾಲೇಜು ಸುತ್ತ ಮುತ್ತಲು ಸ್ವಚ್ಛತೆ ತಾಂಡವಾಡುತ್ತಿದೆ.ಆದರ್ಶ ಮತ್ತು ಸ್ವಚ್ಛ್ರತೆ ಇಟ್ಟುಕೊಳ್ಳಬೇಕು. ಚಾರಿತ್ರಿಕ ಇತಿಹಾಸವನ್ನು ಮರೆಯಬಾರದು. ಚಾರಿತ್ರಿಕ ದೃಷ್ಟಿಕೋನ ಇಟ್ಟುಕೊಂಡು ಅಭಿವೃದ್ಧಿಗೆ ಮುನ್ನಡೆಯಬೇಕು ಎಂದರು.
ಕಾಲೇಜ್ ಮಂಡಳಿಯವರು ಕಾಲೇಜು ಅಭಿವೃದ್ಧಿಗೆ ಮುಂದಾಗಬೇಕು ಎಂದರು.
ಈ ಸಂದರ್ಭದಲ್ಲಿ ಅರ್.ಮಲ್ಲನಗೌಡ, ಜೆ. ಎಲ್. ಈರಣ್ಣ, ಡಾ.ಶರಣ ಬಸವ ಪಾಟೀಲ್, ಡಾ.ಯಂಕಣ್ಣ, ಡಾ. ಪುಷ್ಪವತಿ,ಸೇರಿದಂತೆ ಇತರರು ಉಪಸ್ಥಿತರಿದ್ದರು.