ಕ.ಕರ್ನಾಟಕದಲ್ಲಿಯೇ ಐವಾಸ್ ಹೃದಯ ಚಿಕಿತ್ಸೆ ಹಾಗೂಗ್ಯಾಸ್ಟ್ರೋಎಂಟ್ರಾಲಜಿ ಚಿಕಿತ್ಸೆ ಗುದಗೆ ಆಸ್ಪತೆಯಲ್ಲಿ ಲಭ್ಯ

ಬೀದರ್:ಮಾ.30: ಹೃದಯ ಸಂ¨ಂಧಿ ಶಸ್ತ್ರ ಚಿಕಿತ್ಸೆಗಾಗಿ ಕಲ್ಯಾಣ ಕರ್ನಟಕದಲ್ಲಿ ಮೊಟ್ಟ ಮೊದಲ ಬಾರಿಗೆ ಇಂಟ್ರಾ ವ್ಯಾಸ್ಕುಲರ್ ಅಲ್ಟ್ರಾ ಸೋನೊಗ್ರಾಫಿ ಎಂಬ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಚಿಕಿತ್ಸೆ ನಮ್ಮ ಆಸ್ಪತ್ರೆಯಲ್ಲಿ ಲಭ್ಯವಿದೆ ಎಂದು ಗುದಗೆ ಸೂಪರ್ ಸ್ಪೆಷಾಲಿಟಿ ಐಂಡ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಹೃದಯ ರೋಗ ತಜ್ಞರಾದ ಡಾ.ನಿತೀನ ಗುದಗೆ ತಿಳಿಸಿದರು.
ಗುರುವಾರ ನಗರದಲ್ಲಿ ತಮ್ಮ ಆಸ್ಪತ್ರೆಯಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಎಲ್ಲ ಕಡೆ ಸ್ಪಂಟ್ ಹಾಕುವುದು ಸಾಮಾನ್ಯ. ಆದರೆ ಈ ನವೀನ ಮಾದರಿಯ ಐವಾಸ್ ಚಿಕಿತ್ಸೆಯು ಹೃದಯದಲ್ಲಿ ಸ್ಟಂಟ್ ಸರಿಯಾದ ಸ್ಥಳದಲ್ಲಿ ಅಳವಡಿಸಲಾಗಿದೆ ಎಂಬುದನ್ನು ತಿಳಿಸುತ್ತದೆ. ವಿಶೇಷವಾಗಿ ಇದು ಲೆಫ್ಟ್ ಮೇನ್ ಎಂಜು ಪ್ಲಾಸ್ಟಿ ಕೇಸ್‍ಗಳಿಗೆ ಉಪಯೋಗವಾಗುತ್ತದೆ. ಇದೊಂದು ಸಣ್ಣ ಕ್ಯಾಮೆರಾದಂತಿದ್ದು, ಅದಕ್ಕೆ ವೈರ್ ಅಳವಡಿಸಲಾಗಿದ್ದು, ಎಲ್ಲೆಲ್ಲಿ ಬ್ಲಾಕೆಜ್ ಇವೆ, ಅದು ಎಷ್ಟು ಪ್ರತಿಶತವಿದೆ ಎಂಬುದನ್ನು ಪತ್ತೆ ಹಚ್ಚುತ್ತದೆ. ಅದರ ಆಧಾರದಲ್ಲಿ ಈ ಅತ್ಯಾಧುನಿಕ ಮಾದರಿಯ ಚಿಕಿತ್ಸೆ ನೀಡಲಾಗುತ್ತದೆ ಎಂದರು.
ಎಫ್.ಎಫ್.ಆರ್‍ನಿಂದ ಸ್ಟಂಟ್ ಹಾಕಬೇಕೆ ಅಥವಾ ಬೇಡ ಎಂಬುದನ್ನು ನಿರ್ಧರಿಸುತ್ತದೆ. ಆದರೆ ಐವಾಸ್‍ನಿಂದ ಸ್ಟಂಟ್ ಸರಿಯಾಗಿ ಕುಳಿತಿದೆ ಎಂಬುದು ಗೊತ್ತು ಮಾಡುತ್ತದೆ. ರೋಟಾ ಎಂಬ ಚಿಕಿತ್ಸೆಯು 60 ವರ್ಷ ಮೇಲ್ಪಟ್ಟವರಲ್ಲಿ ಹೆಚ್ಚಾಗಿ ಕ್ಯಾಲ್ಸಿಯಮ್ ಇರುವವರಿಂದ ಡ್ರಿಲ್ ಮೂಲಕ ಹೃದಯ ರಕ್ತನಾಳ ತೆರವುಗೊಳಿಸಿ ಚಿಕಿತ್ಸೆ ನೀಡಲು ಸಹಕಾರಿಯಾಗುತ್ತದೆ. ಈ ಮೇಲಿನ ಎಲ್ಲ ಅತ್ಯಾಧುನಿಕ ಮಾದರಿ ಚಿಕಿತ್ಸೆಗಳು ಯಶಸ್ವಿನಿ, ಬಿ.ಪಿ.ಎಲ್ ಕಾರ್ಡ್, ಆಯುಷ್ಮಾನ ಭಾರತ, ಆರೋಗ್ಯ ಕರ್ನಾಟಕ ಕಾರ್ಡ್ ಹಾಗೂ ಸರ್ಕಾರಿ ನೌಕರರ ಜ್ಯೋತಿ ಸಂಜೀವಿನಿ ಕಾರ್ಡ್ ಹೊಂದಿದವಬರಿಗೆ ಉಚಿತವಾಡ್ಚಿಕಿತ್ಸೆ ನೀಡಲು ನಮ್ಮ ಆಸ್ಪತ್ರೆ 24*7 ಸಿದ್ದವಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು.
ಗ್ಯಾಸ್ಟ್ರೋಲಾಜಿಸ್ಟ್ ತಜ್ಞರಾದ ಡಾ.ಜೈರಾಜ.ವಿ.ಬೊಮ್ಮನ್ ಅವರು ಈ ಸಂದರ್ಭದಲ್ಲಿ ಮಾತನಾಡಿ, ಸಾಮಾನ್ಯವಾಗಿ ಕಾಮಣಿ ಎಂದು ಕರೆಯುವ ಹೆಬ್‍ಟೈಟಿಸ್(ಬಿ) ಹಾಗೂ ಹೆಬ್‍ಟೈಟಿಸ್(ಸಿ) ಕಂಡು ಬಂದಲ್ಲಿ ನಾಟಿ ವೈದ್ಯರಲ್ಲಿಗೆ ತೆರಳದೇ ಅಥವಾ ಚುಚ್ಚು ಹಾಕಿಸಿಕೊಳ್ಳದೇ ನೇರವಾಗಿ ನಮ್ಮಲ್ಲಿಗೆ ಬಂದು ರಕ್ತ ಪರಿಕ್ಷೆ ಮಾಡಿಸಿಕೊಂಡು ಅದಕ್ಕೆ ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದರು. ಗ್ಯಾಸ್ಟಿಕ್ ಬಗ್ಗೆ ತಿಳಿಸಿದ ಅವರು, ಅನ್ನ ನಾಳದಲ್ಲಿ ಹುಣ್ಣು, ನರವುತ, ವಾಂತಿ ಹಾಗೂ ಭೇಧಿ ಎರಡರಲ್ಲೂ ರಕ್ತಶ್ರಾವವಾಗುದು, ಜೀರ್ಣಕ್ರಿಯಲ್ಲಿ ವ್ಯತ್ಯಾಸ, ಹುಳಿತೇಗ, ಎದೆ ಉರಿಯುವಿಕೆ, ಸಣ್ಣ ಹಾಗೂ ದೊಡ್ಡ ಜಠರ ಸಮಸ್ಯೆಗಳು ಇತ್ಯಾದಿಗಳು ಕಂಡು ಬಂದಲ್ಲಿ ಕ್ಷಣಾರ್ಧದಲ್ಲಿ ಮಾಡಿ ಮುಗಿಸುವ ಎಂಡೋಸ್ಕೊಪಿ ಮುಖಾಂತರ ಅನ್ನನಾಳದಲ್ಲಿರುವ ಹುಣ್ಣಿನ ಸಮಸ್ಯೆ ಪತ್ತೆ ಹಚ್ಚಿ ಅದರ ಮೂಲಕವೇ ಚಿಕಿತ್ಸೆ ನೀಡುತ್ತದೆ. ಹಾಗೇ ದೊಡ್ಡ ಕರುಳು ಹಾಗೂ ಸಣ್ಣ ಕರುಳಿನಲ್ಲಿ ಇವರುವ ಸಮಸ್ಯೆಗಳನ್ನು ಪತ್ತೆ ಹಚ್ಚಲು ಕೊಲೊನೊಸ್ಕೋಪಿ ಎಂಬ ಅತ್ಯಾಧುನಿಕ ಮಾದರಿಯ ತಂತ್ರಜ್ಞಾನ ಬಳಿಸಿ ಅದರ ಮೂಲಕವೇ 10 ನಿಮಿಷಗಳಲ್ಲಿ ಚಿಕಿತ್ಸೆ ಪಡೆದು ಮನೆಗೆ ಸಹ ಹೋಗಬಹುದಾಗಿದೆ. ಎಂಡೊಸ್ಕೋಪಿ ಬಾಯಿ ಮೂಲಕ ಚಿಕಿತ್ಸೆ ನೀಡಿದರೆ, ಕೊಲೊನೊಸ್ಕೋಪಿ ಎಂಬ ಚಿಕಿತ್ಸೆ ಗುದದ್ವಾರದ ಮೂಲಕ ನೀಡಲಾಗುತ್ತದೆ. ಹೊಟ್ಟೆ ನೋವು ಸಮಸ್ಯೆಗಳಿದ್ದರೆ ಅದನ್ನು ಸ್ಕಾನ್ ಮೂಲಕ ಪತ್ತೆ ಹಚ್ಚಿ ಚಿಕಿತ್ಸೆ ಪಡೆಯಬಹುದಾಗಿದೆ. ಇತ್ತಿಚೀಗೆ ಹೆಚ್ಚಾಗಿ ಹೆಣ್ಣು ಮಕ್ಕಲಲ್ಲಿ ಸಾಮಾನ್ಯವಾಗಿ ಕಂಡು ಬರುತ್ತಿರುವ ಕೆಳ ಹೊಟ್ಟೆನೋವಿಗೂ ನಮ್ಮಲ್ಲಿ ಸೂಕ್ತ ಚಿಕಿತ್ಸೆ ಲಭ್ಯವಿದ್ದು, ಜಿಲ್ಲೆಯ ಸಾರ್ವಜನಿಕರು ಗುದಗೆ ಆಸ್ಪತ್ರೆಗೆ ಬಂದು ಈ ಮೇಲಿನ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯಬಹುದಾಗಿದೆ ಎಂದು ಬೊಮ್ಮನ್ ತಿಳಿಸಿದರು.
ಆಸ್ಪತ್ರೆಯ ಹಿರಿಯ ತಜ್ಞವೈದ್ಯರಾದ ಡಾ.ಸಚೀನ್ ಗುದಗೆ ಮಾತನಾಡಿ, ಮುಂಬರುವ ದಿನಗಳಲ್ಲಿ ಜಿಲ್ಲೆಯ ಎಲ್ಲ ಕಾರ್ಯನಿರತ ಪತ್ರಕರ್ತರಿಗೆ ಮೇಲಿನ ಎಲ್ಲ ರೀತಿಯ ಸಮಸ್ಯೆಗಳನ್ನು ಪತ್ತೆ ಹಚ್ಚಲು ಉಚಿತ ತಪಾಸಣೆ ಶಿಬಿರ ಎರ್ಪಡಿಸಿ ಉಚಿತವಾಗಿ ಚಿಕಿತ್ಸೆ ನೀಡಲಾಗುವುದೆಂದು ತಿಳಿಸಿದರು. ಇದೇ ವೇಳೆ ಮೊಟ್ಟ ಮೊದಲ ಬಾರಿಗೆ ಐವಾಸ್ ಚಿಕಿತ್ಸೆ ಪಡೆದ ಭಾಲ್ಕಿ ತಾಲೂಕಿನ ನರಸಿಂಗರಾವ್ ಅವರು ಭಾವುಕರಾಗಿ ತಮ್ಮ ಅನುಭವ ಹಂಚಿಕೊಂಡರು. ಗುದಗೆ ಆಸ್ಪತ್ರೆಗೆ ಬಾರದಿದ್ದರೆ ನಾನು ಬದುಕುಳಿಯುತ್ತಿರಲಿಲ್ಲವೆಂದು ತಮ್ಮ ಅಭಿಪ್ರಾಯ ತಿಳಿಸಿದರು.
ಆರಂಭದಲ್ಲಿ ಗುದಗೆ ಸೂಪರ್ ಸ್ಪೆಷಾಲಿಟಿ ಮತ್ತು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿದೇಶಕ ಡಾ.ಚಂದ್ರಕಾಂತ ಗುದಗೆ ಅವರು ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಆಸ್ಪತ್ರೆಯ ವ್ಯವಸ್ಥಾಪಕ ಶ್ರೀಕಾಂತ ಸ್ವಾಮಿ ಸೋಲಪುರ ಕಾರ್ಯಕ್ರಮ ನಿರೂಪಿಸಿ, ಡಾ.ಮಹೇಶ ತೊಂಡಾರೆ ವಂದಿಸಿದರು.