ಕ್ಷೌರಿಕ ಸಮಾಜಕ್ಕೆ ಅಪಮಾನ: ಸಚಿವ ಸ್ಥಾನದಿಂದ ವಜಾಗೊಳಿಸಲು ಆಗ್ರಹ

ಬೀದರ್,ಏ.4- ಪಶು ಸಂಗೋಪನ ಮತ್ತು ಪ್ರಭು ಚವ್ಹಾಣ್ ಅವರು ಇತ್ತಿಚೀಗೆ ಬಸವಕಲ್ಯಾಣ ವಿಧಾನಸಭೆಯ ಉಪಚುನಾವಣೆ ಪ್ರಚಾರ ಕಾರ್ಯಕ್ರಮದ ವೇದಿಕೆಯಲ್ಲಿ ಮಾತನಾಡಿದ ಸಚಿವರು, ಕ್ಷೌರೀಕ ವೃತ್ತಿಯ ಬಗ್ಗೆ ಅಪಹಾಸ್ಯ ಮಾಡಿ ನಮ್ಮ ಸಮಾಜದ ಜನತೆಯ ಮನ ನೋಯಿಸಿದ್ದಾರೆ ಮತ್ತು ಅಪಮಾನ ಮಾಡಿದ್ದಾರೆ. ಹೀಗಾಗಿ ತಕ್ಷಣವೇ ಪ್ರಭು ಚವ್ಹಾಣ್ ಅವರನ್ನು ಸಚಿವ ಸಂಪುಟದಿಂದ ತೆಗೆದುಹಾಕಬೇಕು ಮತ್ತು ಸಚಿವರು ಸಾರ್ವಜನಿಕವಾಗಿ ಸವಿತಾ ಸಮಾಜದ ಬಾಂಧವರಿಗೆ ಕ್ಷೇಮೆ ಕೇಳಿಸುವಂತೆ ಸೂಚಿಸಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕಂದು ಬೀದರ ಜಿಲ್ಲಾ ಸವಿತಾ ನಾವ್ಹಿ ಸಮಾಜವು ಒತ್ತಾಯಿಸಿದೆ.
ಬೀದರ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಬರೆದ ಮನವಿ ಪತ್ರದಲ್ಲಿ ಸಂಘ ಆಗ್ರಹಿಸಿದೆ.
ಸಮಾಜದಲ್ಲಿ ಸಾಮರಸ್ಯಕ್ಕೆ ಧಕ್ಕೆ ಉಂಟಾಗದಂತೆ ಸರ್ವಜನಾಂಗಗಳನ್ನು ಪ್ರೀತಿ ಗೌರವದಿಂದ ಕಾಣುವ ತಮ್ಮ ಸವಿತಾ ಸಮಾಜ ಸೇವಾ ಮನೋಭಾವದಿಂದ ಕ್ಷೌರಿಕ ವೃತ್ತಿಯನ್ನು ನಿರ್ವಹಿಸುತ್ತಾ ಗೌರವಪೂರಕವಾಗಿ ದುಡಿಮೆಯೊಂದಿಗೆ ತಮ್ಮ ಬದುಕು ಕಟ್ಟಿಕೊಳ್ಳಲು ನಿರಂತರವಾಗಿ ಶ್ರಮಿಸುವ ತಮ್ಮ ಸಮಾಜಕ್ಕೆ ಪ್ರಭು ಚವ್ಹಾಣರ ಅವಮಾನಕರ ಮಾತಿನಿಂದ ತುಂಬಾ ನೋವುಂಟಾಗಿದ್ದು ಮತ್ತು ಅಘಾತ ಉಂಟಾಗಿದೆ.
ಸವಿತಾ ಸಮಾಜದ ನಿಯೋಗದಲ್ಲಿ ಜಿಲ್ಲಾಧ್ಯಕ್ಷ ಉಮೇಶ ಗೊಂದೆಗಾಂವಕರ್, ಉಪಾಧ್ಯಕ್ಷ ನಾಗರಾಜ ಆರ್ಯ, ಪ್ರಧಾನಕಾರ್ಯದರ್ಶಿ ಅಂಬಾದಾಸ ಕೆ. ಡೊಂಗರಗಿಕರ್, ರಾಕೇಶ ಚೌದರಿ, ಪ್ರಕಾಶ ಹೊಕ್ರಾಣ, ಸಂಜು ಮೋರಗಿಕರ್, ಸಂಗಪ್ಪಾ ಗೊಂದೆಗಾಂವ, ಪ್ರಭು ತರನಳ್ಳಿ, ಶರಣಪ್ಪಾ ಹಡಪದ್ ಮತ್ತು ಸಮಾಜದ ಗಣ್ಯರು ಉಪಸ್ಥಿತರಿದ್ದರು.