ಕ್ಷೌರಿಕ ವೃತ್ತಿ ಬಗ್ಗೆ ಕೀಳು ಮಾತು ‘ಪ್ರಭು’ ವಿರುದ್ಧ ಕ್ರಮಕ್ಕೆ ಸವಿತಾ ಸಮಾಜ ಆಗ್ರಹ

ಯಾದಗಿರಿ: ಬಸವಕಲ್ಯಾಣದ ಬಹಿರಂಗ ಸಭೆಯಲ್ಲಿ ಸವಿತಾ ಸಮಾಜದ ಬಗ್ಗೆ ದಾಡಿ ಬನಾಯೇಂಗೆ ಕ್ಯಾ, ಶೇವಿಂಗ್ ಬನಾಯೇಂಗೆ ಕ್ಯಾ ಎಂದು ಕೀಳಾಗಿ ಮಾತನಾಡಿರುವ ಸಚಿವ ಪ್ರಭು ಚವ್ಹಾಣ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಸವಿತಾ ಸಮಾಜ ಆಗ್ರಹಿಸಿದೆ.
ಈ ಕುರಿತು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಕ್ಷೌರಿಕ ವೃತ್ತಿ ಬಗ್ಗೆ ಅಪಹಾಸ್ಯ ಮಾಡಿದ ಘನ ಸರ್ಕಾರದ ಸಚಿವ ಪ್ರಭು ಚವ್ಹಾಣ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಒತ್ತಯಿಸಿದರು. ಕೂಡಲೇ ಕ್ರಮ ಕೈಗೊಳ್ಳದಿದ್ದಲ್ಲಿ ಹಂತ ಹಂತವಾಗಿ ಉಗ್ರ ಹೊರಾಟ ರೂಪಿಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ಜಿಲ್ಲಾದ್ಯಕ್ಷ ಅಪ್ಪಣ್ಣ ಚಿನ್ನಾಕರ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಜಿಲ್ಲಾ ಪ್ರತಿನಿದಿ ಮಲ್ಲಣ್ಣ ವಡಿಗೇರಿ, ಉಪಾಧ್ಯಕ್ಷ ಅಂಬಣ್ಣ ಹೋರುಂಚ, ತಾಲ್ಲೂಕು ಅದ್ಯಕ್ಷ ನಾಗಪ್ಪ ಹತ್ತಿಕುಣಿ, ಮಾಜಿ ಅದ್ಯಕ್ಷ ಬನ್ನಪ್ಪ ಕೀಲಣಕೇರಿ ಹಣಮಂತ ಗೌಡಗೇರಿ, ಖಜಾಂಚಿ ಶ್ರೀನಿವಾಸ ಕಲ್ಮನಿ, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಮಲ್ಹಾರ, ರಾಘು ಇಂಗಳಿಗಿ ಇತರರ ಭಾಗವಹಿಸಿದರು.