ಕ್ಷೌರಿಕ ಕುಟುಂಬಕ್ಕೆ 10 ಸಾವಿರ ರೂ.ಗಳ ಧನ ಸಹಾಯ ಮಾಡುವಂತೆ ರಾಜ್ಯ ಸರಕಾರಕ್ಕೆ ಮನವಿ

ಕಲಬುರಗಿ:ಎ.28: ಹಡಪದ (ಕ್ಷೌರಿಕ) ಸಮಾಜದ ಜನರು ದಿನನಿತ್ಯ ತಮ್ಮ ಕುಲ ಕಸುಬು ಕ್ಷೌರ ವೃತ್ತಿಯನ್ನು ಲಾಕ್‍ಡೌನ್ ನಿಮಿತ್ಯವಾಗಿ ಕ್ಷೌರದ ಅಂಗಡಿಗಳನ್ನು ಬಂದ ಮಾಡಿದರೆ ಹಡಪದ ಕುಟುಂಬಗಳಿಗೆ ಜೀವನ ನಡೆಸುವುದು ತುಂಬಾ ಕಷ್ಠಕರವಾಗುತ್ತದೆ ಆದ್ದರಿಂದ ರಾಜ್ಯ ಸರಕಾರವು ಕ್ಷೌರಿಕ ಕುಟುಂಬಕ್ಕೆ 10 ಸಾವಿರ ರೂ.ಗಳ ಧನ ಸಹಾಯವನ್ನು ಮಾಡಬೇಕೆಂದು ಹಡಪದ ಸಮಾಜದ ಕಲಬುರಗಿ ಜಿಲ್ಲಾ ಯೂತ್ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಿ. ಹಡಪದ ಅವರು ರಾಜ್ಯ ಸರಕಾರಕ್ಕೆ ಪತ್ರಿಕಾ ಪ್ರಕಟಣೆಯ ಮೂಲಕ ಮನವಿ ಮಾಡಿದ್ದಾರೆ.

ಲಾಕ್‍ಡೌನ್ ಎಲ್ಲದಕ್ಕೂ ಪರಿಹಾರವಲ್ಲಿ ಇದರಿಂದ ದುಡಿಯುವ ವರ್ಗಕ್ಕೆ ತೊಂದರೆಯಾಗುತ್ತದೆ. ದಿನನಿತ್ಯ ದುಡಿಮೆ ಮಾಡಿ ಜೀವನದ ಬಂಡಿಯನ್ನು ಸಾಗಿಸುತ್ತಿರುವವರಿಗೆ ಒಂದೊತ್ತಿನ ಊಟಕ್ಕೂ ಪರದಾಡುವಂತಾಗುತ್ತದೆ. ಪ್ರಸ್ತುತ ವರ್ಷದಲ್ಲಿ ರೈತರು ಬೆಳೆದ ಬೆಳೆಯೂ ಮಳೆಯಿಂದ ನಷ್ಟವಾಗಿದ್ದೆ. ಆದ್ದರಿಂದ ಬಡ ಕುಟುಂಬಗಳಿಗೆ ರಾಜ್ಯ ಸರಕಾರ ಧನ ಸಹಾಯವನ್ನು ಮಾಡಬೇಕೆಂದು ಮನವಿ ಮಾಡಿದರು.