ಕ್ಷೌರಿಕರ ಕುರಿತು ಹಗುರದ ಮಾತು ಬೇಡ: ತಿಪ್ಪಣ್ಣ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮೇ.30: ಕ್ಷೌರಿಕ ಸಮಾಜದ ಬಗ್ಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಹಗುರವಾಗಿ ಮಾತನಾಡುವುದು ಬೇಡ ಎಂದು ಕರ್ನಾಟಕ ರಾಜ್ಯ ಸವಿತಾ ಸಮಾಜ ನಿರ್ದೇಶಕ
 ಯಾಳ್ಪಿ  ಹೆಚ್ ತಿಪ್ಪಣ್ಣ ಹೇಳಿದ್ದಾರೆ.
ಅವರು ಈ ಕುರಿತು ಪತ್ರಿಕಾ ಹೇಳಿಕೆ ನೀಡಿ,  ಶಿಕ್ಷಣ ಪರಿಶುಭ್ರತೆಗೆ ಕಪ್ಪು ಚುಕ್ಕೆ ಸಂಕೇತಿಸುವ ವಿಕೃತಿಯನ್ನು ಅಳವಡಿಸಿಕೊಂಡಂತಿದ್ದಾರೆ  ಶಿಕ್ಷಣ ಸಚಿವ ಮಧು ಬಂಗಾರಪ್ಪ
ಅವರ ‘ಮುಖಕ್ಕೆ ಕನ್ನಡಿ ಹಿಡಿದು ತಿಳಿಹೇಳಿದ’ ಬಿಜೆಪಿಯ  ರಾಜ್ಯಾಧ್ಯಕ್ಷ  ಬಿ.ವೈ. ವಿಜಯೇಂದ್ರ ಅವರ ಸಲಹೆಯನ್ನು ಸಕಾರಾತ್ಮಕವಾಗಿ ಸ್ವೀಕರಿಸುವ ಬದಲು ವಿಚಲಿತಗೊಂಡಂತೆ ಪ್ರತಿಕ್ರಿಯಿಸಿರುವ ಶಿಕ್ಷಣ ಸಚಿವರು “ಹೇರ್ ಕಟ್ ಮಾಡೋರು ಬಿಜಿ ಇದ್ದಾರೆ” ಎಂದು ಹೇಳುವ ಮೂಲಕ ಸಂಕಷ್ಟಿತ ಶ್ರಮಿಕ ಜೀವಿಗಳಾದ ‘ಕ್ಷೌರಿಕ ವೃತ್ತಿಶೀಲ’ರ ಕುರಿತು ಹಗುರವಾಗಿ ಮಾತನಾಡಿದ್ದಾರೆ. ಮಧು ಬಂಗಾರಪ್ಪ ಅವರು ಕೇಶಾಲಂಕಾರ ಮಾಡಿಕೊಳ್ಳದಿದ್ದರೂ ಪರವಾಗಿಲ್ಲ. ‘ಹೆಂಡದ ಮಾರಯ್ಯ’ವೃತ್ತಿ ತ್ಯಜಿಸಿ ‘ಶರಣಶ್ರೇಷ್ಠ’ನಾಗಲು ಪ್ರಭಾವ ಬೀರಿದ ಅಣ್ಣ ಬಸವಣ್ಣನವರ ಬಲಗೈಯಂತಿದ್ದ ಹಡಪದ ಅಪ್ಪಣ್ಣನ ಸಮಾಜವು ಸೇರಿದಂತೆ ಇತರ ವೃತ್ತಿನಿರತ ಕಾಯಕ ಸಮುದಾಯಗಳನ್ನು ಗೌರವದಿಂದ ಕಾಣುವ ಸಂಸ್ಕಾರ ಬೆಳೆಸಿಕೊಳ್ಳಲಿ.
ನಮ್ಮ ಕ್ಷೌರಿಕ ವೃತ್ತಿ ಸವಿತಾ ಸಮಾಜ ದಿನನಿತ್ಯ ಜೀವನದಲ್ಲಿ ಪ್ರತಿಯೊಬ್ಬರಿಗೆ ಬೇಕಾಗಿರುತ್ತದೆ. ಅದರಲ್ಲಿಯೂ ದಿನನಿತ್ಯ ಯಾವುದೇ  ವ್ಯಕ್ತಿಯಿಂದ ನಮ್ಮ ಕ್ಷೌರಿಕ ವೃತ್ತಿಯನ್ನು ಅವ ಹೇಳನ ಮಾತುಗಳು ತಪ್ಪುತಿಲ್ಲ ಇದರ ಬಗ್ಗೆ ಸರ್ಕಾರ ಗಮನಹರಿಸಬೇಕು.  ನಾವು ಅವರ ಹೇಳಿಕೆಯನ್ನು  ಖಂಡಿಸಿದ ಮೇಲೆ ಕ್ಷಮೆ ಕೇಳುತ್ತಾರೆ.  ಇನ್ನು ಮುಂದೆ ನಮ್ಮ ಸಮಾಜದ ಬಗ್ಗೆ ಅವಹೇಳನಕಾರಯಾಗಿ ಮಾತನಾಡಿದರೆ ಕಾನೂನುಸಾರವಾಗಿ ಅವರಿಗೆ ದಂಡ ವಿಧಿಸಬೇಕು ಇಲ್ಲ ಶಿಕ್ಷೆ ವಿಧಿಸಬೇಕು ಎಂದಿದ್ದಾರೆ.

One attachment • Scanned by Gmail