ಕ್ಷೇತ್ರ : ೭ ಜನ ಕೋವಿಡ್ ಮತದಾರರು

ರಾಯಚೂರು.ಏ.೧೭.ಮಸ್ಕಿ ವಿಧಾನಸಭೆ ಉಪಚುನಾವಣೆ ಕ್ಷೇತ್ರದಲ್ಲಿ ಒಟ್ಟು ೭ ಜನ ಕೋವಿಡ್ ಸೋಂಕಿತರಿದ್ದು, ಸಂಜೆ ೬ರ ನಂತರ ಮತದಾನ ಮಾಡಲು ಎಲ್ಲರಿಗೂ ಮಾಹಿತಿ ನೀಡಲಾಗಿದ್ದು ಮತಗಟ್ಟೆ ಸಿಬ್ಬಂದಿಗೆ ಪಿಪಿಇ ಕಿಟ್ ಒದಗಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ್ ಹೇಳಿದರು.
ಅವರಿಂದು ಮಸ್ಕಿ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಗೆ ಭೇಟಿ ನೀಡಿ ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ
ಅಣಕು ಮತದಾನದ ವೇಳೆ ಐದು ಕಡೆಗಳಲ್ಲಿ ಮತಯಂತ್ರ, ವಿವಿಪ್ಯಾಟ್ ಗಳಲ್ಲಿ ದೋಷ ಕಾಣಿಸಿತ್ತು. ಕೂಡಲೇ ಮತಯಂತ್ರ ಹಾಗೂ ವಿವಿ ಪ್ಯಾಟ್ ಬದಲಿಸಿದ ನಂತರ ಮತದಾನ ಆರಂಭಿಸಲಾಗಿದೆ.
ಕ್ಷೇತ್ರದಾದ್ಯಂತ ಶಾಂತಿಯುತ ಮತದಾನ ನಡೆಯುತ್ತಿದ್ದು ಮತಗಟ್ಟೆಯಲ್ಲಿ ಪೊಲೀಸ್ ಇಲಾಖೆ,೨
ಸಿಆರ್ ಪಿ ಎಸ್ ಮತ್ತು ೪ ಕೆ ಎಸ್ ಆರ್ ಪಿ ಎಫ್ ತಂಡಗಳನ್ನು ನೇಮಿಸಲಾಗಿದೆ,ಕ್ಷೇತ್ರದಲ್ಲಿ ಒಟ್ಟು ೭ ಜನ ಕೋವಿಡ್ ಸೋಂಕಿತರಿದ್ದು, ಸಂಜೆ ೬ರ ನಂತರ ಮತದಾನ ಮಾಡಲು ಎಲ್ಲರಿಗೂ ಮಾಹಿತಿ ನೀಡಲಾಗಿದ್ದು ಮತಗಟ್ಟೆ ಸಿಬ್ಬಂದಿಗೆ ಪಿಪಿಇ ಕಿಟ್ ಒದಗಿಸಲಾಗಿದೆ ಎಂದು ಹೇಳಿದರು.