ಕ್ಷೇತ್ರ ಮುರಗೋಡಕ್ಕೆ ಭಕ್ತರ ಪಾದಯಾತ್ರೆ

ವಿಜಯಪುರ:ನ.24: ಶ್ರೀ ಕ್ಷೇತ್ರ ಕೆಂಗೆರಿ ಮುರಗೋಡದಲ್ಲಿ ಪ್ರತಿ ವಾರ್ಷಿಕ ಸರ್ವೇಶ್ವರ ಅವತಾರ ಶ್ರೀ ಶಿವ ಚಿದಂಬರ ಮಹಾಸ್ವಾಮಿಗಳ 264ನೇ ಅವತಾರ ಜಯಂತಿ ಶೈವಾಗಮೋಕ್ತ ಮಹೋತ್ಸವವು ಇದೇ ಶ್ರೀ ಸಾಲಿವಾಹನ ಶಕೆ 1944 ಶುಭಕೃತ್ ನಾಮ ಸಂವತ್ಸರ ಮಧ್ಯೆ ಷಷ್ಠಿ ಮಂಗಳವಾರ ದಿನಾಂಕ 29 -11- 2022 ರಂದು ಶ್ರೀ ಚಿದಂಬರೇಶ್ವರ ಕಲ್ಯಾಣೋತ್ಸವ ವೈಭವದಿಂದ ಜರುಗಲಿದೆ. ತನ್ನನಿಮಿತ್ಯವಾಗಿ ಉತ್ಸವದಲ್ಲಿ ಭಾಗಿಯಾಗಲು ಪ್ರತಿವರ್ಷದಂತೆ ಈ ವಷವು ವಿಜಯಪುರ ಚಿದಂಬರ ದೇವಸ್ಥಾನದಿಂದ ಶ್ರೀ ಕ್ಷೇತ್ರ ಮುರಗೋಡಕ್ಕೆ ಪಾದಯಾತ್ರೆ ಹಮ್ಮಿಕೊಂಡಿದೆ.
ವಿಜಯಪುರದಿಂದ ಆರಂಭಗೊಂಡ ಪಾದಯಾತ್ರೆಯು ವಿಜಯಪುರ, ಹಲಗಣಿ, ಮುದೋಳ, ಯರಗಟ್ಟಿ, ಹಲಕಿಕ್ರಾಸ್ ಮೂಲಕ ಕ್ಷೇತ್ರ ಕೆಂಗೆರಿಗೆ 28-11-2022 ರಂದು ಪಾದಯಾತ್ರೆಯು ತಲುಪಲಿದೆ.
ಇದೇ ಸಂದರ್ಭದಲ್ಲಿ ಸಂಚಾಲಕರಾದ ರಾಘವೇಂದ್ರ ಜೋಶಿ, ಸಹ ಸಂಚಾಲಕರಾದ ಸುಧೀಂದ್ರ ಕುಲಕರ್ಣಿ, ವೆಂಕಟೇಶ ಜೋಶಿ, ವೇದಮೂರ್ತಿ ಸಚಿನ ಆಚಾರ್ಯ, ಪ್ರಾಣೇಶ ಅಗ್ನಿಹೋತ್ರಿ, ಕೃಷ್ಣಾ ಜೋಶಿ, ಶೇಷಗಿರಿ, ಚಿದಂಬರ ಜೋಶಿ ರೊಳ್ಳಿ, ವೆಂಕಟೇಶ ಜೋಶಿ ನಂದವಾಡಗಿ, ವಿಜಯ ಜೋಶಿ, ಪದ್ಮನಾಬ ಜೋಶಿ, ಸಂದೀಪ ಕುಲಕರ್ಣಿ, ಸಂದೀಪ ಕುಲಕರ್ಣಿ ಬರಡೋಲ, ಸಂಜು ಕುಲಕರ್ಣಿ ಬರಡೋಲ, ವೆಂಕಟೇಶ ಕುಲಕರ್ಣಿ ಸೇರಿದಂತೆ ಇನ್ನಿತರ ಭಕ್ತಾದಿಗಳು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.